ಬಂಗ್ಲೆಗುಡ್ಡೆ ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ
ಬಂಟ್ವಾಳ, ಆಗಸ್ಟ್ 15, 2023 (ಕರಾವಳಿ ಟೈಮ್ಸ್) : ದೇಶದ ಸ್ವಾತಂತ್ರ್ಯ ಹೋರಾಟ ಅದೊಂದು ಸುರ್ದೀಘ ಚಳುವಳಿಯಾಗಿದ್ದು, ಐತಿಹಾಸಿಕ ಸನ್ನಿವೇಶವಾಗಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ದೇಶದ ಎಲ್ಲ ಜಾತಿ-ಧರ್ಮ, ಜನಾಂಗದ ಜನ ಒಗ್ಗಟ್ಟಾಗಿ ಹೋರಾಡಿದ ಫಲ ಇಂದು ನಾವು ಉಣ್ಣುತ್ತಿದ್ದೇವೆ. ನಾವಿಂದು ದೇಶದಲ್ಲಿ ಸ್ವಚ್ಛಂದವಾಗಿ ಜೀವಿಸಲು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನಗಳೇ ಕಾರಣವಾಗಿದ್ದು, ಇಂತಹ ಮಹಾ ವ್ಯಕ್ತಿತ್ವಗಳನ್ನು ಬಣ್ಣಿಸಿ ಅವರ ಬಗ್ಗೆ ಮುಂದಿನ ಪೀಳಿಗೆಯಾದ ವಿದ್ಯಾರ್ಥಿ ಸಮುದಾಯಕ್ಕೆ ಸಮಪರ್ಕವಾಗಿ ವಿವರಿಸಿದಾಗ ಮಕ್ಕಳಲ್ಲಿ ದೇಶಾಭಿಮಾನ ಪುಟಿದೇಳಲು ಕಾರಣವಾಗುತ್ತದೆ ಎಂದು ಬಂಟ್ವಾಳ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ ಹೇಳಿದರು.
ಬಂಟ್ವಾಳ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು ಸಮೀಪದ ಬಂಗ್ಲೆಗುಡ್ಡೆ ಅಂಗನವಾಡಿ ಕೇಂದ್ರದಲ್ಲಿ ನಡೆದ ದೇಶದ 77ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಅಂಗನವಾಡಿ ಶಿಕ್ಷಕಿ ಪ್ರೇಮ ಟೀಚರ್, ಸಹಾಯಕಿ ಜ್ಯೋತಿ ಲಕ್ಷ್ಮಿ ಟೀಚರ್, ಪ್ರಾಥಮಿಕ ಆರೋಗ್ಯ ಕೇಂದ್ರದ ನಮಿತಾ ಸಿಸ್ಟರ್, ಅಕ್ಷತಾ ಸಿಸ್ಟರ್, ಆಶಾ ಕಾರ್ಯಕರ್ತೆ ಜ್ಯೋತಿಲಕ್ಷ್ಮಿ, ಪತ್ರಕರ್ತರಾದ ಪಿ ಎಂ ಅಶ್ರಫ್ ಪಾಣೆಮಂಗಳೂರು, ಯು ಮುಸ್ತಫಾ ಆಲಡ್ಕ, ಸ್ಥಳೀಯ ಪ್ರಮುಖರಾದ ಹುಸೈನ್ ಬಂಗ್ಲೆಗುಡ್ಡೆ, ಇಕ್ಬಾಲ್, ಮುನೀರ್, ಸಲಾಂ, ಖಲಂದರ್, ಸವಾದ್, ಝುಬೈರ್, ಜಮಾಲ್ ಬಂಗ್ಲೆಗುಡ್ಡೆ, ಶಮೀರ್ ನಂದಾವರ, ರಫೀಕ್ ತ್ಯಾಜರಾಜ ರಸ್ತೆ, ಖಲಂದರ್ ಗೂಡಿನಬಳಿ, ವಾಲ್ವಿನ್ ಡಿಸೋಜ, ಸಾಜಿದ್ ಗುಡ್ಡೆಅಂಗಡಿ, ಸಿದ್ದೀಕ್ ಬೋಗೋಡಿ ಹಾಗೂ ಅಂಗನವಾಡಿ ಪುಟಾಣಿಗಳು ಮತ್ತು ಪೋಷಕರು ಭಾಗವಹಿಸಿದ್ದರು.
0 comments:
Post a Comment