ಬಂಟ್ವಾಳ, ಜುಲೈ 03, 2023 (ಕರಾವಳಿ ಟೈಮ್ಸ್) : ತಾಲೂಕಿನ ಬಿ ಮೂಡ ಗ್ರಾಮದ ಗೂಡಿನಬಳಿ ನಿವಾಸಿ ಚೆರಿಯಮೋನು ಅವರ ಪುತ್ರ, ಕೂಲಿ ಕಾರ್ಮಿಕ ಜಾಫರ್ (22) ಎಂಬಾತ ಭಾನುವಾರ ರಾತ್ರಿ ಮನೆಯಲ್ಲೇ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಸ್ಥಳೀಯವಾಗಿ ಕೂಲಿ ನಾಲಿ ಮಾಡಿಕೊಂಡಿದ್ದ ಈತ ಭಾನುವಾರ ರಾತ್ರಿ ಮನೆ ಮಂದಿಯೊಂದಿಗೆ ಊಟ ಮುಗಿಸಿ ಬಳಿಕ ಮೊಬೈಲಿನಲ್ಲಿ ಮಾತನಾಡುತ್ತಾ ಮನೆಯ ಕೋಣೆಯೊಳಗೆ ಪ್ರವೇಶಿಸಿದ್ದು, ಅರ್ಧ ತಾಸು ಕಳೆದರೂ ಹೊರಗೆ ಬಾರದೆ ಇರುವುದನ್ನು ಕಂಡ ಮನೆ ಮಂದಿ ಹಿಂಬದಿಯ ಕಿಟಕಿ ಬಾಗಿಲು ತೆರದು ನೋಡಿದಾಗ ಕೋಣೆಯೊಳಗೆ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದಾನೆ. ತಕ್ಷಣ ಕೋಣೆಯ ಬಾಗಿಲು ಒಡೆದು ಈತನನ್ನು ಕೆಳಗಿಸಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಆತ ಮೃತಪಟ್ಟಿದ್ದ ಎನ್ನಲಾಗಿದೆ.
ಮೃತ ಜಾಫರ್ ತಂದೆ, ತಾಯಿ, 6 ಮಂದಿ ಸಹೋದರರು, ನಾಲ್ವರು ಸಹೋದರಿಯರ ಸಹಿತ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಬಂಟ್ವಾಳ ನಗರ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಮನೆ ಮಂದಿಗೆ ಬಿಟ್ಟುಕೊಡಲಾಗಿದ್ದು, ಸೋಮವಾರ ಮಧ್ಯಾಹ್ನದ ವೇಳೆಗೆ ಗೂಡಿನಬಳಿ ಮಸೀದಿಯಲ್ಲಿ ದಫನ ಕಾರ್ಯ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
0 comments:
Post a Comment