ಉಳ್ಳಾಲ, ಆಗಸ್ಟ್ 15, 2023 (ಕರಾವಳಿ ಟೈಮ್ಸ್) : ತಾಲೂಕಿನ ಬಬ್ಬುಕಟ್ಟೆ ಆಕ್ಸಿಜನ್ ಲ್ಯಾಂಡ್ ಮಾರ್ಕ್ ವಸತಿ ಸಮುಚ್ಚಯದ ವತಿಯಿಂದ 77ನೇ ಸ್ವಾತಂತ್ರ್ಯೊತ್ಸವದ ಧ್ವಜಾರೋಹಣವನ್ನು ಬಬ್ಬುಕಟ್ಟೆ ಆಕ್ಸಿಜನ್ ಲ್ಯಾಂಡ್ ಮಾರ್ಕ್ ವಸತಿ ಸಮುಚ್ಚಯದ ಆಡಳಿತ ಕಮೀಟಿಯ ಮಾಜಿ ಅಧ್ಯಕ್ಷ ಅಶ್ರಫ್ ನೆರೆವೇರಿಸಿದರು. ಕೋಶಾಧಿಕಾರಿ ರಾಘವೇಂದ್ರ ಸಂದೇಶ ನೀಡಿದರು.
ಶಶಿ ಕುಮಾರ್, ಪವಿತ್ರಾ ಬ್ರಿಜೇಶ್, ಮುಹಮ್ಮದ್ ಪಿ.ಎಚ್, ನಾಸೀರ್ ಆಲ್ಫಾ, ರೆಹಮತ್ ಸಾಗರ್, ಸಿದ್ದೀಕ್ ಸ್ಕೈ, ಟಿ ಕೆ ಸಲೀಂ ಫರಂಗಿಪೇಟೆ, ಸಿದ್ದೀಕ್ ಯು.ಎಚ್, ಅಬ್ದುಲ್ ಲತೀಫ್ ಸಾಮಣಿಗೆ, ಮೊಹಮ್ಮದ್ ಸಲೀಂ, ಆಸಿಫ್ ಮೊದಲಾದವರು ಭಾಗವಹಿಸಿದ್ದರು. ಮನ್ಸೂರ್ ಅಹ್ಮದ್ ಸಾಮಣಿಗೆ ಕಾರ್ಯಕ್ರಮ ನಿರೂಪಿಸಿದರು. ಅಫ್ಝಲ್ ಪಿಲಾರ್ ವಂದಿಸಿದರು.
0 comments:
Post a Comment