ಉಡುಪಿ, ಜುಲೈ 01, 2023 (ಕರಾವಳಿ ಟೈಮ್ಸ್) : ಉಡುಪಿ ಎಸ್.ಡಿ.ಎಂ. ಆಯುರ್ವೇದ ಆಸ್ಪತ್ರೆಯ ವತಿಯಿಂದ ಪ್ರತೀ ತಿಂಗಳ ಮೊದಲನೇ ಸೋಮವಾರ ಏರ್ಪಡಿಸಲಾಗುತ್ತಿರುವ ಉಚಿತ ಕಣ್ಣಿನ ಪೊರೆಯ ತಪಾಸಣಾ ಶಿಬಿರ ಜುಲೈ 3 ರಂದು ಆಸ್ಪತ್ರೆಯ ಶಾಲಾಕ್ಯ ನಿಮಿ ವಿಭಾಗ ಕೊಠಡಿ ಸಂಖ್ಯೆ 10 ರಲ್ಲಿ ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆಯ ವರೆಗೆ ನಡೆಯಲಿದೆ. ಸಾರ್ವಜನಿಕರು ಶಿಬಿರದ ಸದುಪಯೋಗ ಪಡೆದುಕೊಳ್ಳಬಹುದು. ಕಣ್ಣಿನ ಪೊರೆ ಕಂಡು ಬಂದಲ್ಲಿ ತಜ್ಞ ವೈದ್ಯರಿಂದ ಶಸ್ತ್ರ ಚಿಕಿತ್ಸೆಯ ಸೌಲಭ್ಯವನ್ನು ರಿಯಾಯಿತಿ ದರದಲ್ಲಿ ಒದಗಿಸಲಾಗುವುದು ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ತಿಳಿಸಿದ್ದಾರೆ.
1 July 2023
- Blogger Comments
- Facebook Comments
Subscribe to:
Post Comments (Atom)
0 comments:
Post a Comment