ಬಂಟ್ವಾಳ, ಜುಲೈ 05, 2023 (ಕರಾವಳಿ ಟೈಮ್ಸ್) : ತಾಲೂಕಿನಲ್ಲಿ ಸೋಮವಾರದಿಂದ ನಿರಂತರ ಹಾಗೂ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಬುಧವಾರ ಸಂಜೆವರೆಗೂ ಬಿರುಸಿನ ಮಳೆ ಮುಂದುವರಿದಿದೆ. ಜಡಿಮಳೆ ಜೊತೆಗೆ ಬಿರುಸಿನ ಗಾಳಿಯೂ ಬೀಸುತ್ತಿದ್ದು, ಹಲವೆಡೆ ಭಾರೀ ಮನೆ ಹಾನಿ ಪ್ರಕರಣಗಳು ವರದಿಯಾಗಿದೆ.
ಕನ್ಯಾನ ಗ್ರಾಮದ ಕರ್ಮಿನಾಡಿ ನಿವಾಸಿ ವಸಂತಿ ಕೋಂ ನಾರಾಯಣ ಶೆಟ್ಟಿ ಅವರ ವಾಸ್ತವ್ಯದ ಮನೆಗೆ ಮರ ಬಿದ್ದು ಭಾಗಶಃ ಹಾನಿಯಾಗಿದೆ. ವೀರಕಂಭ ಗ್ರಾಮದ ಮಜ್ಜೋನಿ ನಿವಾಸಿ ನೆಬಿಸ ಅವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ. ಮಜಿ ನಿವಾಸಿ ಬೇಬಿ ಕೋಂ ಗಣೇಶ ಮೂಲ್ಯ ಅವರ ಮನೆ ಆವರಣ ಗೋಡೆಗೆ ಹಾನಿ ಸಂಭವಿಸಿದೆ.
ಕೊಳ್ನಾಡು ಗ್ರಾಮದ ಅಲ್ಲಿಕಂಡೆ ನಿವಾಸಿ ರಫೀಕ್ ಅವರ ಮನೆ ಮೇಲೆ ಮನೆ ಹಿಂಬದಿಯ ಗುಡ್ಡ ಜರಿದು ಭಾಗಶ: ಹಾನಿಯಾಗಿದೆ. ತೆಂಕಕಜೆಕಾರು ಗ್ರಾಮದ ನಿವಾಸಿ ಶೀಲಾವತಿ ಕೋಂ ಶೇಖರ ಅವರ ವಾಸ್ತವ್ಯದ ಮನೆಗೆ ತೀವ್ರ ಹಾನಿಯಾಗಿದೆ. ಮಂಚಿ ಗ್ರಾಮದ ಹೆಗ್ಗಡೆಗುಳಿ ನಿವಾಸಿ ಅಲಿಮಮ್ಮ ಕೋಂ ಮುಹಮ್ಮದ್ ಅವರ ಮನೆಯ ಬರೆ ಜರಿದು ಮನೆ ಕುಸಿಯುವ ಹಂತದಲ್ಲಿದೆ.
ಮಾಣಿ ಗ್ರಾಮದ ಕೊಡಾಜೆ ನಿವಾಸಿ ಇಸ್ಮಾಯಿಲ್ ಬಿನ್ ಕೆ ಎಸ್ ಅಹಮದ್ ಬ್ಯಾರಿ ಅವರ ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ವಾಹನದ ಮೇಲೆ ಬೃಹತ್ ಗಾತ್ರದ ಮರ ಬಿದ್ದು ವಾಹನ ಸಂಪೂರ್ಣ ಜಖಂಗೊಂಡಿದೆ. ಪಿಲಾತಬೆಟ್ಟು ಗ್ರಾಮದ ಮಂಚಗುಡ್ಡೆ ನಿವಾಸಿ ಗೋಪಿ ಕೋಂ ಅಣ್ಣು ಮೂಲ್ಯ ಅವರ ಮನೆ ಭಾಗಶಃ ಹಾನಿಯಾಗಿದೆ
ವೀರಕಂಭ ಗ್ರಾಮದ ಬೆತ್ತಸರಾವು ನಿವಾಸಿ ನಾರಾಯಣ ಮೂಲ್ಯ ಅವರ ದನದ ಕೊಟ್ಟಿಗೆ ಹಾನಿಯಾಗಿದೆ.
ಅನಂತಾಡಿ ಗ್ರಾಮದ ರೋಹಿಣಿ ಕೋಂ ಸುರೇಶ್ ಅವರ ಮನೆಗೆ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಮಾಣಿ ಗ್ರಾಮದ ಪಳಿಕೆ ನಿವಾಸಿ ಮೋಹನ ಕುಲಾಲ್ ಬಿನ್ ಚಂದಪ್ಪ ಮೂಲ್ಯ ಅವರ ಹಂಚಿನ ಮನೆಯ ಮೇಲೆ ಮರ ಬಿದ್ದು ತೀವ್ರ ಹಾನಿಯಾಗಿದೆ.
ಮಳೆ ಬಿರುಸಿನಿಂದ ಸುರಿಯುತ್ತಿರುವ ಪರಿಣಾಮ ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಬುಧವಾರ ಬೆಳಿಗ್ಗೆ ನೇತ್ರಾವತಿ ನದಿ 3.6 ಮೀಟರ್ ಅಂತರದಲ್ಲಿ ಹರಿಯುತ್ತಿತ್ತು.
0 comments:
Post a Comment