ಮಂಗಳೂರು, ಜೂನ್ 29, 2023 (ಕರಾವಳಿ ಟೈಮ್ಸ್) : ಲೋಕೋಪಯೋಗಿ ಇಲಾಖೆ ಗುತ್ತಿಗೆದಾರರ ಸಂಘ (ರಿ) ಮಂಗಳೂರು ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಕಬೀರ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ನಿಸಾರ್ ಅಹ್ಮದ್ ಸಾಮಣಿಗೆ ಆಯ್ಕೆಯಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಲೋಕೋಪಯೋಗಿ ಇಲಾಖಾ ಸಂಘದ ಅಧ್ಯಕ್ಷ ರಾಧಾಕೃಷ್ಣ ಹಾಗೂ ಪ್ರಧಾನ ಕಾರ್ಯದರ್ಶಿ ನಾಸಿರ್ ಕೆ ಕೆ ಅವರ ನೇತೃತ್ವದಲ್ಲಿ ಸಂಘದ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಕೆ ನಡೆದಿದೆ.
ಗೌರವ ಸಲಹೆಗಾರರಾಗಿ ಎಂ ಎಸ್ ಅಬ್ದುಲ್ ಹಮೀದ್, ಕೋಶಾಧಿಕಾರಿಯಾಗಿ ಸುನಿಲ್ ಕುಮಾರ್, ಉಪಾಧ್ಯಕ್ಷರಾಗಿ ಶ್ರೀನಿವಾಸ್, ನಜೀರ್ ಎಂ ಎಚ್, ಪಿ ನಾರಾಯಣ್, ಕಾರ್ಯದರ್ಶಿಯಾಗಿ ಕೈಲಾಸ್ ಬಾಬು, ಜೊತೆ ಕಾರ್ಯದರ್ಶಿಯಾಗಿ ಶ್ರವಣ್ ಶೆಟ್ಟಿ ಅವರು ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮುಹಮ್ಮದ್ ನವಾಝ್, ಇಂತಿಯಾಝ್, ಎಚ್ ಎ ರೆಹಮಾನ್, ವೈಶಾಕ್, ಜಯಂತ್ ಸಾಲಿಯಾನ್, ಅಶ್ವಥ್ ಸಿ ಎಚ್, ಹುಸೇನ್ ಸಿರಾಜ್, ಪೀಟರ್ ಡಿ ಸೋಜಾ ಅವರನ್ನು ನೇಮಕ ಮಾಡಲಾಗಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.
0 comments:
Post a Comment