ಬಂಟ್ವಾಳ, ಜುಲೈ 15, 2023 (ಕರಾವಳಿ ಟೈಮ್ಸ್) : ತಾಲೂಕಿನ ಅಮ್ಟೂರು ಗ್ರಾಮದ ಕೆದಿಲ ನಿವಾಸಿ ಅಬ್ದುಲ್ಲಾ ಯಾನೆ ಇಚ್ಚ (65) ಅವರು ಅಲ್ಪಕಾಲದ ಅನಾರೋಗ್ಯದಿಂದ ಶುಕ್ರವಾರ (ಜುಲೈ 14) ರಾತ್ರಿ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಕೆದಿಲ ಇಚ್ಚ ಎಂದೇ ಸಾರ್ವಜನಿಕವಾಗಿ ಪರಿಚಿತರಾಗಿರುವ ಇವರು ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದರು. ಸ್ಥಳೀಯವಾಗಿ ಪರೋಪಕಾರಿ ಇಚ್ಚ ಎಂದು ಜನಾನುರಾಗಿಯಾಗಿದ್ದ ಇವರು ಜನರ ವೈಯುಕ್ತಿಕ ಹಾಗೂ ಸ್ಥಳೀಯವಾಗಿ ಸಾರ್ವಜನಿಕ ಸಮಸ್ಯೆಗಳಿಗೆ ಜನಪ್ರತಿನಿಧಿಗಳು, ರಾಜಕೀಯ ನಾಯಕರು ಅಥವಾ ಅಧಿಕಾರಿಗಳನ್ನು ಸಂಪರ್ಕಿಸಿ ಪರಿಹರಿಸಿಕೊಡುವ ನಿಟ್ಟಿನಲ್ಲಿ ತಕ್ಷಣ ಕಾರ್ಯಪ್ರವೃತ್ತರಾಗುತ್ತಿದ್ದರು. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸಾಮಾಜಿಕ ಸೇವಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಪರಿಸರದ ಹಾಗೂ ಆಸುಪಾಸಿನ ಜನರಿಗೆ ತೀರಾ ಹತ್ತಿರವಾಗಿದ್ದರು. ಮೃತರು ಪತ್ನಿ, ಓರ್ವ ಪುತ್ರ, ಮೂವರು ಪುತ್ರಿಯರ ಸಹಿತ ಅಪಾರ ಬಂಧು-ಮಿತ್ರರ್ರನ್ನು ಅಗಲಿದ್ದಾರೆ.
0 comments:
Post a Comment