ಬಂಟ್ವಾಳ, ಜೂನ್ 06, 2023 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಎಸ್ ಎಲ್ ಎನ್ ಪಿ ವಿದ್ಯಾಲಯದ ವಿದ್ಯಾರ್ಥಿನಿ ಕೃತಜ್ಞಾ ಧನರಾಜ್ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಮರು ಮೌಲ್ಯಮಾಪನದಲ್ಲಿ 15 ಹೆಚ್ಚುವರಿ ಅಂಕಗಳನ್ನು ಪಡೆದು ಒಟ್ಟು 612 ಅಂಕಗಳೊಂದಿಗೆ 97.92 ಶೇಕಡಾ ಫಲಿತಾಂಶ ದಾಖಲಿಸಿದ್ದು, ಶಾಲೆಗೆ ಟಾಪರ್ ಆಗಿ ಮೂಡಿ ಬಂದಿದ್ದಾಳೆ.
ಈ ಹಿಂದೆ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಗೊಂಡಾಗ ಈಕೆ 597 ಅಂಕಗಳನ್ನು ಗಳಿಸಿದ್ದಳು. ಇದನ್ನು ಪ್ರಶ್ನಿಸಿ ಆಕೆ ಮರು ಮೌಲ್ಯ ಮಾಪನಕ್ಕೆ ಅರ್ಜಿ ಸಲ್ಲಿಸಿದ್ದಳು. ಇದೀಗ ಮರು ಮೌಲ್ಯ ಮಾಪನದ ಫಲಿತಾಂಶ ಪ್ರಕಟಗೊಂಡಿದ್ದು, ಈಕೆಗೆ 15 ಅಂಕಗಳು ಹೆಚ್ಚುವರಿಯಾಗಿ ಬಂದಿರುತ್ತದೆ.
ಈಕೆ ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢಶಾಲಾ ಕನ್ನಡ ಭಾಷಾ ಶಿಕ್ಷಕ ಧನರಾಜ್ ಡಿ ಆರ್ ಹಾಗೂ ಮಂಚಿ-ಕುಕ್ಕಾಜೆ ಸರಕಾರಿ ಪ್ರೌಢಶಾಲಾ ಆಂಗ್ಲ ಭಾಷಾ ಶಿಕ್ಷಕಿ ಶ್ರೀಮತಿ ಕುಸುಮಾ ಎಸ್ ಬಿ ದಂಪತಿಗಳ ಪತ್ರಿಯಾಗಿದ್ದಾಳೆ.
0 comments:
Post a Comment