ಬಂಟ್ವಾಳ, ಜುಲೈ 10, 2023 (ಕರಾವಳಿ ಟೈಮ್ಸ್) : ತಾಲೂಕಿನ ವಿಟ್ಲ ಕಸಬಾ ಗ್ರಾಮದ ಮಂಗಿಲಪದವು ಅಂಚೆ ವ್ಯಾಪ್ತಿಯ ಒಕ್ಕೆತ್ತೂರು ಮೂಲೆ ನಿವಾಸಿ ಮುಹಮ್ಮದ್ ಶಾಫಿ ಅವರ ಪುತ್ರ ಮುಹಮ್ಮದ್ ಹರ್ಶದ್ ಸಖಾಫಿ ಎಂಬವರ ವಿವಾಹವು ಕೈರಂಗಳ-ವಿದ್ಯಾನಗರ ನಿವಾಸಿ ಹಮೀದ್ ಮುಸ್ಲಿಯಾರ್ ಅವರ ಪುತ್ರಿ ಆಯಿಷತ್ ಝಮೀರಾ ಅಲ್-ಶಾಫಿಯಾ ಎಂಬ ವಧುವಿನೊಂದಿಗೆ ಹಾಗೂ ಮರ್ ಹೂಂ ಅಬ್ದುಲ್ ರಹಿಮಾನ್ ಅವರ ಪುತ್ರಿ ಆಯಿಷತ್ ಜುವೈರಿಯಾ ಅಲ್-ಮಾಹಿರಾ ಎಂಬಾಕೆಯ ವಿವಾಹವು ನೀರಪಳಿಕೆ-ಬಾರೆಬೆಟ್ಟು ನಿವಾಸಿ ಇಬ್ರಾಹಿಂ ಅವರ ಪುತ್ರ ಅಬ್ದುಲ್ ಬಾತಿಷ್ ಸಅದಿ ಎಂಬ ವರನೊಂದಿಗೆ ಭಾನುವಾರ (ಜುಲೈ 9) ಒಕ್ಕೆತ್ತೂರು ನೂರ್ ಮಹಲ್ ಕಮ್ಯುನಿಟಿ ಹಾಲ್ ನಲ್ಲಿ ನಡೆಯಿತು.
ಆಲಡ್ಕ ಬದ್ರಿಯಾ ಜುಮಾ ಮಸೀದಿ ಮುದರ್ರಿಸ್ ಹಾಜಿ ಅಶ್ರಫ್ ಸಖಾಫಿ ಸವಣೂರು ಹಾಗೂ ಅಬ್ಬಾಸ್ ಮದನಿ ಬನಾರಿ ಅವರು ನಿಖಾಹ್ ನೇತೃತ್ವ ವಹಿಸಿದ್ದರು.
ಸಿ ಟಿ ಎಂ ಕುಂಞÂ ತಂಙಳ್, ರಫೀಕ್ ಅಹ್ಸನಿ ಬೋವು, ಪಿ ಕೆ ಎಂ ಸ್ವಾದಿಕ್ ಸಖಾಫಿ ಕಕ್ಕೆಪದವು, ಯೂಸುಫ್ ಮದನಿ ಮಂಗಳಪದವು, ಶಫೀಕ್ ಸಖಾಫಿ ಪದ್ಮುಂಜ, ಝೈನುಲ್ ಆಬಿದ್ ಸಅದಿ ಕಡಬ ಮೊದಲಾದ ಗಣ್ಯರು ಹಾಗೂ ಕುಟುಂಬಿಕರು, ಬಂಧು-ಮಿತ್ರರು ವೈವಾಹಿಕ ಸಮಾರಂಭದಲ್ಲಿ ಭಾಗವಹಿಸಿ ನವ ವಧೂ-ವರರಿಗೆ ವೈವಾಹಿಕ ಶುಭಾಶಯ ಕೋರಿದರು.
0 comments:
Post a Comment