ಬಂಟ್ವಾಳ, ಜುಲೈ 26, 2023 (ಕರಾವಳಿ ಟೈಮ್ಸ್) : ತಾಲೂಕಿನಲ್ಲಿ ಮಳೆ ಬಿರುಸು ಮುಂದುವರಿದಿದ್ದು, ಮಳೆ ಹಾನಿ ಪ್ರಕರಣಗಳೂ ಮುಂದುವರಿದಿದೆ. ಕೇಪು ಗ್ರಾಮದ ನೀರ್ಕಜೆ ನಿವಾಸಿ ಸಂತೋಷ್ ಆಚಾರ್ಯ ಬಿನ್ ದಿವಂಗತ ಗೋಪಾಲ ಆಚಾರ್ಯ ಅವರ ವಾಸ್ತವ್ಯದ ಮನೆಯು ತೀವ್ರ ಹಾನಿಯಾಗಿದೆ. ಮನೆ ಮಂದಿಯನ್ನು ಸಮೀಪದ ಸಂಬಂಧಿಕರ ಮನೆಗೆ ಸ್ಥಳಾಂತರಗೊಳಿಸಲಾಗಿದೆ.
ಬಾಳ್ತಿಲ ಗ್ರಾಮದ ಕುರ್ಪೆದಕೋಡಿ ನಿವಾಸಿ ಮರ್ಸಿನ್ ಮೊರಾಸ್ ಅವರ ವಾಸ್ತವ್ಯದ ಮನೆಗೆ ತೀವ್ರ ಹಾನಿಯಾಗಿದೆ. ಬರಿಮಾರು ಗ್ರಾಮದ ನಿವಾಸಿ ವಸಂತ ಬಿನ್ ಸದಾನಂದ ಅವರ ವಾಸ್ತವ್ಯದ ಮನೆ ಗೋಡೆ ಕುಸಿದು ಬಿದ್ದಿದೆ. ಇಡ್ಕಿದು ಗ್ರಾಮದ ಮಿತ್ತೂರು ನಿವಾಸಿ ಸುಧೀರ್ ಕುಮಾರ್ ಶೆಟ್ಟಿ ಬಿನ್ ಸುಂದರ ಶೆಟ್ಟಿ ಅವರಿಗೆ ಸೇರಿದ ಅಡಿಕೆ ತೋಟಕ್ಕೆ ಹಾನಿಯಾಗಿದೆ ಎಂದು ತಾಲೂಕು ಕಚೇರಿ ಮಾಹಿತಿ ತಿಳಿಸಿದೆ.
0 comments:
Post a Comment