ಉಡುಪಿ, ಜೂನ್ 05, 2023 (ಕರಾವಳಿ ಟೈಮ್ಸ್) : ಜಿಲ್ಲೆಯ ಕುತ್ಪಾಡಿ ಶ್ರೀ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಇದರ ಪ್ರಸೂತಿ ತಂತ್ರ ಮತ್ತು ಸ್ತ್ರೀರೋಗ ವಿಭಾಗದ ವತಿಯಿಂದ ಆಸಕ್ತ ಮಹಿಳೆಯರಿಗೆ ಮೂರು ವಾರಗಳ ಬಾಣಂತಿ-ಮಗು ಆರೈಕೆ ತರಬೇತಿ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದಲ್ಲಿ ಬಾಣಂತಿಯ ವಿಶೇಷ ಮದ್ದು ತಯಾರಿಕೆ, ಊಟ, ಉಪಚಾರ, ಮಗುವಿನ ಸ್ನಾನ ಹಾಗೂ ಔಷಧ ತಯಾರಿಕಾ ವಿಧಾನ ಇತ್ಯಾದಿಗಳ ಬಗ್ಗೆ ತರಬೇತಿ ನೀಡಲಾಗುವುದು. ತರಬೇತಿ ದಿನಾಂಕ ಶೀಘ್ರದಲ್ಲೇ ಪ್ರಕಟಿಸಲಾಗುವುದು. ಎಸ್.ಎಸ್.ಎಲ್.ಸಿ ಹಾಗೂ ಮೇಲ್ಪಟ್ಟ ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಜೂನ್ 10 ಆಗಿರುತ್ತದೆ. ತರಬೇತಿ ಸಮಯ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5ರವರೆಗೆ. ಕಾರ್ಯಾಗಾರದ ಶುಲ್ಕ 10 ಸಾವಿರ ರೂಪಾಯಿ ಆಗಿರುತ್ತದೆ.
ಕಾರ್ಯಾಗಾರದಲ್ಲಿ ಮಹಿಳಾ ಅಭ್ಯರ್ಥಗಳಿಗೆ ಮಾತ್ರ ಅವಕಾಶ, ಒಟ್ಟು 20 ಅಭ್ಯರ್ಥಿಗಳಿಗೆ ಮಾತ್ರ ಅವಕಾಶ, ಮೊದಲು ನೊಂದಾಯಿಸಿದವರಿಗೆ ಮೊದಲ ಆದ್ಯತೆ, 20 ವರ್ಷ ಮೇಲ್ಪಟ್ಟವರು ಭಾಗವಹಿಸಬಹುದು. ಈ ಬಗ್ಗೆ ಹೆಚ್ಚಿನ ವಿವರಗಳಿಗೆ ಮೊಬೈಲ್ ಸಂಖ್ಯೆ 8660819737 ಅಥವಾ 8971027950 ಗಳನ್ನು ಸಂಪರ್ಕಿಸಬಹುದು ಎಂದು ಆಸ್ಪತ್ರೆ ಪ್ರಕಟಣೆ ತಿಳಿಸಿದೆ.
0 comments:
Post a Comment