ಗ್ರಾಮ ಪಂಚಾಯತ್ ಸದಸ್ಯರಿಗೇ ಯಾಮಾರಿಸಿದ ವಿದ್ಯುತ್ ಚಾಲಿತ ದ್ವಿಚಕ್ರ ವಾಹನ ಕಂಪೆನಿ - Karavali Times ಗ್ರಾಮ ಪಂಚಾಯತ್ ಸದಸ್ಯರಿಗೇ ಯಾಮಾರಿಸಿದ ವಿದ್ಯುತ್ ಚಾಲಿತ ದ್ವಿಚಕ್ರ ವಾಹನ ಕಂಪೆನಿ - Karavali Times

728x90

2 August 2023

ಗ್ರಾಮ ಪಂಚಾಯತ್ ಸದಸ್ಯರಿಗೇ ಯಾಮಾರಿಸಿದ ವಿದ್ಯುತ್ ಚಾಲಿತ ದ್ವಿಚಕ್ರ ವಾಹನ ಕಂಪೆನಿ

ಖರೀದಿಸಿದ ಮರುದಿನವೇ ಸಮಸ್ಯೆ ಆರಂಭ : ನಾಲ್ಕು ತಿಂಗಳಾದರೂ ಸ್ಪಂದಿಸದ ಕಂಪೆನಿ, ಕೋರ್ಟ್ ಮೆಟ್ಟಿಲೇರುವ ಸಿದ್ದತೆಯಲ್ಲಿ ಪ್ರಕಾಶ್ ಕೋಡಿಮಜಲು 


ಬಂಟ್ವಾಳ, ಆಗಸ್ಟ್ 02, 2023 (ಕರಾವಳಿ ಟೈಮ್ಸ್) : ತಾಲೂಕಿನ ನರಿಕೊಂಬು ಗ್ರಾಮ ಪಂಚಾಯತ್ ಸದಸ್ಯರಿಗೇ ವಿದ್ಯುತ್ ಚಾಲಿತ ದ್ವಿಚಕ್ರ ವಾಹನ ಕಂಪೆನಿಯೊAದು ಏಮಾರಿಸಿದ ಘಟನೆ ಬೆಳಕಿಗೆ ಬಂದಿದ್ದು, ಇದೀಗ ಪಂಚಾಯತ್ ಸದಸ್ಯ ಕಂಪೆನಿ ವಿರುದ್ದ ನ್ಯಾಯಾಲಯ ಮೆಟ್ಟಿಲೇರಲು ಸಿದ್ದತೆ ನಡೆಸಿದ್ದಾರೆ. 


ವಿದ್ಯುತ್ ಚಾಲಿತ ಕಂಪೆನಿಯ ಬ್ರಾವೋ ದ್ವಿಚಕ್ರ ವಾಹನದ ಜಾಹೀರಾತಿಗೆ ಮನಸೋತ ನರಿಕೊಂಬು ಗ್ರಾ ಪಂ ಸದಸ್ಯ ಪ್ರಕಾಶ್ ಕೋಡಿಮಜಲು ಅವರು ಕಳೆದ ನಾಲ್ಕು ತಿಂಗಳ ಹಿಂದೆ ದ್ವಿಚಕ್ರ ವಾಹನವನ್ನು ಖರೀದಿಸಿದ್ದಾರೆ. ಕಂಪೆನಿಯ ಕಲ್ಲಡ್ಕ ಏಜೆನ್ಸಿಯಾಗಿರುವ ವೃಷಭ ಡೀಲರಿನಿಂದ 1.27 ಲಕ್ಷ ಮೊತ್ತಕ್ಕೆ ವ್ಯವಹಾರ ಕುದುರಿಸಿ ವಾಹನ ಖರೀದಿಸಿದ್ದು, ಖರೀದಿ ಸಂದರ್ಭ ಕಂಪೆನಿಗೆ ಸೇರಿದವರು ಸುಮಾರು 5 ಗಂಟೆ ವಿದ್ಯುತ್ ಚಾರ್ಜ್ ಮಾಡಿದರೆ 120 ಕಿ ಮೀ ದೂರ ಓಡಿಸಬಹುದು ಎಂಬ ಭರವಸೆ ನೀಡಲಾಗಿತ್ತು. ಆದರೆ ವಾಹನ ಖರೀದಿಸಿದ ಮಾರನೇ ದಿನವೇ ಸಮಸ್ಯೆ ತಲೆದೋರಿದೆ ಎನ್ನುವ ಪ್ರಕಾಶ್ ಕೋಡಿಮಜಲು ಬಳಿಕ 15 ಕಿಮೀ ಸಂಚರಿಸುವಷ್ಟರಲ್ಲೇ ವಾಹನ ಹಠಾತ್ ಬಂದ್ ಬಿದ್ದಿದೆ. ಅಲ್ಲದೆ ಈ ವಾಹನದಲ್ಲಿ ಗರಿಷ್ಠ ಅಂದರೆ 30-40 ಕಿಮೀ ಗಿಂತ ಜಾಸ್ತಿ ಸಂಚಾರ ಸಾಧ್ಯವಾಗಿದ್ದೇ ಇಲ್ಲ. ಈ ಬಗ್ಗೆ ಕಂಪೆನಿಗೆ ಹಾಗೂ ಡೀಲರಿಗೆ ಸಾಕಷ್ಟು ಬಾರಿ ದೂರಿಕೊಂಡರೂ ಯಾವುದೇ ಸ್ಪಂದನೆ ಇಲ್ಲದ ಪರಿಣಾಮ ವಾಹನ ಖರೀದಿಸಿ 10 ದಿನದಲ್ಲೇ ವಾಹನವನ್ನು ಕಲ್ಲಡ್ಕದ ಡೀಲರ್ ಶೋರೂಮಿಗೆ ಒಪ್ಪಿಸಿ ಸರಿ ಮಾಡುವಂತೆ ನೀಡಲಾಗಿದೆ. ಅದೇ ದಿನ ಕಂಪೆನಿಯ ಮಂಗಳೂರು ಡೀಲರ್ ಪದ್ಮರಾಜ್ ಅವರಿಗೂ ಕರೆ ಮಾಡಿ ಸಮಸ್ಯೆ ಹೇಳಿಕೊಂಡರೆ ಇದುವರೆಗೂ ಯಾವುದೇ ಸ್ಪಂದನೆ ಇರುವುದಿಲ್ಲ ಎಂದು ದೂರಿದ್ದಾರೆ.

ಇದೀಗ ಸಾಲ ಮಾಡಿ ಖರೀದಿಸಿದ ವಾಹನ ಸಮಸ್ಯೆಯಿಂದಾಗಿ ಡೀಲರ್ ಶೋರೂಮಿಗೆ ಒಪ್ಪಿಸಿ ತಿಂಗಳು 2 ಕಳೆದರೂ ಇದುವರೆಗೂ ಡೀಲರಿನಿಂದಾಗಲೀ, ಕಂಪೆನಿಯಿAದಾಗಲೀ ಯಾವುದೇ ಕನಿಷ್ಠ ಸ್ಪಂದನೆಯೂ ದೊರೆತಿಲ್ಲ ಎನ್ನುವ ಪ್ರಕಾಶ್ ಕೋಡಿಮಜಲು ಜಾಹೀರಾತಿನಿಂದ ಕಂಪೆನಿಗಳ ಬಣ್ಣದ ಮಾತುಗಳಿಗೆ ಮಾರುಹೋಗುವ ಮುನ್ನ ಗ್ರಾಹಕರು ಎಚ್ಚೆತುಕೊಳ್ಳಬೇಕು ಎಂದಿರು ಗ್ರಾ ಪಂ ಸದಸ್ಯ ಪ್ರಕಾಶ್ ಅವರು ಕಂಪೆನಿ ತಕ್ಷಣ ತನ್ನ ವಾಹನದ ಬಗ್ಗೆ ಸೂಕ್ತ ಸ್ಪಂದನೆ ಮಾಡದಿದ್ದಲ್ಲಿ ನ್ಯಾಯಾಲಯದ ಮೆಟ್ಟಿಲೇರುವುದಾಗಿ ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಗ್ರಾಮ ಪಂಚಾಯತ್ ಸದಸ್ಯರಿಗೇ ಯಾಮಾರಿಸಿದ ವಿದ್ಯುತ್ ಚಾಲಿತ ದ್ವಿಚಕ್ರ ವಾಹನ ಕಂಪೆನಿ Rating: 5 Reviewed By: karavali Times
Scroll to Top