ಬಂಟ್ವಾಳ, ಜುಲೈ 19, 2023 (ಕರಾವಳಿ ಟೈಮ್ಸ್) : ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ದ.ಕ. ಮತ್ತು ಉಡುಪಿ ಜಿಲ್ಲೆ ಇದರ ನೂತನ ಬಂಟ್ವಾಳ ವಲಯಾಧ್ಯಕ್ಷರಾಗಿ ಕಿಶೋರ್ ಎಸ್ ಕುಮಾರ್ ಪ್ರೀತಿ ಸ್ಟುಡಿಯೋ ಅವರು ಆಯ್ಕೆಯಾಗಿದ್ದಾರೆ.
ಬಿ ಸಿ ರೋಡಿನ ಲಯನ್ಸ್ ಸಭಾಂಗಣದಲ್ಲಿ ಮಂಗಳವಾರ ನಡೆದ ಎಸೋಸಿಯೇಶನ್ ಮಹಾಸಭೆಯಲ್ಲಿ ಈ ಆಯ್ಕೆ ನಡೆದಿದೆ. ಪ್ರಧಾನ ಕಾರ್ಯದರ್ಶಿಯಾಗಿ ಪ್ರಶಾಂತ್ ಕಲ್ಲಡ್ಕ, ಗೌರವಾಧ್ಯಕ್ಷರಾಗಿ ಹರೀಶ್ ಕುಂದರ್, ಉಪಾದ್ಯಕ್ಷರುಗಳಾಗಿ ಲಕ್ಷ್ಮಣ್ ಮೆಲ್ಕಾರ್ ಹಾಗೂ ವಿಕೇಶ್ ಬಂಟ್ವಾಳ, ಕೋಶಾಧಿಕಾರಿಯಾಗಿ ವರುಣ್ ಕಲ್ಲಡ್ಕ, ಜತೆ ಕಾರ್ಯದರ್ಶಿಗಳಾಗಿ ರಿಚರ್ಡ್ ಹಾಗೂ ವಿವೇಕ್ ಅಮ್ಟಾಡಿ, ಸಂಘಟನಾ ಕಾರ್ಯದರ್ಶಿಯಾಗಿ ಶರತ್ ಕಲ್ಲಡ್ಕ, ಕ್ರೀಡಾ ಕಾರ್ಯದರ್ಶಿಗಳಾಗಿ ಮೋಹನ್ ಏಕದಂತ ಹಾಗೂ ಹರೀಶ್ ಕನ್ಯಾನ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸಂತೋಷ್ ಕೊಯಿಲ, ಮಾಧ್ಯಮ ಪ್ರತಿನಿಧಿಯಾಗಿ ಹರೀಶ್ ನಾಟಿ, ಛಾಯಾ ಕಾರ್ಯದರ್ಶಿಯಾಗಿ ಶ್ರೀ ಪ್ರಸಾದ್ ಅವರನ್ನು ಆರಿಸಲಾಗಿದೆ ಎಂದು ಎಸೋಸಿಯೇಶನ್ ಪ್ರಕಟಣೆ ತಿಳಿಸಿದೆ.
0 comments:
Post a Comment