ಬಂಟ್ವಾಳ, ಆಗಸ್ಟ್ 22, 2023 (ಕರಾವಳಿ ಟೈಮ್ಸ್) : ತಂದೆ ಹಾಗೂ ಇಬ್ಬರು ಮಕ್ಕಳು ಪ್ರಯಾಣಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಟಾಟಾ ಏಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಮೂವರೂ ರಸ್ತೆಗೆಸೆಯಲ್ಪಟ್ಟು ಗಾಯಗೊಂಡ ಘಟನೆ ಸಜಿಪಮುನ್ನೂರು ಗ್ರಾಮದ ಬೇಂಕ್ಯೆ ಎಂಬಲ್ಲಿ ಸೋಮವಾರ ನಡೆದಿದೆ.
ಸಜಿಪಮನ್ನೂರು ಗ್ರಾಮದ ನಿವಾಸಿ ಕೃಷ್ಣ ಕಾರಂತ ಅವರು ಮಕ್ಕಳಾದ ವೈಷ್ಣವಿ ಮತ್ತು ಅನನ್ಯ ಅವರನ್ನು ಕುಳ್ಳಿರಿಸಿಕೊಂಡು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಬೇಂಕ್ಯೆ ಎಂಬಲ್ಲಿ ಹಿಂದಿನಿಂದ ಬಂದ ಟಾಟಾ ಏಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರರು ರಸ್ತೆಗೆಸೆಯಲ್ಪಟ್ಟು ಗಾಯಗೊಂಡಿದ್ದಾರೆ.
ಟಾಟಾ ಏಸ್ ವಾಹನ ಚಾಲಕ ಝುಬೈರ್ ಎಂಬಾತನ ದುಡುಕುತನದ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಆರೋಪಿಸಲಾಗಿದ್ದು, ಈತನ ವಿರುದ್ದ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 113/2023 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment