ಮಂಗಳೂರು, ಜುಲೈ 13, 2023 (ಕರಾವಳಿ ಟೈಮ್ಸ್) : ಕರ್ನಾಟಕ ರಾಜ್ಯ ಸರಕಾರವು ಸಾಮಾಜಿಕ ಭದ್ರತೆ ಪಿಂಚಣಿಯನ್ನು ಕೇವಲ ಆಧಾರ್ ಸೀಡ್ ಆಗಿರುವ ಖಾತೆಗಳಿಗೆ ಮಾತ್ರ ಈ ತಿಂಗಳಿಂದ ವರ್ಗಾಯಿಸಲು ನಿರ್ಧರಿಸಿದೆ. ಈ ಹಿನ್ನಲೆಯಲ್ಲಿ ಅಂಚೆ ಇಲಾಖೆ ಎಲ್ಲಾ ಗ್ರಾಮೀಣ ಜನರಿಗೆ ಸರಕಾರದಿಂದ ಬರುವ ಸಾಮಾಜಿಕ ಭದ್ರತೆ ಪಿಂಚಣಿ ರದ್ದು ಆಗದಂತೆ ಕ್ರಮ ಕೈಗೊಳ್ಳುವ ನಿಟಟಿನಲ್ಲಿ ಅಂಚೆ ಉಳಿತಾಯ ಖಾತೆಗಳಿಗೆ ಆಧಾರ್ ಸೀಡ್ ಮಾಡುವ ಶಿಬಿರಗಳನ್ನು ಪ್ರತೀ ಅಂಚೆ ಕಚೇರಿಗಳಲ್ಲಿ ಹಾಗೂ ವಿವಿಧ ಕಡೆಗಳಲ್ಲಿ ಆಯೋಜಿಸುತ್ತಿದೆ.
ಸರಕಾರದಿಂದ ಪಿಂಚಣಿ ಪಡೆಯುವವರು ತಮ್ಮ ಉಳಿತಾಯ ಖಾತೆ ಇರುವ ಅಂಚೆ ಕಚೇರಿ ಅಥವಾ ಬ್ಯಾಂಕ್ ಶಾಖೆಗಳಿಗೆ ತೆರಳಿ ತಮ್ಮ ಖಾತೆಗಳಿಗೆ ಆಧಾರ್ ಸೀಡಿಂಗ್ ಮಾಡುವ ಕಾರ್ಯ ಮಾಡಬೇಕಾಗಿದೆ. ಪಿಂಚಣಿದಾರರು ತಮ್ಮ ಖಾತೆಗಳಿಗೆ ಆಧಾರ್ ಸೀಡಿಂಗ್ ಮಾಡಿಕೊಳ್ಳಲು ಜುಲೈ 30 ಕೊನೆ ದಿನಾಂಕ ನಿಗದಿಪಡಿಸಲಾಗಿದೆ.
ಅಲ್ಲದೆ ಕರ್ನಾಟಕ ಸರಕಾರ ಇತ್ತೀಚೆಗೆ ಘೋಷಿಸಿರುವ ಕೆಲ ಯೋಜನೆಗಳ ಹಣಕಾಸು ವರ್ಗಾವಣೆಯ ಲಾಭವನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಸಾರ್ವಜನಿಕರು ತಮ್ಮ ಸಮೀಪದ ಅಂಚೆ ಕಚೇರಿಗಳಿಗೆ ತೆರಳಿ ಆಧಾರ್ ಸೀಡಿಂಗ್ ಸಹಿತವಾದ ಅಂಚೆ ಉಳಿತಾಯ ಖಾತೆಗಳನ್ನು ತೆರೆಯಬಹುದು. ಅಂಚೆ ಇಲಾಖೆ ಉಳಿತಾಯ ಖಾತೆಗಳಿಗೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಡಿಜಿಟಲ್ ಸೇವೆಗಳು ಹಾಗೂ ಎಟಿಎಂ ಕಾರ್ಡ್ ಸೇವೆಗಳನ್ನೂ ನೀಡಲಿದೆ ಎಂದು ಅಂಚೆ ಇಲಾಖೆಯ ಪುತ್ತೂರು ಅಂಚೆ ಅಧೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ.
0 comments:
Post a Comment