ಮಂಗಳೂರು, ಜೂನ್ 28, 2023 (ಕರಾವಳಿ ಟೈಮ್ಸ್) : ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಕೇಂದ್ರೀಯ ಸಮಿತಿ (ಎಐಸಿಸಿಟಿಯು) ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯಾದ್ಯಂತ ನಡೆಸಲಾದ ಕಾರ್ಮಿಕರ ಹಕ್ಕೊತ್ತಾಯ ದಿನದ ಅಂಗವಾಗಿ ಮಂಗಳೂರು ಮಿನಿ ವಿಧಾನಸೌಧದ ಮುಂಭಾಗ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾಕಾರರನ್ನುದ್ದೇಶಿಸಿ ಎಐಸಿಸಿಟಿಯು ಜಿಲ್ಲಾದ್ಯಕ್ಷ ರಾಮಣ್ಣ ವಿಟ್ಲ, ಜಿಲ್ಲಾ ಕಾರ್ಯದರ್ಶಿ ಮೋಹನ್ ಕೆ ಇ, ಜಿಲ್ಲಾ ಮುಖಂಡರಾದ ರಾಜಾ ಚೆಂಡ್ತಿಮಾರ್, ಭರತ್ ಕುಮಾರ್, ನ್ಯಾಯವಾದಿ ತುಳಸೀದಾಸ್ ಆರ್, ಪ್ರಮುಖರಾದ ದಿನೇಶ್ ಆಚಾರಿ ಮಾಣಿ, ಇಬ್ರಾಹಿಂ ಮೈಂದಾಳ, ಮೊಯಿದಿನ್ ಕೆದುಮೂಲೆ, ಉಮೇಶ್ ವಾಮದಪದವು, ಲಿಯಾಕತ್ ಖಾನ್, ಸುಲೈಮಾನ್, ಕೃಷ್ಣಪ್ಪ ಪುದ್ದೊಟ್ಟು, ಅಝೀಝ್ ಉಪ್ಪಿನಂಗಡಿ, ಅಜಯ್ ಕುಮಾರ್ ಮಂಗಳೂರು ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಬಳಿಕ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು
0 comments:
Post a Comment