ಬಂಟ್ವಾಳ, ಆಗಸ್ಟ್ 15, 2023 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಸಮೀಪದ ಬೋಗೋಡಿ-ಗುಡ್ಡೆಅಂಗಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೇಶದ 77ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.
ಸ್ಥಳೀಯ ಪುರಸಭಾ ಕೌನ್ಸಿಲರ್ ಅಬೂಬಕ್ಕರ್ ಸಿದ್ದೀಕ್ ಧ್ವಜಾರೋಹಣಗೈದು ಸಂದೇಶ ನೀಡಿದರು. ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಝಕರಿಯಾ, ಶಾಲಾ ಮುಖ್ಯೋಪಾಧ್ಯಾಯ ವೆಂಕಟರಾವ್, ಶಿಕ್ಷಕರಾದ ಲವೀನಾ, ವಿನ್ನಿಫ್ರೆಡ್, ಪ್ರತೀಕ್ಷಾ, ಪ್ರಮುಖರಾದ ಮುಸ್ತಫಾ ಗುಡ್ಡೆಅಂಗಡಿ, ಸಿದ್ದೀಕ್ ಬೋಗೋಡಿ, ವಾಲ್ವಿನ್ ಡಿಸೋಜ, ರಾಫಿದ್ ಬೋಗೋಡಿ, ಅಶ್ಫಾಕ್ ಬೋಗೋಡಿ, ನಿಝಾಂ ಬೋಗೋಡಿ, ವಹೀದಾ ಬೋಗೋಡಿ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment