ಬಂಟ್ವಾಳ ಶಾಸಕರ ಪುತ್ರನ ಪ್ರಗತಿಪರ ಚಿಂತನೆಯಿAದ ಮೂಡಿಬಂದ ತ್ಯಾಜ್ಯದಿಂದ ಗ್ಯಾಸ್ ಉತ್ಪಾದನಾ ಘಟಕದ ಉದ್ಘಾಟನೆಗೆ ಸಿದ್ದತೆ : ಜಿಲ್ಲೆಯಲ್ಲಿ ಮಿತಿ ಮೀರಿರುವ ತ್ಯಾಜ್ಯ ಸಮಸ್ಯೆಗೆ ಇದು ಮುಕ್ತಿಯಾಗಬಲ್ಲುದೇ? - Karavali Times ಬಂಟ್ವಾಳ ಶಾಸಕರ ಪುತ್ರನ ಪ್ರಗತಿಪರ ಚಿಂತನೆಯಿAದ ಮೂಡಿಬಂದ ತ್ಯಾಜ್ಯದಿಂದ ಗ್ಯಾಸ್ ಉತ್ಪಾದನಾ ಘಟಕದ ಉದ್ಘಾಟನೆಗೆ ಸಿದ್ದತೆ : ಜಿಲ್ಲೆಯಲ್ಲಿ ಮಿತಿ ಮೀರಿರುವ ತ್ಯಾಜ್ಯ ಸಮಸ್ಯೆಗೆ ಇದು ಮುಕ್ತಿಯಾಗಬಲ್ಲುದೇ? - Karavali Times

728x90

4 August 2023

ಬಂಟ್ವಾಳ ಶಾಸಕರ ಪುತ್ರನ ಪ್ರಗತಿಪರ ಚಿಂತನೆಯಿAದ ಮೂಡಿಬಂದ ತ್ಯಾಜ್ಯದಿಂದ ಗ್ಯಾಸ್ ಉತ್ಪಾದನಾ ಘಟಕದ ಉದ್ಘಾಟನೆಗೆ ಸಿದ್ದತೆ : ಜಿಲ್ಲೆಯಲ್ಲಿ ಮಿತಿ ಮೀರಿರುವ ತ್ಯಾಜ್ಯ ಸಮಸ್ಯೆಗೆ ಇದು ಮುಕ್ತಿಯಾಗಬಲ್ಲುದೇ?

ಬಂಟ್ವಾಳ, ಆಗಸ್ಟ್ 04, 2023 (ಕರಾವಳಿ ಟೈಮ್ಸ್) : ಬಂಟ್ವಾಳ ಶಾಸಕ ಯು ರಾಜೇಶ್ ನಾಯಕ್ ಅವರ ಪುತ್ರ ಉನ್ನತ್ ನಾಯಕ್ ಅವರ ಪ್ರಗತಿಪರ ಚಿಂತನೆಯಿAದ ತಮ್ಮದೇ ಜಮೀನಿನ ಅರ್ಧ ಎಕ್ರೆ ಸ್ಥಳದಲ್ಲಿ ಹಸಿ ತ್ಯಾಜ್ಯದಿಂದ ಅನಿಲ ಉತ್ಪಾದಿಸುವ ಘಟಕವನ್ನು ನಿರ್ಮಿಸಿದ್ದು, ಪೂರ್ಣ ಪ್ರಮಾಣದಲ್ಲಿ ಉದ್ಘಾಟನೆಗೆ ಸಜ್ಜಾಗಿ ನಿಂತಿದೆ. ಇಂದಿನ ದಿನಗಳಲ್ಲಿ ಸಮಾಜಕ್ಕೆ ಹಾಗೂ ಎಲ್ಲ ಸ್ಥಳೀಯಾಡಳಿತಗಳ ವಿಪರೀತ ಚಿಂತೆಗೆ ಕಾರಣವಾಗಿರುವ ಹಸಿ ತ್ಯಾಜ್ಯ ಸಮಸ್ಯೆಗೂ ಈ ಘಟಕದಿಂದ ಮುಕ್ತಿ ದೊರೆಯಬಹುದು ಎಂದು ನಿರೀಕ್ಷಿಸಲಾಗಿದೆ. ಸದ್ಯಕ್ಕೆ ತಮ್ಮ ಪರಿಸರಕ್ಕೆ ಹೊಂದಿಕೊAಡAತೆ ಮಂಗಳೂರು ತಾಲೂಕು ವ್ಯಾಪ್ತಿಯ ಕೆಲವೊಂದು ಗ್ರಾಮ ಪಂಚಾಯತ್ ಗಳಿಂದ ಹಾಗೂ ಹೋಟೆಲ್, ಕೋಳಿ ಅಂಗಡಿಗಳಿAದ ತ್ಯಾಜ್ಯ ಸಂಗ್ರಹಿಸಿ ಈ ಘಟಕದಲ್ಲಿ ಗ್ಯಾಸ್ ಉತ್ಪಾದನೆಗೆ ಬಳಸಲಾಗುತ್ತಿದ್ದು, ಮುಂದಿವರಿದು ಶಾಸಕರ ಸ್ವಕ್ಷೇತ್ರ ಬಂಟ್ವಾಳ ಪುರಸಭೆ ಹಾಗೂ ತಾಲೂಕಿನ ಪಂಚಾಯತ್ ಗಳಿಂದಲೂ ತ್ಯಾಜ್ಯಗಳನ್ನು ಸಂಗ್ರಹಿಸಿ ಅನಿಲ ಉತ್ಪಾದಿಸಿ ಗೃಹಬಳಕೆ, ವಾಣಿಜ್ಯ ಉದ್ದೇಶ ಹಾಗೂ ವಾಹನಗಳಿಗೂ ಬಳಸಿಕೊಳ್ಳುವ ಜೊತೆಗೆ ಇದರಿಂದ ಉತ್ಪತ್ತಿಯಾಗುವ ಗೊಬ್ಬರದ ಸತ್ವವನ್ನು ಹೊಂದಿರುವ ಗೊಬ್ಬರ ನೀರನ್ನು ರೈತರ ತೋಟಗಳಿಗೆ ಅವರ ತೋಟಗಳ ಮಣ್ಣಿನ ಸತ್ವಕ್ಕೆ ಹೊಂದಿಕೊAಡAತೆ ಪರಿವರ್ತಿಸಿ ನೀಡುವ ಉದ್ದೇಶವನ್ನೂ ಹೊಂದಲಾಗಿದೆ. 


ಜಿಲ್ಲೆಯಲ್ಲಿ ತ್ಯಾಜ್ಯ ದುರ್ವಾಸನೆ ದೊಡ್ಡ ರೀತಿಯ ಸಮಸ್ಯೆಯಾಗಿ ಎಲ್ಲೆ ಮೀರಿ ಹೋಗಿರುವ ಈ ಸಂದರ್ಭದಲ್ಲೇ ಇಂತಹ ಒಂದು ಘಟಕ ಶಾಸಕರ ಪುತ್ರನ ಯೋಚನೆಯಲ್ಲಿ ಮೂಡಿಬಂದಿದ್ದು, ತ್ಯಾಜ್ಯ ಸಮಸ್ಯೆ ನಿವಾರಣೆ ಬಗ್ಗೆ ಭಾರೀ ಭರವಸೆ ಉಂಟು ಮಾಡಿದೆ. 

ಕೊಳೆಯುವ ಹಸಿ ಕಸಗಳು ಹಾಗೂ ದ್ರವ ತ್ಯಾಜ್ಯವನ್ನು ಬಳಸಿ ಈ ಅನಿಲವನ್ನು ಉತ್ಪಾದಿಸುವ  ಸಿಎನ್‌ಜಿ (ಕಂಪ್ರೆಸ್ಡ್ ನ್ಯಾಚ್ಯರಲ್ ಗ್ಯಾಸ್) ಘಟಕವನ್ನು ಶಾಸಕ ರಾಜೇಶ್ ನಾಯಕ್ ಅವರ ಮನೆಯಾಗಿರುವ ಗುರುಪುರದ ಒಡ್ಡೂರು ಫಾರ್ಮ್ನಲ್ಲಿ ಸ್ಥಾಪಿಸಿ ಇನ್ನೇನು ಕೆಲವೇ ದಿನಗಳಲ್ಲಿ ಲೋಕಾರ್ಪಣೆಗೆ ಸಿದ್ದಗೊಂಡಿದೆ. ಒಡ್ಡೂರು ಎನರ್ಜಿ ರಿನಿವೇಬಲ್ ನ್ಯಾಚುರಲ್ ಗ್ಯಾಸ್ ಪ್ಲಾಂಟ್ ಎಂಬ ಹೆಸರಿನಲ್ಲಿ ಈ ಸಿಎನ್‌ಜಿ ಘಟಕ ಸ್ಥಾಪಿಸಲಾಗಿದೆ. ಪೂರ್ಣ ಪ್ರಮಾಣದ ಸುಸಜ್ಜಿತ ವ್ಯವಸ್ಥೆಗಳೊಂದಿಗೆ ಅತ್ಯಂತ ಸ್ವಚ್ಛವಾಗಿ ಪರಿಸರಕ್ಕೆ ಪೂರಕವಾಗಿ ಈ ಘಟಕವನ್ನು ನಿರ್ವಹಿಸಲಾಗುತ್ತಿದ್ದು, ಪೂರ್ಣ ಮೇಲುಸ್ತುವಾರಿಯನ್ನು ಶಾಸಕರ ಪುತ್ರ ಉನ್ನರ್ ಆರ್ ನಾಯಕ್ ಅವರೇ ವಹಿಸಿಕೊಂಡಿದ್ದು, ಬೆನ್ನ ಹಿಂದೆ ಬೇಕಾಗಿರುವ ಎಲ್ಲ ಬೆಂಬಲವನ್ನು ಶಾಸಕ ರಾಜೇಶ್ ನಾಯಕ್ ಒದಗಿಸುತ್ತಿದ್ದಾರೆ. ಘಟಕದ ನಿರ್ವಹಣೆಯನ್ನು ಪೂರ್ಣವಾಗಿ ರಿಟ್ಯಾಪ್ ಸೊಲ್ಯೂಷನ್ಸ್ ಎಂಬ ಕಂಪನಿಯೇ ನಿರ್ವಹಿಸುತ್ತಿದ್ದು, ಕಂಪೆನಿಯ 6 ಮಂದಿಯ ಜೊತೆಗೆ ತ್ಯಾಜ್ಯ ವಿಂಗಡಿಸಲು ಶಾಸಕರ ವತಿಯಿಂದ ಮೂರು ಮಂದಿ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಘಟಕ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭಗೊAಡ ಬಳಿಕ ಇನ್ನೂ ಕೆಲವು ಮಂದಿ ಸಿಬ್ಬಂದಿಗಳನ್ನು ತ್ಯಾಜ್ಯ ವಿಂಗಡನೆಯ ಉದ್ದೇಶಕ್ಕಾಗಿ ಬಳಸಿಕೊಂಡು ಘಟಕವನ್ನು ಮೌಲ್ಯಯುತವಾಗಿ ನಡೆ¸ಸಿಕೊಂಡು ಹೋಗುವ ಪ್ರಯತ್ನ ನಡೆಸಲಾಗುವುದು ಎಂದು ಶಾಸಕರು ಹಾಗೂ ಪುತ್ರ ಮಾಹಿತಿ ನೀಡಿದ್ದಾರೆ. 

ಇದೊಂದು ಸ್ವೀಡನ್ ಮಾದರಿಯ ಹೊಸ ಹಾಗೂ ವೈಜ್ಞಾನಿಕ ತಂತ್ರಜ್ಞಾನದಿAದ ಕೂಡಿ ಕಾರ್ಯನಿರ್ವಹಿಸುವ ಘಟಕವಾಗಿದೆ ಎಂದು ಉನ್ನತ್ ನಾಯಕ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಜಗತ್ತಿನ ವಿವಿಧ ರಾಷ್ಟçಗಳು ಬಳಸುವ ತಂತ್ರಜ್ಞಾನಗಳನ್ನು ಈ ಘಟಕದಲ್ಲಿ ಬಳಸಿಕೊಳ್ಳಲಾಗಿದೆಯಾದರೂ ಜಾಸ್ತಿಯಾಗಿ ಈ ಘಟಕ ನಿರ್ವಹಣೆಗೆ ಸ್ವೀಡನ್ ಮಾದರಿಯನ್ನು ಅಳವಡಿಸಿಕೊಳ್ಳಲಾಗಿದೆ ಎಂದವರು ಹೇಳಿಕೊಂಡಿದ್ದಾರೆ. 

ಘಟಕದಿಂದ ಅನಿಲ ಉತ್ಪಾದನೆಯಾಗಿ ಉಳಿದ ತ್ಯಾಜ್ಯ ವಸ್ತು ಹಾಗೂ ಗೊಬ್ಬರದ ನೀರು ಸದ್ಯಕ್ಕೆ ಶಾಸಕರು ಸ್ವತಃ ತಮ್ಮ ತೋಟಗಳಿಗೆ ಗೊಬ್ಬರದ ಬದಲಾಗಿ ಬಳಸುತ್ತಿದ್ದು, ಇದರಿಂದ ಗೊಬ್ಬರದ ಖರ್ಚೂ ಉಳಿಯಲಿದೆಯಲ್ಲದೆ. ತಮ್ಮ ವಾಣಿಜ್ಯ ಬಳಕೆಯ ಉದ್ದೇಶದ ವಾಹನಗಳಿಗೂ ಕೂಡಾ ಇದೇ ಘಟಕದಿಂದ ಉತ್ಪಾದನೆಯಾಗುವ ಗ್ಯಾಸನ್ನೇ ಬಳಸುವ ಮೂಲಕ ಡೀಸೆಲ್-ಪೆಟ್ರೋಲ್ ಖರ್ಚನ್ನೂ ಉಳಿತಾಯ ಮಾಡುವ ಪ್ರಯತ್ನ ನಡೆಸಲಾಗುವುದು ಎಂದು ಶಾಸಕ ರಾಜೇಶ್ ನಾಯಕ್ ಹೇಳುತ್ತಾರೆ. 

ತ್ಯಾಜ್ಯದ ಜೊತೆ ಮಿಶ್ರಣ ಮಾಡಲು 1 ಲಕ್ಷ ಲೀಟರ್ ನೀರಿನ ಅಗತ್ಯವಿದ್ದು ಅದಕ್ಕೂ ಕೂಡಾ ಶುದ್ದ ನೀರು ಬಳಸದೆ ಮಾಂಸದ ಅಂಗಡಿಗಳಲ್ಲಿ ಮಾಂಸ ಮಾಡುವಾಗ ಬಳಕೆ ಮಾಡಿದ ತ್ಯಾಜ್ಯ ನೀರನ್ನೇ ಬಳಸಿ ಶುದ್ದ ನೀರನ್ನು ಕೂಡಾ ಉಳಿತಾಯ ಮಾಡುವ ಯೋಚನೆ ಇದೆ ಎನ್ನುವ ಅವರು ಒಟ್ಟಾರೆ ಇದೊಂದು ಖರ್ಚು ಉಳಿಸಿಕೊಳ್ಳುವ ಅತ್ಯಂತ ನೀಟಾದ ವ್ಯವಸ್ಥೆ ಎನ್ನುತ್ತಾರೆ. .

ಸುಮಾರು 3 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಘಟಕದ ಕಾರ್ಯಯೋಜನೆ ಹೇಗೆಂದರೆ, ಪಂಚಾಯತಿಗಳಿAದ ಹಾಗೂ ಅಂಗಡಿ-ಹೋಟೆಲುಗಳಿAದ ತರುವ ಪ್ರತ್ಯೇಕಿಸಲ್ಪಟ್ಟ ವಿವಿಧ ರೀತಿಯ ಹಸಿ ಕಸವನ್ನು ಯಂತ್ರದ ಮೂಲಕವೇ ಅಗಿದು ಹಾಕಿ ನೀರಿನ ಜೊತೆ ಮಿಶ್ರಣ ಮಾಡಿ ಸೆಗಣಿಯೊಂದಿಗೆ ಮಿಶ್ರಣಗೊಳಿಸಲಾಗಿ ಅದನ್ನು ಮಿಥೇನ್ ಅನಿಲವಾಗಿ ಪರಿವರ್ತಿಸಲಾಗುತ್ತದೆ. ಅನಿಲ ತಯಾರಿಕೆಗೆ ಬೇಕಾದಂತಹ ಆಧುನಿಕ ಹಾಗೂ ಸುಧಾರಿತ ಯಂತ್ರಗಳನ್ನು ಘಟಕದಲ್ಲಿ ಅಳವಡಿಸಿಕೊಳ್ಳಲಾಗಿದೆ. ಬೃಹತ್ ಬೆಲೂನಿನ ರೀತಿಯ ಟ್ಯಾಂಕಿಗಳನ್ನು ನಿರ್ಮಿಸಲಾಗಿದ್ದು, ಇದರಿಂದ ತ್ಯಾಜ್ಯ ನೀರು ಯಾವುದೇ ವಾಸನೆ ಇಲ್ಲದೆ ಗೊಬ್ಬರದ ನೀರಾಗಿ ನೇರವಾಗಿ ಡೊಡ್ಡ ಪೈಪ್ ಮೂಲಕ ಹರಿದು ಘಟಕದ ಗುಂಡಿಗೆ ಬೀಳುತ್ತದೆ. ಅಂತಿಮವಾಗಿ ಘಟಕದಲ್ಲಿ ಉತ್ಪಾದನೆಯಾಗುವ ಅನಿಲವನ್ನು ಸಿಲಿಂಡರಿಗೆ ತುಂಬಿಸಿ ಸರಬರಾಜು ಮಾಡಲಾಗುತ್ತದೆ.  

ಘಟಕದ ಸುತ್ತಲೂ ಹಸಿರು ವಾತವರಣ:

ಈಗಾಗಲೇ ತನ್ನ ವಿಸ್ತಾರವಾದ ಎಕ್ರೆಗಟ್ಟಲೆ ಜಮೀನಿನಲ್ಲಿ ಪ್ರಗತಿಪರ ಹಾಗೂ ವೈಜ್ಞಾನಿಕ ರೀತಿಯಲ್ಲಿ ಕೃಷಿ-ಕೃತಾವಳಿಗಳನ್ನು ನಡೆಸಿಕೊಂಡು ಬರುವುದರ ಜೊತೆಗೆ ಪಶು ಸಂಗೋಪನೆಯನ್ನೂ ಮಾಡುತ್ತಿರುವ ಶಾಸಕ ರಾಜೇಶ್ ನಾಯಕ್ ಅವರ ಚಿಂತನೆಗೆ ಇದೀಗ ತನ್ನ ಪುತ್ರನ ಪ್ರಗತಿಪರ ಚಿಂತನೆ ಕೂಡಾ ಜೊತೆಗೂಡಿದ್ದು, ಪರಿಸರಕ್ಕೆ ಪೂರಕವಾದ ಮತ್ತೊಂದು ಘಟಕ ನಿರ್ಮಾಣದ ಯೋಜನೆ ಕೈಗೂಡಿ ಬಂದಿದೆ. ಘಟಕದ ಸುತ್ತ ಕೂಡಾ ಯಾವುದೇ ಅವ್ಯವಸ್ಥೆ ಇಲ್ಲದೆ ಖಾಲಿ ಜಾಗದಲ್ಲಿ ಇಂಟರ್ ಲಾಕ್ ಅಳವಡಿಸುವ ಕಾರ್ಯ ಭರದಿಂದ ಸಾಗುತ್ತಿದ್ದು, ಇನ್ನುಳಿದ ನಿರುಪಯುಕ್ತ ಜಾಗವನ್ನೂ ಸದುಪಯೋಗಪಡಿಸಿಕೊಂಡು ಅಲ್ಲೂ ತರಕಾರಿ, ಹೂವು, ಗೆಣಸು, ಹಣ್ಣು-ಹಂಪಲುಗಳ ಗಿಡಗಳನ್ನು ಬೆಳೆಸಿ ಅದರಿಂದಲೂ ಪರಿಸರ ಸ್ವಚ್ಛದ ಜೊತೆಗೆ ಲಾಭದಾಯಕವಾಗಿ ಬಳಸಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ. 

ಘಟಕದಲ್ಲಿ ಉತ್ಪತ್ತಿಯಾಗುವ ಗ್ಯಾಸನ್ನು ಬಹುಪಯೋಗಿ ಆಗಿ ಬಳಸುವುದರ ಜೊತೆಗೆ ಅದರಿಂದ ಬರುವ ಗೊಬ್ಬರದ ನೀರನ್ನು ರೈತರಿಗೆ ಅವರ ಮಣ್ಣಿನ ಗುಣ ನೋಡಿಕೊಂಡು ಪರಿವರ್ತಿಸು ನೀಡುವ ಯೋಚನೆಯ ಭಾಗವವಾಗಿ ರೈತರ ಅಲೆದಾಟ ತಪ್ಪಿಸಲು ಘಟಕದ ಪರಿಸರದಲ್ಲೇ ಮಣ್ಣು ಪರೀಕ್ಷಾ ಕೇಂದ್ರವನ್ನು ಸ್ಥಾಪಿಸುವ ಉದ್ದೇಶವನ್ನೂ ಹೊಂದಲಾಗಿದೆ ಎಂದು ಶಾಸಕ ರಾಜೇಶ್ ನಾಯಕ್ ಹೇಳಿದ್ದಾರೆ. 

ಈಗಾಗಲೇ ಘಟಕದ ಪೂರ್ವ ಪೀಠಿಕೆಯನ್ನು ಪುತ್ರನ ಸಾಮಾಜಿಕ ತಾಣಗಳಲ್ಲಿ ನೋಡಿಕೊಂಡ ಹಲವು ಮಂದಿ ಅಧಿಕಾರಿಗಳು, ಪರಿಸರ ತಜ್ಞರು ಸಂಪರ್ಕಿಸಿ ಮಾಹಿತಿ ಹಂಚಿಕೊAಡಿದ್ದು, ಘಟಕ ಯೋಜನೆಯ ಯೋಚನೆಯನ್ನು ಶ್ಪಾಘಿಸಿದ್ದಾರೆ. ಮುಂದಿನ ದಿನಗಳಲ್ಲಿ ಘಟಕ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭಗೊAಡ ಬಳಿಕ ಘಟಕಕ್ಕೆ ಭೇಟಿ ಇದೇ ತಂತ್ರಜ್ಞಾನದ ಮೂಲಕ ತ್ಯಾಜ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಜೊತೆಗೆ ಅನಿಲ ಉತ್ಪಾದನೆ ಮಾಡಿ ಅನಿಲ ಕೊರತೆಯನ್ನು ನೀಗಿಸುವ ಬಗ್ಗೆಯೂ ಪ್ರಯತ್ನ ನಡೆಸುವ ಬಗ್ಗೆ ಕಾರ್ಯಪ್ರವೃತ್ತವಾಗುವ ಬಗ್ಗೆ ಅಭಿಲಾಷೆ ಹಂಚಿಕೊAಡಿದ್ದಾರೆ ಎಂದ ಶಾಸಕ ರಾಜೇಶ್ ನಾಯಕ್ ಜಗತ್ತಿನ ಮುಂದುವರಿದ ರಾಷ್ಟçಗಳು ಇಂತಹ ಘಟಕ ಸ್ಥಾಪಿಸಿ ಯಶಸ್ವಿಯಾಗಿದ್ದರೂ ಅವರಿಗೆ ಈಗಲೂ ಕಾಡುತ್ತಿರುವ ಸಮಸ್ಯೆ ಎಂದರೆ ತ್ಯಾಜ್ಯ ಸಂಗ್ರಹಿಸುವುದಾಗಿದೆ. ಕನಿಷ್ಠ ಪ್ರಮಾಣದಲ್ಲಿ ಜನಸಂಖ್ಯೆ ಹೊಂದಿರುವ ರಾಷ್ಟçಗಳಲ್ಲಿ ತ್ಯಾಜ್ಯ ಉತ್ಪಾದನೆಯೂ ಸೀಮಿತ ಪ್ರಮಾಣದಲ್ಲಿ ಇರುವುದರಿಂದ ಈ ಸಮಸ್ಯೆ ಉದ್ಭವಿಸುತ್ತಿದೆ. ಆದರೆ ನಮ್ಮ ದೇಶದಲ್ಲಿ ತ್ಯಾಜ್ಯ ಹೇರಳವಾಗಿರುವ ಹಿನ್ನಲೆಯಲ್ಲಿ ಈ ಘಟಕವನ್ನು ಮುಂದುವರಿಸುವುದು ಅಸಾಧ್ಯವಲ್ಲ ಎಂದವರು ಅಭಿಪ್ರಾಯಪಟ್ಟಿದ್ದಾರೆ. 

ಘಟಕ ಕೆಲಸ-ಕಾರ್ಯಗಳು ಪೂರ್ಣಗೊಂಡ ನಂತರ ಶೀಘ್ರದಲ್ಲೇ ಕೇಂದ್ರ ಹಾಗೂ ರಾಜ್ಯದ ಉನ್ನತ ಮಟ್ಟದ ನಾಯಕರು, ಸಚಿವರು, ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಉದ್ಘಾಟನೆ ನೆರವೇರಿಸುವುದಾಗಿ ಶಾಸಕ ರಾಜೇಶ್ ನಾಯಕ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ ಶಾಸಕರ ಪುತ್ರನ ಪ್ರಗತಿಪರ ಚಿಂತನೆಯಿAದ ಮೂಡಿಬಂದ ತ್ಯಾಜ್ಯದಿಂದ ಗ್ಯಾಸ್ ಉತ್ಪಾದನಾ ಘಟಕದ ಉದ್ಘಾಟನೆಗೆ ಸಿದ್ದತೆ : ಜಿಲ್ಲೆಯಲ್ಲಿ ಮಿತಿ ಮೀರಿರುವ ತ್ಯಾಜ್ಯ ಸಮಸ್ಯೆಗೆ ಇದು ಮುಕ್ತಿಯಾಗಬಲ್ಲುದೇ? Rating: 5 Reviewed By: karavali Times
Scroll to Top