ಮಂಗಳೂರು, ಜುಲೈ 06, 2023 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕಳೆದ ಮೂರು-ನಾಲ್ಕು ದಿನಗಳಿಂದ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಹಲವೆಡೆ ಅಪಾರ ಹಾನಿ ಸಂಭವಿಸಿದೆ. ಮಂಗಳೂರು ತಾಲೂಕಿನ ಉಳ್ಳಾಲ ಸಮೀಪದ ಸೋಮೇಶ್ವರ ಬಳಿಯ ಉಚ್ಚಿಲ ಗುಡ್ಡೆ ಸರಕಾರಿ ಶಾಲೆ ಭಾರೀ ಮಳೆಯಿಂದಾಗಿ ಸಂಪೂರ್ಣವಾಗಿ ಜಲಾವೃತಗೊಂಡಿದ್ದು, ಶಾಲೆಯೊಳಗೂ ಮಳೆ ನೀರು ಪ್ರವೇಶಿಸಿದೆ. ಶಾಲೆಯೊಳಗಿನ ಪೀಠೋಪಕರಣಗಳು, ಪಠ್ಯ ಹಾಗೂ ಪಠ್ಯೇತರ ಉಪಕರಣಗಳು ಮಳೆ ನೀರಿನಿಂದ ತೋಯ್ದು ಹೋಗಿದ್ದು, ಅಪಾರ ಹಾನಿ ಸಂಭವಿಸಿದೆ ಎನ್ನಲಾಗಿದೆ. ಶಾಲೆಯ ಸುತ್ತಲೂ ನೀರು ಆವರಿಸಿದ್ದು, ಶಾಲೆಗೆ ತೆರಳುವ ದಾರಿಯೂ ಬಂದ್ ಆಗಿದೆ.
ಸೋಮವಾರದಿಂದ ನಿರಂತರವಾಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದ್ದರಿಂದ ಯಾವುದೇ ಅನಾಹುತ ಅಥವಾ ಹೆಚ್ಚಿನ ನಷ್ಟ ಸಂಭವಿಸಿಲ್ಲ ಎನ್ನಲಾಗಿದೆ.
0 comments:
Post a Comment