ಬಂಟ್ವಾಳ, ಜುಲೈ 17, 2023 (ಕರಾವಳಿ ಟೈಮ್ಸ್) : ತುಳುಕೂಟ ಬಂಟ್ವಾಳ ಹಾಗೂ ಬಿ.ಸಿ.ರೋಡು ಶ್ರೀ ರಕ್ತೇಶ್ವರಿ ದೇವಸ್ಥಾನದ ಜಂಟಿ ಆಶ್ರಯದಲ್ಲಿ ಆಟಿ ಅಮವಾಸ್ಯೆಯ ಪ್ರಯುಕ್ತ ಸಾರ್ವಜನಿಕ ಪಾಲೆಯ ಕೆತ್ತೆ ಕಷಾಯ ವಿತರಣಾ ಕಾರ್ಯಕ್ರಮ ಸೋಮವಾರ ಇಲ್ಲಿನ ದೇವಸ್ಥಾನ ವಠಾರದಲ್ಲಿ ನಡೆಯಿತು.
ಬಂಟ್ವಾಳ ತುಳುಕೂಟದ ಅದ್ಯಕ್ಷ ಸುದರ್ಶನ್ ಜೈನ್, ಕಾರ್ಯದರ್ಶಿ ಎಚ್ಕೆ ನಯನಾಡು, ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಬಿ ವಿಶ್ವನಾಥ್, ಪ್ರದಾನ ಕಾರ್ಯದರ್ಶಿ ಎನ್ ಶಿವಶಂಕರ್, ಮಾಜಿ ಅಧ್ಯಕ್ಷ ರಾಜೇಶ್ ಎಲ್ ನಾಯಕ್, ತುಳುಕೂಟದ ಕೋಶಾಧಿಕಾರಿ ಸುಭಾಶ್ಚಂದ್ರ ಜೈನ್, ಪ್ರಮುಖರಾದ ಕಾಂತಾಡಿ ಸೀತಾರಾಮ ಶೆಟ್ಟಿ, ಪರಮೇಶ್ವರ ಮೂಲ್ಯ, ನಾರಾಯಣ ಸಿ ಪೆರ್ನೆ, ಸದಾಶಿವ ಪುತ್ರನ್, ಟಿ ಸೇಸಪ್ಪ ಮಾಸ್ಟರ್, ಸುಕುಮಾರ್ ಬಂಟ್ವಾಳ್, ದಾಮೋದರ ಮಾಸ್ಟರ್ ಏರ್ಯ, ನಿತೇಶ್ ಕುಲಾಲ್ ಪಲ್ಲಿಕಂಡ, ಪ್ರಕಾಶ್ ಶೆಟ್ಟಿ ಶ್ರೀ ಶೈಲ, ತುಂಬೆ, ಸತೀಶ್ ಕುಮಾರ್ ಎಂ, ಹರೀಶ್ ಬಿ ಸಿ ರೋಡು, ಸ್ವಜೇಶ್ ಜೈನ್ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment