ಬಂಟ್ವಾಳ, ಆಗಸ್ಟ್ 27, 2023 (ಕರಾವಳಿ ಟೈಮ್ಸ್) : ಸಜಿಪನಡು ಸಮೀಪದ ಕೋಟೆಕಣಿ ಎಂಬಲ್ಲಿ ಶನಿವಾರ ಕಾರು ಹಾಗೂ ಅಟೋ ರಿಕ್ಷಾ ನಡುವೆ ಸಂಭವಿಸಿದ ಅಪಘಾತದಲ್ಲಿ ಅಟೋ ರಿಕ್ಷಾ ಪ್ರಯಾಣಿಕರಾದ ನಾಲ್ವರು ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಅಟೋ ರಿಕ್ಷಾ ಚಾಲಕ ಸಜಿಪನಡು ನಿವಾಸಿ, ಅಟೋ ಚಾಲಕ ಮುಹಮ್ಮದ್ ಶಾಹೀರ್ (21) ಹಾಗೂ ಅಟೋದಲ್ಲಿದ್ದ ನೆರೆಮನೆ ನಿವಾಸಿಗಳಾದ ಆಸಿಯಮ್ಮ, ಶೈನಾಝ್, ಮುಹಮ್ಮದ್ ಅಲ್ತಾಫ್ ಎಂದು ಹೆಸರಿಸಲಾಗಿದೆ.
ಶಾಹೀರ್ ತನ್ನ ಅಟೋ ರಿಕ್ಷಾದಲ್ಲಿ ನೆರೆಮನೆ ನಿವಾಸಿಗಳನ್ನು ಅಟೋದಲ್ಲಿ ಕುಳ್ಳಿರಿಸಿಕೊಂಡು ಪ್ರಯಾಣಿಸುತ್ತಿದ್ದ ವೇಳೆ ಕೋಟೆಕಣಿ ಜಂಕ್ಷನ್ ತಲುಪಿದ ವೇಳೆ ಕಾರು ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಅಟೋ ರಿಕ್ಷಾ ರಸ್ತೆಯಲ್ಲಿ ಮಗುಚಿ ಬಿದ್ದ ಪರಿಣಾಮ ಪ್ರಯಾಣಿಕರು ಗಾಯಗೊಂಡಿದ್ದಾರೆ.
ಈ ಬಗ್ಗೆ ಬಂಟ್ವಾಳ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 117/2023 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment