ಬಂಟ್ವಾಳ, ಜೂನ್ 29, 2023 (ಕರಾವಳಿ ಟೈಮ್ಸ್) : ತಾಲೂಕಿನಲ್ಲಿ ಕಳೆದೆರಡು ದಿನಗಳಿಂದ ಮುಂಗಾರು ಚುರುಕಾಗಿದ್ದು, ಮಳೆ ಹಾನಿ ಪ್ರಕರಣಗಳೂ ವರದಿಯಾಗಿವೆ. ವಿಟ್ಲ ಕಸಬಾ ಗ್ರಾಮದ ಉಕ್ಕುಡ ಸಮೀಪದ ಕಲ್ಲುರ್ಟಿಯಡ್ಕ ನಿವಾಸಿ ಶ್ರೀಮತಿ ಗೌರಿ ಯಾನೆ ಸರೋಜ ಕೋಂ ನಾರಾಯಣ ನಾಯ್ಕ ಅವರ ಮನೆ ಛಾವಣಿ ಭಾಗಶಃ ಹಾನಿಗೊಳಗಾಗಿದೆ.
ವೀರಕಂಭ ಗ್ರಾಮದ ಗುಡ್ಡ ತೋಟ ಖಾನ ನಿವಾಸಿ ರೇವತಿ ಅವರ ಮನೆ ಮೇಲೆ ಮರ ಬಿದ್ದು ಭಾಗಶ: ಹಾನಿಯಾಗಿದೆ. ಬಂಟ್ವಾಳ ಕಸಬಾ ಗ್ರಾಮದ ಅರಬ್ಬಿ ಗುಡ್ಡೆ ನಿವಾಸಿ ಜಯ ಕುಲಾಲ್ ಬಿನ್ ಈಶ್ವರ ಮೂಲ್ಯ ಅವರ ವಾಸ್ತವ್ಯದ ಮನೆಗೆ ತೆಂಗಿನ ಮರ ಬಿದ್ದು ಮನೆಗೆ ಭಾಗಶಃ ಹಾನಿ ಉಂಟಾಗಿದೆ.
ಬಿ ಮೂಡ ಗ್ರಾಮದ ಅಜ್ಜಿಬೆಟ್ಟು ಶಾಲಾ ಬಳಿ ನಿವಾಸಿ ರವಿರಾಜ್ ಬಿನ್ ನಾರಾಯಣ ಆಳ್ವ ಅವರ ಮನೆ ಬದಿಯ ಬರೆ ಜರಿಯುವ ಭೀತಿ ಉಂಟಾಗಿದೆ. ಸದ್ರಿ ಮನೆ ಮಂದಿ ತಮ್ಮ ಮನೆ ಸಮೀಪದಲ್ಲೇ ಇರುವ ತಮ್ಮನ ಮನೆಗೆ ಸ್ಥಳಾಂತರಗೊಳ್ಳುವುದಾಗಿ ತಿಳಿಸಿರುವುದಾಗಿ ತಾಲೂಕು ಕಚೇರಿ ಮಾಹಿತಿ ತಿಳಿಸಿದೆ.
0 comments:
Post a Comment