ಉಡುಪಿ, ಜುಲೈ 01, 2023 (ಕರಾವಳಿ ಟೈಮ್ಸ್) : ಉಡುಪಿ-ಕುತ್ಪಾಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಪೈಲ್ಸ್, ಪಿಸ್ತುಲಾ, ಫಿಶರ್ ಕ್ಲಿನಿಕ್ ಹಾಗೂ ಶಲ್ಯತಂತ್ರ ಚಿಕಿತ್ಸಾ ವಿಭಾಗದ ವತಿಯಿಂದ ತಜ್ಞ ಶಸ್ತ್ರಚಿಕಿತ್ಸಕರಿಂದ ಮೂಲವ್ಯಾಧಿ, ಪಿಸ್ತುಲಾ ಹಾಗೂ ಫಿಶರ್ ರೋಗ ಉಚಿತ ತಪಾಸಣಾ ಶಿಬಿರ ಜುಲೈ 10 ರಿಂದ 15ರವರೆಗೆ ಬೆಳಿಗ್ಗೆ 9 ರಿಂದ ಅಪರಾಹ್ನ 4 ಗಂಟೆವರೆಗೆ ಆಸ್ಪತ್ರೆಯಲ್ಲಿ ನಡೆಯಲಿದೆ.
ಗುದದ್ವಾರದ ಕಾಯಿಲೆಗಳಲ್ಲಿ ಮಲಬದ್ಧತೆ, ಗುದದ್ವಾರದಲ್ಲಿ ಊತ, ನೋವು, ಕೀವು, ತುರಿಕೆ, ಮಲದಲ್ಲಿ ರಕ್ತ ಮುಂತಾದ ಲಕ್ಷಣಗಳನ್ನು ಕಾಣಿಸಿಕೂಳ್ಳುತ್ತವೆ. ಈ ಲಕ್ಷಣಗಳನ್ನು ನಿರ್ಲಕ್ಷಿಸಿದಲ್ಲಿ ಕಾಯಿಲೆ ಉಲ್ಬಣಗೂಂಡು ಹಲವಾರು ತೊಂದರೆಗಳಿಗೆ ಕಾರಣವಾಗಬಹುದು. ಹಾಗಾಗಿ ಈ ಕಾಯಿಲೆಗಳಲ್ಲಿ ಶೀಘ್ರ ತಪಾಸಣೆ ಅತ್ಯಗತ್ಯ.
ಈ ನಿಟ್ಟಿನಲ್ಲಿ ಆಸ್ಪತ್ರೆಯ ವತಿಯಿಂದ ಈ ಶಿಬಿರವನ್ನು ಏರ್ಪಡಿಸಲಾಗಿದ್ದು, ಈ ಸೌಲಭ್ಯಗಳ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬಹುದು.
ಶಿಬಿರದಲ್ಲಿ ಉಚಿತ ತಪಾಸಣೆ, ಪಥ್ಯಾಹಾರ ಸಲಹೆ., ರಿಯಾಯಿತಿ ದರದಲ್ಲಿ ಪ್ರಯೋಗಾಲಯ ಪರೀಕ್ಷೆಗಳನ್ನು ನಡೆಸಲಾಗುವುದು. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0820-2533301, 2533302, 2533303 ಅಥವಾ ಇಮೇಲ್ sdmahu@gmail.com/ infosdmahu@gmail.com ನ್ನು ಸಂಪರ್ಕಿಸಬಹುದು ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.
0 comments:
Post a Comment