ಮೆಲ್ಕಾರಿನಲ್ಲಿ ಡಾಮರೀಕರಣದ ನೆಪದಲ್ಲಿ ರಸ್ತೆ ಮಧ್ಯೆ ಲಾರಿ, ರೋಡ್ ರೋಲರ್ ನಿಲ್ಲಿಸಿ ಸಂಚಾರಕ್ಕೆ ಅಡಚಣೆ : ಕಂಟ್ರಾಕ್ಟರ್ ವಿರುದ್ದ ಬಂಟ್ವಾಳ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲು - Karavali Times ಮೆಲ್ಕಾರಿನಲ್ಲಿ ಡಾಮರೀಕರಣದ ನೆಪದಲ್ಲಿ ರಸ್ತೆ ಮಧ್ಯೆ ಲಾರಿ, ರೋಡ್ ರೋಲರ್ ನಿಲ್ಲಿಸಿ ಸಂಚಾರಕ್ಕೆ ಅಡಚಣೆ : ಕಂಟ್ರಾಕ್ಟರ್ ವಿರುದ್ದ ಬಂಟ್ವಾಳ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲು - Karavali Times

728x90

28 August 2023

ಮೆಲ್ಕಾರಿನಲ್ಲಿ ಡಾಮರೀಕರಣದ ನೆಪದಲ್ಲಿ ರಸ್ತೆ ಮಧ್ಯೆ ಲಾರಿ, ರೋಡ್ ರೋಲರ್ ನಿಲ್ಲಿಸಿ ಸಂಚಾರಕ್ಕೆ ಅಡಚಣೆ : ಕಂಟ್ರಾಕ್ಟರ್ ವಿರುದ್ದ ಬಂಟ್ವಾಳ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲು

ಬಂಟ್ವಾಳ, ಆಗಸ್ಟ್ 28, 2023 (ಕರಾವಳಿ ಟೈಮ್ಸ್) : ಮೆಲ್ಕಾರಿನಲ್ಲಿ ರಸ್ತೆಯ ಮಧ್ಯೆ ಲಾರಿಗಳನ್ನು ಹಾಗೂ ರೋಡ್ ರೋಲರ್ ವಾಹನಗಳನ್ನು ನಿಲ್ಲಿಸಿ ರಸ್ತೆ ಡಾಮರೀಕರಣ ಮಾಡುವ ನೆಪದಲ್ಲಿ ಹೆದ್ದಾರಿ ಸುಗಮ ಸಂಚಾರಕ್ಕೆ ಅಡ್ಡಿಪಡಿಸಿದ ಬಗ್ಗೆ ಕಂಟ್ರಾಕ್ಟರ್ ವಿರುದ್ದ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ. 

ಮಂಗಳವಾರ ಮಧ್ಯಾಹ್ನ ಪಾಣೆಮಂಗಳೂರು ಗ್ರಾಮದ ಮೆಲ್ಕಾರ್ ಎಂಬಲ್ಲಿ ಲಾರಿಗಳನ್ನು ಮತ್ತು ರೋಡ್ ರೋಲರ್ ವಾಹನವನ್ನು ರಸ್ತೆಯ ಮಧ್ಯದಲ್ಲಿ ನಿಲ್ಲಿಸಿ, ರಸ್ತೆಯ ಡಾಂಬರಿಕರಣ ಮಾಡುವ  ನೆಪದಲ್ಲಿ  ಸಂಬಂದಪಟ್ಟ ರಸ್ತೆಯ ಕಾಂಟ್ರಕ್ಟರ್ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿಪಡಿಸಿರುವುದಲ್ಲದೆ, ರಸ್ತೆಯ ಡಾಂಬರಿಕರಣದ ಸಮಯ ಯಾವುದೇ ಸೂಚನಾ ಫಲಕಗಳನ್ನು ಅಳವಡಿಸದೇ, ಈ ಬಗ್ಗೆ ಪೆÇಲೀಸರಿಗೆ ಕೂಡಾ ಯಾವುದೇ ಮಾಹಿತಿ ನೀಡದೇ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿಪಡಿಸಿ, ವಾಹನ ದಟ್ಟಣೆಗೆ ಕಾರಣವಾಗಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಸಂಬಂಧಪಟ್ಟ ರಸ್ತೆ ಕಾಂಟ್ರಕ್ಟರ್ ವಿರುದ್ದ ಬಂಟ್ವಾಳ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 119/2023 ಕಲಂ 283 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಮೆಲ್ಕಾರಿನಲ್ಲಿ ಡಾಮರೀಕರಣದ ನೆಪದಲ್ಲಿ ರಸ್ತೆ ಮಧ್ಯೆ ಲಾರಿ, ರೋಡ್ ರೋಲರ್ ನಿಲ್ಲಿಸಿ ಸಂಚಾರಕ್ಕೆ ಅಡಚಣೆ : ಕಂಟ್ರಾಕ್ಟರ್ ವಿರುದ್ದ ಬಂಟ್ವಾಳ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲು Rating: 5 Reviewed By: karavali Times
Scroll to Top