ಕಡಬ, ಜುಲೈ 17, 2023 (ಕರಾವಳಿ ಟೈಮ್ಸ್) : ಎರಡು ವರ್ಷಗಳ ಹಿಂದೆ ನಡೆದ ಕಳವು ಪ್ರಕರಣ ಬೇಧಿಸಿದ ಕಡಬ ಠಾಣಾ ಪೊಲೀಸರು ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ಕಡಬ ತಾಲೂಕು, ರೆಂಜಿಲಾಡಿ ಗ್ರಾಮದ ಪೆಲತ್ರಾಣೆ ನಿವಾಸಿ ಬದ್ರುದ್ದೀನ್ ಅವರ ಪುತ್ರ ಮುಹಮ್ಮದ್ ತಾಜುದ್ದೀನ್ (26) ಹಾಗೂ ಅಬ್ಬಾಸ್ ಅವರ ಪುತ್ರ ಸದ್ದಾಂ (32) ಎಂದು ಹೆಸರಿಸಲಾಗಿದೆ.
ಕಡಬ ಠಾಣಾ ವ್ಯಾಪ್ತಿಯಲ್ಲಿ 2021 ರಲ್ಲಿ ನಡೆದ ಮನೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ವರ್ಗೀಸ್ ಎಂಬವರು ನೀಡಿದ ದೂರಿನಂತೆ ಕಡಬ ಪೆÇಲೀಸು ಠಾಣಾ ಅಪರಾಧ ಕ್ರಮಾಂಕ 105/2021 ಕಲಂ 454, 380 ಐಪಿಸಿಯಂತೆ ಪ್ರಕರಣ ದಾಖಲಾಗಿತ್ತು. ಈ ಸಂದರ್ಭ ಒಟ್ಟು 41 ಗ್ರಾಂ ಚಿನ್ನಾಭರಣ ಕಳವಾಗಿತ್ತು.
ಈ ಸಂಬಂಧ ಕಾರ್ಯಾಚರಣೆ ನಡೆಸಿದ ಕಡಬ ಪೊಲೀಸರು ಪ್ರಕರಣ ಬೇಧಿಸಿ ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರಿಂದ 85 ಸಾವಿರ ರೂಪಾಯಿ ಮೌಲ್ಯದ 17 ಗ್ರಾಂ ತೂಕದ ಚಿನ್ನದ ಸರವನ್ನು ಪೊಲೀಸರು ಸ್ವಾದೀನಪಡಿಸಿಕೊಂಡಿದ್ದಾರೆ.
ಬಂಧಿತರ ಆರೋಪಿಗಳ ಪೈಕಿ ಸದ್ದಾಂ ವಿರುದ್ದ ಹಿಂದೆಯೂ ವಿವಿಧ ಠಾಣೆಗಳಲ್ಲಿ ವಿವಿಧ ಪ್ರಕರಣ ದಾಖಲಾಗಿದ್ದು, ಕಡಬ ಪೊಲೀಸ್ ಠಾಣೆಯಲ್ಲಿ 5 ಹಾಗೂ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಪ್ರಕರಣ ಬೇಧಿಸುವಲ್ಲಿ ಕಡಬ ಠಾಣಾ ಎಸ್ಸೈ ಆಂಜನೇಯ ರೆಡ್ಡಿ ಜಿ ವಿ, ಸಿಬ್ಬಂದಿಗಳಾದ ರಾಜು ನಾಯ್ಕ, ಭವಿತ್ ರೈ ಹಾಗೂ ಸಿರಾಜುದ್ದೀನ್ ಅವರು ಕಾರ್ಯಾಚರಣೆ ನಡೆಸಿದ್ದಾರೆ.
0 comments:
Post a Comment