ಉಡುಪಿ, ಜೂನ್ 08, 2023 (ಕರಾವಳಿ ಟೈಮ್ಸ್) : ಇಲ್ಲಿನ ಕುತ್ಪಾಡಿ ಶ್ರೀ ಧರ್ಮಸ್ಥಳ ಮಂಜನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಕಾಲೇಜಿನ ದ್ರವ್ಯಗುಣ ವಿಭಾಗ ಹಾಗೂ ಕಾಲೇಜು ಪುಷ್ಠೀಕರಣ ಸಮಿತಿಯ ವತಿಯಿಂದ ಪ್ಲಾಸ್ಟಿಕ್ ಮಾಲಿನ್ಯಕ್ಕೆ ಪರಿಹಾರಗಳು ಅದನ್ನು ತಡೆಗಟ್ಟುವ ಕುರಿತು ಅತಿಥಿ ಉಪನ್ಯಾಸ ಹಾಗೂ ಸ್ವಚ್ಛತಾ ಅಭಿಯಾನ ನಡೆಯಿತು.
ವಾಸುದೇವ ಗಡಿಯಾರ್ ಅವರು ಸಸಿ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ಡಾ ಮಮತಾ ಕೆ ವಿ ಮಾತನಾಡಿ, ಕಾಲೇಜಿನ ಆವರಣವನ್ನು ಪ್ಲಾಸ್ಟಿಕ್ ಮುಕ್ತರಾಗಿಸಬೇಕೆಂದು ಪಣ ತೊಡಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಇಂದ್ರಾಳಿ ಉಪವನ ನರ್ಸರಿಯ ಮಾಲಿಕ ವಾಸುದೇವ ಗಡಿಯಾರ್, ಶ್ರೀಮತಿ ಪೂರ್ಣಿಮಾ ಅವರು ಸಸ್ಯ ಕಸಿ/ ವರ್ಗಾವಣೆ ಪತ್ರದ ಬಗ್ಗೆ ಅತಿಥಿ ಉಪನ್ಯಾಸಗೈದರು. ಅವರು ಸಸ್ಯ ಕಸಿ ಇತಿಹಾಸ, ಸಸ್ಯವನ್ನು ಸ್ಥಳಾಂತರಿಸುವುದು ಮತ್ತು ಅದರ ಪ್ರಯೋಜನಗಳು ಹಾಗೂ ಅನುಸರಿಸಬೇಕಾದ ವಿವಿಧ ವಿಧಾನಗಳ ಬಗ್ಗೆ ವಿವರಿಸಿದರು.
ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ ನಾಗರಾಜ್ ಎಸ್, ಕ್ಯಾಂಪಸ್ ನಿರ್ವಹಣಾ ಸಮಿತಿಯ ಡೀನ್ ಡಾ ವಿದ್ಯಾ ಬಲ್ಲಾಳ್, ದ್ರವ್ಯಗುಣ ವಿಭಾಗದ ಮುಖ್ಯಸ್ಥ ಹಾಗೂ ಪ್ರಾಧ್ಯಾಪಕ ಡಾ ಶ್ರೀಕಾಂತ್ ಪಿ ಭಾಗವಹಿಸಿದ್ದರು.
ಪ್ಲಾಸ್ಟಿಕ್ ಮಾಲಿನ್ಯವನ್ನು ತಡೆಗಟ್ಟುವ ಶೀರ್ಷಿಕೆಯ ಕುರಿತು ಪ್ರಥಮ ಬಿಎಂಎಸ್ ವಿದ್ಯಾರ್ಥಿಗಳು ನಾಟಕ ಪ್ರಸ್ತುತ ಪಡಿಸಿದರು. ದ್ರವ್ಯಗುಣ ವಿಭಾಗದ ಸಹ ಪ್ರಾಧ್ಯಾಪಕ ಡಾ ಮೊಹಮ್ಮದ್ ಫೈಸಲ್ ಮತ್ತು ಪ್ರಾಧ್ಯಾಪಕ ಡಾ ಶ್ರೀಕಾಂತ್ ಪಿ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಂದ ಕಾಲೇಜಿನ ಆವರಣದಲ್ಲಿ ಸ್ವಚ್ಛತಾ ಅಭಿಯಾನ ಕೈಗೊಳ್ಳಲಾಯಿತು.
ದ್ರವ್ಯಗುಣ ವಿಭಾಗದ ಸಹ ಪ್ರಾಧ್ಯಾಪಕ ಡಾ ಸುಮ ವಿ ಮಲ್ಯ ಸ್ವಾಗತಿಸಿ, ಶರೀರ ಕ್ರಿಯಾ ವಿಭಾಗದ ಮುಖ್ಯಸ್ಥ ಹಾಗೂ ಪ್ರಾಧ್ಯಾಪಕ ಡಾ ಎಸ್ ಆರ್ ಮೊಹರೆರ್ ವಂದಿಸಿದರು. ತೃತೀಯ ಬಿಎಂಎಸ್ ವಿದ್ಯಾರ್ಥಿನಿ ಶ್ರಾವ್ಯ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮ ಸಂಯೋಜನೆಯಲ್ಲಿ ವಿಭಾಗದ ಇತರ ಸದಸ್ಯರಾದ ಡಾ ರವಿಕೃಷ್ಣ ಎಸ್, ಡಾ ತೇಜಸ್ವಿ ನಾಯ್ಕ್, ಡಾ ಪೂರ್ಣಿಮಾ ಎ ಭಾಗವಹಿಸಿದ್ದರು.
0 comments:
Post a Comment