ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ 4ನೇ ಮಹತ್ವಪೂರ್ಣ ಗೃಹಲಕ್ಷ್ಮೀ ಯೋಜನೆಯ ನೋಂದಣಿಗೆ ಚಾಲನೆ : ಮೊದಲ ಅಧಿವೇಶನ ಮುಗಿಯುವ ಮುನ್ನ 4 ಗ್ಯಾರಂಟಿಗೆ ಚಾಲನೆ ನೀಡಿ ಮಾತು ಉಳಿಸಿಕೊಂಡು ಬದ್ದತೆ ಪ್ರದರ್ಶಿಸಿದ ಸರಕಾರ - Karavali Times ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ 4ನೇ ಮಹತ್ವಪೂರ್ಣ ಗೃಹಲಕ್ಷ್ಮೀ ಯೋಜನೆಯ ನೋಂದಣಿಗೆ ಚಾಲನೆ : ಮೊದಲ ಅಧಿವೇಶನ ಮುಗಿಯುವ ಮುನ್ನ 4 ಗ್ಯಾರಂಟಿಗೆ ಚಾಲನೆ ನೀಡಿ ಮಾತು ಉಳಿಸಿಕೊಂಡು ಬದ್ದತೆ ಪ್ರದರ್ಶಿಸಿದ ಸರಕಾರ - Karavali Times

728x90

19 July 2023

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ 4ನೇ ಮಹತ್ವಪೂರ್ಣ ಗೃಹಲಕ್ಷ್ಮೀ ಯೋಜನೆಯ ನೋಂದಣಿಗೆ ಚಾಲನೆ : ಮೊದಲ ಅಧಿವೇಶನ ಮುಗಿಯುವ ಮುನ್ನ 4 ಗ್ಯಾರಂಟಿಗೆ ಚಾಲನೆ ನೀಡಿ ಮಾತು ಉಳಿಸಿಕೊಂಡು ಬದ್ದತೆ ಪ್ರದರ್ಶಿಸಿದ ಸರಕಾರ

ಬೆಂಗಳೂರು, ಜುಲೈ 19, 2023 (ಕರಾವಳಿ ಟೈಮ್ಸ್) : ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಚುನಾವಣಾ ಪೂರ್ವದಲ್ಲಿ ರಾಜ್ಯದ ಜನರಿಗೆ ನೀಡಿದ್ದ ಐದು ಗ್ಯಾರಂಟಿ ಯೋಜನೆಗಳ ಪೈಕಿ ನಾಲ್ಕನೇ ಮಹತ್ವದ ಗ್ಯಾರಂಟಿ ಯೋಜನೆಯಾಗಿರುವ ಗೃಹಲಕ್ಷ್ಮೀ ಯೋಜನೆಯ ನೋಂದಣಿ ಪ್ರಕ್ರಿಯೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಸಂಜೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಚಾಲನೆ ನೀಡಿದರು. 

ಈ ಯೋಜನೆಗೆ ಜನ ನಾಳೆಯಿಂದ ನೋಂದಣಿ ಪ್ರಕ್ರಿಯೆ ಆರಂಭಿಸಬಹುದಾಗಿದೆ. ರಾಜ್ಯದಲ್ಲಿ 1.28 ಕೋಟಿ ಮಹಿಳೆಯರಿಗೆ ಈ ಗೃಹ ಲಕ್ಷ್ಮಿ ಯೋಜನೆಯ ಲಾಭ ಸಿಗಲಿದೆ. ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಲಕ್ಷ್ಮಿ ಹೆಬ್ಬಾಳಕರ್ ಹಾಗೂ ಸಚಿವರಾದ ರಾಮಲಿಂಗಾರೆಡ್ಡಿ, ಕೆ.ಎಚ್. ಮುನಿಯಪ್ಪ, ಡಾ. ಎಚ್.ಸಿ. ಮಹದೇವಪ್ಪ, ರಹೀಂ ಖಾನ್, ಬೈರತಿ ಸುರೇಶ್ ಮತ್ತು ಶಾಸಕರು, ಸರಕಾರದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಯೋಜನೆಯಡಿ ಆಗಸ್ಟ್ 15ಕ್ಕೆ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಸಂದಾಯ ಆಗಲಿದೆ. ರೇಷನ್ ಕಾರ್ಡಿನಲ್ಲಿ ಮನೆಯ ಯಜಮಾನಿಯಾಗಿರುವವರು ಯೋಜನೆಯ ಫಲಾನುಭವಿಯಾಗಲಿದ್ದಾರೆ. ಅವರ ಪತಿಯ ಆಧಾರ್ ಕಾರ್ಡ್ ನೀಡಬೇಕು. ಜಿಎಸ್‍ಟಿ ಹಾಗೂ ಆದಾಯ ತೆರಿಗೆ ಪಾವತಿದಾರರ ಪತ್ನಿಯರಿಗೆ ಈ ಯೋಜನೆ ಅನ್ವಯವಾಗುವುದಿಲ್ಲ. ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್, ಗ್ರಾಪಂಗಳಲ್ಲಿರುವ ಬಾಪೂಜಿ ಸೇವಾ ಕೇಂದ್ರಗಳಲ್ಲಿ ನೋಂದಣಿಗೆ ಅವಕಾಶ ಇದೆ. ಸರಕಾರ ನೇಮಕ ಮಾಡಿರುವ ಪ್ರಜಾಪ್ರತಿನಿಧಿಗಳು ಮನೆ ಬಾಗಿಲಿಗೆ ಬಂದು ನೋಂದಣಿ ಮಾಡಲಿದ್ದಾರೆ.

ರೇಷನ್ ಕಾರ್ಡಿನಲ್ಲಿ ಯಜಮಾನಿಯಾಗಿ ಗುರುತಿಸಿರುವ ಮಹಿಳೆಯ ಮೊಬೈಲ್ ಸಂಖ್ಯೆಗೆ ನೋಂದಣಿ ದಿನಾಂಕ, ಸಮಯ, ಸ್ಥಳದ ವಿವರ ಎಸ್‍ಎಂಎಸ್ ಮೂಲಕ ಕಳುಹಿಸಲಾಗುತ್ತದೆ. ನೋಂದಣಿ ಮಾಡಿಸಲು ಯಾವುದೇ ರೀತಿಯ ಶುಲ್ಕ ಇರುವುದಿಲ್ಲ. ಪ್ರಜಾಪ್ರತಿನಿಧಿಗಳು ಮನೆ ಬಾಗಿಲಿಗೆ ತೆರಳಿ ನೋಂದಣಿ ಮಾಡಲಿದ್ದಾರೆ. ಯೋಜನೆಯ ಬಗ್ಗೆ ಯಾವುದೇ ಗೊಂದಲ ಅಥವಾ ಸಮಸ್ಯೆಗಳಿದ್ದಲ್ಲಿ 1902 ಸಂಖ್ಯೆಗೆ ಕರೆ ಅಥವಾ 8147500500 ಸಂಖ್ಯೆಗೆ ಎಸ್‍ಎಂಎಸ್ ಮಾಡಿ ಮಾಹಿತಿ ಪಡೆಯಬಹುದು. ನಿಗದಿತ ಸಮಯಕ್ಕೆ ನೋಂದಣಿ ಮಾಡಿಸಲು ಹೋಗಲು ಸಾಧ್ಯವಾಗದಿದ್ದರೆ ಮುಂದಿನ ಯಾವುದೇ ದಿನಾಂಕದಂದು ಸಂಜೆ 5 ರಿಂದ 7 ಗಂಟೆಯೊಳಗೆ ಭೇಟಿ ನೀಡಿ ನೋಂದಣಿ ಮಾಡಿಸಿಕೊಳ್ಳಬಹುದು. ಆಧಾರ್ ಜೋಡಣೆಯಾಗಿರುವ ಬ್ಯಾಂಕ್ ಬಿಟ್ಟು ಬೇರೆ ಬ್ಯಾಂಕ್ ಖಾತೆಗೂ ನೋಂದಣಿ ಮಾಡಿಸಬಹುದು. ಹೀಗಿದ್ದಾಗ ಬ್ಯಾಂಕ್ ಖಾತೆ ಪಾಸ್ ಪುಸ್ತಕ ಅಪ್ಲೋಡ್ ಮಾಡತಕ್ಕದ್ದು. ನೋಂದಣಿ ಆದಾಗ ಮಂಜೂರಾತಿ ಪತ್ರ ನೀಡಲಾಗುತ್ತದೆ. ಪ್ರಜಾಪ್ರತಿನಿಧಿಗಳಲ್ಲಿ ನೋಂದಣಿಯಾದರೆ ಮಂಜೂರಾತಿ ಪತ್ರ ತಡವಾಗಿ ತಲುಪಲಿದೆ.

  • Blogger Comments
  • Facebook Comments

0 comments:

Post a Comment

Item Reviewed: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ 4ನೇ ಮಹತ್ವಪೂರ್ಣ ಗೃಹಲಕ್ಷ್ಮೀ ಯೋಜನೆಯ ನೋಂದಣಿಗೆ ಚಾಲನೆ : ಮೊದಲ ಅಧಿವೇಶನ ಮುಗಿಯುವ ಮುನ್ನ 4 ಗ್ಯಾರಂಟಿಗೆ ಚಾಲನೆ ನೀಡಿ ಮಾತು ಉಳಿಸಿಕೊಂಡು ಬದ್ದತೆ ಪ್ರದರ್ಶಿಸಿದ ಸರಕಾರ Rating: 5 Reviewed By: karavali Times
Scroll to Top