ಬಂಟ್ವಾಳ, ಜುಲೈ 29, 2023 (ಕರಾವಳಿ ಟೈಮ್ಸ್) : ಬಂಟ್ವಾಳದ ಶ್ರೀ ದುರ್ಗಾ ಹೋಟೆಲ್ ಮಾಲಕ ದಿನೇಶ್ ಪೂಜಾರಿ ಅವರ ಹೋಟೆಲಿಗೆ ಶನಿವಾರ ಬೆಳಿಗ್ಗೆ ವಿಧಾನಸಭಾ ಸ್ಪೀಕರ್ ಯು ಟಿ ಖಾದರ್ ಬೇಟಿ ಆತ್ಮೀಯ ಸ್ನೇಹಿತನ ಜೊತೆ ಮಾತುಕತೆ ನಡೆಸಿ ಕುಶಲೋಪರಿ ವಿಚಾರಿಸಿದರು.
ಶನಿವಾರ ಬೆಳಿಗ್ಗೆ ಖಾಸಗಿ ಕಾರ್ಯಕ್ರಮದ ನಿಮಿತ್ತ ಬೆಳ್ತಂಗಡಿ ಪ್ರವಾಸದಲ್ಲಿದ್ದ ಸ್ಪೀಕರ್ ಯು ಟಿ ಖಾದರ್ ಅವರು ತನ್ನ ಆತ್ಮೀಯನಾಗಿರುವುದು ಮಾತ್ರವಲ್ಲದೆ ತನ್ನ ಮೇಲಿನ ಅಭಿಮಾನದಿಂದ ಹೋಟೆಲಿನಲ್ಲಿ ಭಾವಚಿತ್ರ ಅಳವಡಿಸಿ ಪ್ರೀತಿ ತೋರುತ್ತಿರುವ ದಿನೇಶ್ ಪೂಜಾರಿ ಅವರನ್ನು ಸ್ಪೀಕರ್ ಹುದ್ದೆ ಅಲಂಕರಿಸಿದ ಬಳಿಕ ಪ್ರಥಮ ಬಾರಿಗೆ ಭೇಟಿ ನೀಡಿ ಮಾತುಕತೆ ನಡೆಸಿದರು.
ಈ ಸಂದರ್ಭ ಸ್ಪೀಕರ್ ಯು ಟಿ ಖಾದರ್ ಅವರನ್ನು ಅಭಿನಂದಿಸಲು ಶಾಲು ತಂದ ಹೋಟೆಲ್ ಮಾಲಕ ದಿನೇಶ್ ಅವರಿಂದ ಶಾಲು ಪಡೆದುಕೊಂಡು ಅದನ್ನು ಅವರಿಗೇ ಹೊದಿಸುವ ಮೂಲಕ ಅವರನ್ನೇ ಅಭಿನಂದಿಸಿದರು. ಬಳಿಕ ಹೋಟೆಲಿನಲ್ಲಿ ಸರಳ ಉಪಾಹಾರ ಸೇವಿಸಿ ಬಳಿಕ ಪ್ರವಾಸ ಮುಂದುವರಿಸಿದರು.
0 comments:
Post a Comment