ಪುತ್ತೂರು, ಜೂನ್ 15, 2023 (ಕರಾವಳಿ ಟೈಮ್ಸ್) : ಅಂಚೆ ವಿಭಾಗದ ಅರ್ಧ ವಾರ್ಷಿಕ ಪಿಂಚಣಿ ಅದಾಲತ್ ಜೂನ್ 20 ರಂದು ಮಂಗಳವಾರ ಪೂರ್ವಾಹ್ನ 11 ಗಂಟೆಗೆ ಪುತ್ತೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕರ ಕಛೇರಿಯಲ್ಲಿ ನಡೆಯಲಿದೆ. ಈ ಅದಾಲತ್ತಿನಲ್ಲಿ ಪುತ್ತೂರು ಅಂಚೆ ವಿಭಾಗದಿಂದ ನಿವೃತ್ತಿ ಹೊಂದಿ ಪಿಂಚಣಿ ಪಡೆಯುವ ಅಂಚೆ ಪಿಂಚಣಿದಾರರ ಕುಂದು ಕೊರತೆಗಳನ್ನು ಪರಿಶೀಲಿಸಲಾಗುವುದು.
ಕುಂದು ಕೊರತೆಗಳನ್ನು ಕಳುಹಿಸಲು ಇಚ್ಚಿಸುವ ಅಂಚೆ ಪಿಂಚಣಿದಾರರು ಬರಹ ಮೂಲಕ ಜೂನ್ 19ರೊಳಗೆ ಲಿಖಿತವಾಗಿ ತಲುಪುವಂತೆ ಪುತ್ತೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕರು, ಪುತ್ತೂರು-574 201 ಇವರಿಗೆ “ಪಿಂಚಣಿ ಅದಾಲತ್‍ನಲ್ಲಿ ವಿಚಾರಣೆಗಾಗಿ” ಎಂಬ ತಲೆ ಬರಹದ ಲಕೋಟೆಯಲ್ಲಿ ಕಳುಹಿಸಬಹುದು. ಜೂನ್ 20 ರಂದು 11 ಗಂಟೆಗೆ ಕಚೇರಿಯಲ್ಲಿ ಹಾಜರಿದ್ದರೆ ಸಮಕ್ಷಮ ಪರಿಶೀಲಿಸಲು ಅನುಕೂಲವಾಗುವುದು ಎಂದು ಪುತ್ತೂರು ಅಂಚೆ ಅಧೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ.
0 comments:
Post a Comment