ಬಂಟ್ವಾಳ, ಜುಲೈ 12, 2023 (ಕರಾವಳಿ ಟೈಮ್ಸ್) : ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರಿಗೆ ನೀಡಿರುವ ಶಿಕ್ಷೆ ಹಾಗೂ ಲೋಕಸಭಾ ಸದಸ್ಯತ್ವ ಸ್ಥಾನದ ಅನರ್ಹತೆ ಖಂಡಿಸಿ ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಾಜಿ ಸಚಿವ ಬಿ ರಮಾನಾಥ ರೈ ನೇತೃತ್ವದಲ್ಲಿ ಬುಧವಾರ ಬೆಳಿಗ್ಗೆ ಬಿ ಸಿ ರೋಡಿನ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಮೌನ ಪ್ರತಿಭಟನೆ ನಡೆಯಿತು.
ಮಾಜಿ ಸಚಿವ ಬಿ ರಮಾನಾಥ ರೈ, ಪಕ್ಷ ಪ್ರಮುಖರಾದ ಹಾಜಿ ಬಿ ಎಚ್ ಖಾದರ್, ಎಂ ಅಶ್ವನಿ ಕುಮಾರ್ ರೈ, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಸದಾಶಿವ ಬಂಗೇರ, ಬಿ ಪದ್ಮಶೇಖರ ಜೈನ್, ಬಿ ಎಂ ಅಬ್ಬಾಸ್ ಅಲಿ, ಮಾಯಿಲಪ್ಪ ಸಾಲ್ಯಾನ್, ಲುಕ್ಮಾನ್, ಬಿ ವಾಸು ಪೂಜಾರಿ, ಇಬ್ರಾಹಿಂ ಕೈಲಾರ್, ಮುಹಮ್ಮದ್ ನಂದರಬೆಟ್ಟು, ಸ್ಟೀವನ್ ಡಿ’ಸೋಜ, ಮುಹಮ್ಮದ್ ನಂದಾವರ, ಅರ್ಶದ್ ಸರವು, ಸಿದ್ದೀಕ್ ಸರವು ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
0 comments:
Post a Comment