ಬಂಟ್ವಾಳ, ಜೂನ್ 13, 2023 (ಕರಾವಳಿ ಟೈಮ್ಸ್) : ಬಂಟ್ವಾಳ ತಾಲೂಕಿನಲ್ಲಿ ಕಳೆದೆರಡು ದಿನಗಳಿಂದ ಆರಂಭವಾದ ಮುಂಗಾರು ಮಳೆಗೆ ಕೆಲವೆಡೆ ಮನೆಗಳಿಗೆ ಹಾನಿ ಸಂಭವಿಸಿದೆ.
ಗೋಳ್ತಮಜಲು ಗ್ರಾಮದ ಮಾಣಿಮಜಲು ನಿವಾಸಿ ವಾರಿಜಾ ಕೋಂ ಕೃಷ್ಣಪ್ಪ ಪೂಜಾರಿ ಅವರ ವಾಸ್ತವ್ಯದ ಮನೆ, ಪಿಲಿಂಜ ನಿವಾಸಿ ದೇವಕಿ ಕೋಂ ಸೀನ ಪೂಜಾರಿ ಅವರ ವಾಸ್ತವ್ಯದ ಮನೆ, ಕೇಪು ಗ್ರಾಮದ ಮೈರ ನಿವಾಸಿ ಸತೀಶ್ ಬಿನ್ ಚಂದ ಅವರ ವಾಸ್ತವ್ಯದ ಮನೆ, ವಿಟ್ಲ ಪಡ್ನೂರು ಗ್ರಾಮದ ಪಡಾರು ನಿವಾಸಿ ಗುಲಾಬಿ ಕೋಂ ಮಾಂಕು ಸಪಲ್ಯ ಅವರ ವಾಸ್ತವ್ಯದ ಮನೆಗಳಿಗೆ ಆರಂಭದ ಮಳೆಗೆ ತೀವ್ರ ಹಾನಿಯಾಗಿರುವ ಬಗ್ಗೆ ಬಂಟ್ವಾಳ ತಾಲೂಕು ಕಚೇರಿ ಮಾಹಿತಿ ತಿಳಿಸಿದೆ.
0 comments:
Post a Comment