ಮಾರಿಪಳ್ಳ : ಹುಸೈನ್ ಪಾಡಿ ಅವರ ನಿಧನದಿಂದ ತೆರವಾದ ಪುದು ಪಂಚಾಯತ್ 10ನೇ ವಾರ್ಡಿಗೆ ಜುಲೈ 23 ರಂದು ಭಾನುವಾರ ಉಪಚುನಾವಣೆ - Karavali Times ಮಾರಿಪಳ್ಳ : ಹುಸೈನ್ ಪಾಡಿ ಅವರ ನಿಧನದಿಂದ ತೆರವಾದ ಪುದು ಪಂಚಾಯತ್ 10ನೇ ವಾರ್ಡಿಗೆ ಜುಲೈ 23 ರಂದು ಭಾನುವಾರ ಉಪಚುನಾವಣೆ - Karavali Times

728x90

21 July 2023

ಮಾರಿಪಳ್ಳ : ಹುಸೈನ್ ಪಾಡಿ ಅವರ ನಿಧನದಿಂದ ತೆರವಾದ ಪುದು ಪಂಚಾಯತ್ 10ನೇ ವಾರ್ಡಿಗೆ ಜುಲೈ 23 ರಂದು ಭಾನುವಾರ ಉಪಚುನಾವಣೆ

ಬಂಟ್ವಾಳ, ಜುಲೈ 21, 2023 (ಕರಾವಳಿ ಟೈಮ್ಸ್) : ತಾಲೂಕಿನ ಪುದು ಗ್ರಾಮ ಪಂಚಾಯತ್ ಕಾಂಗ್ರೆಸ್ ಬೆಂಬಲಿತ ಸದಸ್ಯ ಹುಸೈನ್ ಪಾಡಿ ಅವರ ಹಠಾತ್ ನಿಧನದಿಂದ ತೆರವಾಗಿರುವ 10ನೇ ವಾರ್ಡಿಗೆ ಜುಲೈ 23 ರಂದು ಭಾನುವಾರ ಉಪಚುನಾವಣೆ ಘೋಷಣೆಯಾಗಿದ್ದು, ಬೆಳಿಗ್ಗೆ 7 ರಿಂದ ಸಂಜೆ 5ರವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ. ಜುಲೈ 26 ರಂದು ಬುಧವಾರ ಮತ ಎಣಿಕೆ ನಡೆಯಲಿದೆ. 

ಇಲ್ಲಿನ ಪಂಚಾಯತ್ ಸದಸ್ಯ ಎಂ ಹುಸೈನ್ ಅವರು ಇತ್ತೀಚೆಗೆ ಹಠಾತ್ ಕಾಣಿಸಿಕೊಂಡ ಜ್ವರದಿಂದ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದರು. ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಇದೀಗ ಉಪಚುನಾವಣೆ ನಡೆಯಲಿದೆ. 

ಹಿಂದುಳಿದ ವರ್ಗ ಎ ಮೀಸಲಾತಿ ಹೊಂದಿರುವ ಈ ವಾರ್ಡಿನ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ದಿವಂತ ಹುಸೈನ್ ಅವರ ಪುತ್ರ ಮುಹಮ್ಮದ್ ಇಕ್ಬಾಲ್ ಅವರು ಕಣಕ್ಕಿಳಿದಿದ್ದು, ಉಳಿದಂತೆ ಅಬ್ದುಲ್ ಲತೀಫ್ ಬಿನ್ ಆಲಿಯಬ್ಬ ಸುಜೀರು ಬದಿಗುಡ್ಡೆ ಹಾಗೂ ಮುಹಮ್ಮದ್ ಅಶ್ರಫ್ ಬಿನ್ ಹಮೀದ್ ಕೆ ಮಾರಿಪಳ್ಳ ಅವರು ಸ್ಪರ್ಧಿಸುತ್ತಿದ್ದಾರೆ. 

ವಾರ್ಡಿನಲ್ಲಿ 414 ಪುರುಷ ಮತದಾರರು ಹಾಗೂ 416 ಮಹಿಳಾ ಮತದಾರರು ಸೇರಿದಂತೆ ಒಟ್ಟು 830 ಮಂದಿ ಮತದಾರರಿದ್ದಾರೆ. ಜುಲೈ 26 ರಂದು ನಡೆಯುವ ಮತ ಎಣಿಕೆಯಲ್ಲಿ ಅಭ್ಯರ್ಥಿಗಳ ಭವಿಷ್ಯ ಗೊತ್ತಾಗಲಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಮಾರಿಪಳ್ಳ : ಹುಸೈನ್ ಪಾಡಿ ಅವರ ನಿಧನದಿಂದ ತೆರವಾದ ಪುದು ಪಂಚಾಯತ್ 10ನೇ ವಾರ್ಡಿಗೆ ಜುಲೈ 23 ರಂದು ಭಾನುವಾರ ಉಪಚುನಾವಣೆ Rating: 5 Reviewed By: karavali Times
Scroll to Top