ಬಂಟ್ವಾಳ, ಜುಲೈ 09, 2023 (ಕರಾವಳಿ ಟೈಮ್ಸ್) : ಚುನಾವಣಾಪೂರ್ವದಲ್ಲಿ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ರಾಜ್ಯದ ಜನತೆಗೆ ನೀಡಿರುವ ಎಲ್ಲಾ ಆಶ್ವಾಸನೆಗಳಿಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತನ್ನ ಜನಪರ ಹಾಗೂ ನ್ಯಾಯ ಸಮಾನತೆಯ ಬಜೆಟ್ ಮೂಲಕ ಬದ್ದತೆ ಪ್ರದರ್ಶಿಸಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ, ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ ಬಣ್ಣಿಸಿದ್ದಾರೆ.
ಸಿದ್ದರಾಮಯ್ಯ ಬಜೆಟ್ ಬಗ್ಗೆ ಪತ್ರಿಕೆಗೆ ಪ್ರತಿಕ್ರಯಿಸಿದ ಅವರು, ಸಿದ್ದರಾಮಯ್ಯ ಓರ್ವ ಆರ್ಥಿಕ ಮುತ್ಸದ್ದಿ ಎಂಬುದು ಅವರು ಮಂಡಿಸಿದ ದಾಖಲೆಯ 14ನೇ ಬಜೆಟಿನಲ್ಲೂ ಸಾಬೀತಾಗಿದೆ. ರಾಜ್ಯದ ಎಲ್ಲ ವರ್ಗದ ಜನರ ಹಿತ ಪರಿಗಣಿಸಿ ಸಾಮಾಜಿಕ ನ್ಯಾಯವನ್ನು ಸಾರುವ ಬಜೆಟನ್ನು ಅವರು ಮಂಡಿಸಿದ್ದಾರೆ. ಸಮಾಜದ ಎಲ್ಲ ವರ್ಗದ ಜನರಿಗೂ ಸಿದ್ದರಾಮಯ್ಯ ಬಜೆಟ್ ಪಾಲು ಒದಗಿಸಿದೆ. ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳಿಗೂ ಜನಸಾಮಾನ್ಯರಿಗೆ ಹೊರೆಯಾಗದಂತೆ ಆರ್ಥಿಕ ಮೂಲ ಕ್ರೋಢೀಕರಿಸಿದ ಅವರು ಇತರ ಜನಪರ ಯೋಜನೆಗಳನ್ನೂ ಘೋಷಿಸುವ ಮೂಲಕ ಸುಭಿಕ್ಷಾ ರಾಜ್ಯ ನಿರ್ಮಾಣಕ್ಕೆ ಬೇಕಾದ ಎಲ್ಲ ಪ್ರಯತ್ನವನ್ನು ಶಕ್ತಿ ಮೀರಿ ನಡೆಸಿರುವುದು ಬಜೆಟ್ ನಲ್ಲಿ ಸಾಬೀತಾಗಿದೆ ಎಂದು ಅಬ್ಬಾಸ್ ಅಲಿ ಶ್ಲಾಘಿಸಿದ್ದಾರೆ.
0 comments:
Post a Comment