ಬಂಟ್ವಾಳ, ಜುಲೈ 07, 2023 (ಕರಾವಳಿ ಟೈಮ್ಸ್) : ತಾಲೂಕಿನಲ್ಲಿ ಶುಕ್ರವಾರವೂ ಮಳೆ ಮುಂದುವರಿದಿದ್ದು, ಮಳೆ ಹಾನಿ ಪ್ರಕರಣಗಳೂ ವರದಿಯಾಗುತ್ತಿವೆ. ಪುಣಚ ಗ್ರಾಮದ ಬಡೆಕನಡ್ಕ ನಿವಾಸಿ ಚೋಮ ಬಿನ್ ಬಟ್ಯ ಅವರ ವಾಸ್ತವ್ಯದ ಮನೆಗೆ ಭಾಗಶಃ ಹಾನಿಯಾಗಿದೆ. ಕೊಳ್ನಾಡು ಗ್ರಾಮದ ಕಾಡುಮಠ ನಿವಾಸಿ ಪ್ರಭಾವತಿ ಅವರ ಮನೆ ಹಾನಿಯಾಗಿದೆ. ಪುಣಚ ಗ್ರಾಮದ ಅಜ್ಜಿನಡ್ಕ ನಿವಾಸಿ ರಾಮಪ್ಪ ಆಚಾರ್ಯ ಬಿನ್ ಲಿಂಗಪ್ಪ ಆಚಾರ್ಯ ಅವರ ವಾಸ್ತವ್ಯದ ಮನೆಗೆ ಭಾಗಶಃ ಹಾನಿ ಸಂಭವಿಸಿದೆ.
ಬಡಗ ಬೆಳ್ಳೂರು ಗ್ರಾಮದ ನಂದಪ್ಪ ಪೂಜಾರಿ ಬಿನ್ ತಿಮ್ಮಪ್ಪ ಅವರ ವಾಸ್ತವ್ಯದ ಮನೆ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಕೇಪು ಗ್ರಾಮದ ಕುಕ್ಕೆಬೆಟ್ಟು ನಿವಾಸಿ ಸಂಜೀವ ಪೂಜಾರಿ ಅವರ ಮನೆಯ ತಡೆಗೋಡೆ ಕುಸಿದು ಹಾನಿಯಾಗಿದೆ. ಕೊಡ್ಮಣ್ ಗ್ರಾಮದ ಕೊಡ್ಮಣ್ ಕೋಡಿ ನಿವಾಸಿ ಸುಲೋಚನಾ ಕೋಂ ಕೆ ಗೋಪಾಲ ಅವರ ಮನೆಗೆ ಹೊಂದಿರುವ ಸ್ನಾನಗೃಹ ಹಾಗೂ ಶೌಚಾಲಯಕ್ಕೆ ಮರ ಬಿದ್ದು ಸದ್ರಿ ಕಟ್ಟಡದ ಗೋಡೆ ಹಾಗೂ ಸಿಮೆಂಟ್ ಶೀಟು ಹಾನಿಯಾಗಿದೆ. ಸಜಿಪಮುನ್ನೂರು ಗ್ರಾಮದ ನಂದಾವರದಲ್ಲಿ ಮನೆ ಮೇಲೆ ಗುಡ್ಡ ಕುಸಿದು ಝರೀನಾ ಎಂಬ ಮಹಿಳೆ ಮೃತಪಟ್ಟಿದ್ದಾರೆ. ಶುಕ್ರವಾರ ಬೆಳಿಗ್ಗೆ ಬಂಟ್ವಾಳ ನೇತ್ರಾವತಿ ನದಿ 5.8 ಮೀಟರ್ ಅಂತರದಲ್ಲಿ ಹರಿಯುತ್ತಿತ್ತು.
0 comments:
Post a Comment