ಪುತ್ತೂರು, ಜುಲೈ 11, 2023 (ಕರಾವಳಿ ಟೈಮ್ಸ್) : ನಗರ ಸಭೆ ಹಾಗೂ ಗ್ರಾಮ ಪಂಚಾಯತಿಗಳ ನಕಲಿ ದಾಖಲೆ ಸೃಷ್ಟಿಸಿ ಸಾರ್ವಜನಿಕರಿಗೆ ನೀಡುತ್ತಿದ್ದ ಜಾಲ ಬೇಧಿಸಿದ ಪುತ್ತೂರು ತಾ ಪಂ ಕಾರ್ಯನಿರ್ವಹಣಾಧಿಕಾರಿ ನೇತೃತ್ವದ ಅಧಿಕಾರಿಗಳ ತಂಡ ಈ ಬಗ್ಗೆ ಪೊಲೀಸ್ ದೂರು ನೀಡಿದೆ.
ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಅವರು ಪುತ್ತೂರು ನಗರ ಪೊಲೀಸರಿಗೆ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪುತ್ತೂರು ನಗರ ಠಾಣಾ ಪೆÇಲೀಸರು ಪುತ್ತೂರು ಪಡೀಲ್ ಎಂಬಲ್ಲಿ ಎಂ ಎಸ್ ಕಾಂಪ್ಲೆಕ್ಸ್ ನಲ್ಲಿರುವ ಬಿ ಬಿ ಇಲೆಕ್ಟ್ರಿಕಲ್ ಆಂಡ್ ಪ್ಲಂಬಿಂಗ್ ಎಂಬ ಅಂಗಡಿಗೆ ದಾಳಿ ನಡೆಸಿ ಸ್ಥಳೀಯ ಗ್ರಾಮ ಪಂಚಾಯತ್ ಗಳು ಮತ್ತು ನಗರಸಭೆಯ ನಕಲಿ ಸೀಲುಗಳು, ರಬ್ಬರ್ ಸ್ಟ್ಯಾಂಪ್, ಹಾಗೂ ನಕಲಿ ದಾಖಲೆಪತ್ರಗಳನ್ನು ತಯಾರಿಸಿ ಸಾರ್ವಜನಿಕರಿಗೆ ಕೊಡುತ್ತಿದ್ದ ಆರೋಪಿ ಕಬಕ ಗ್ರಾಮದ ಪೆರುವತ್ತೋಡಿ ನಿವಾಸಿ ವಿಶ್ವನಾಥ ಬಿ ವಿ (40) ಎಂಬಾತನನ್ನು ಹಾಗೂ ನಕಲಿ ದಾಖಲೆಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಪುತ್ತೂರು ನಗರ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 63/2023 ಕಲಂ 255, 260, 406, 465, 468, 471, 473, 420 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment