ರೈಲ್ವೆ ಮಾರ್ಗದಲ್ಲಿ ರೈಲೊಂದು ಹಳಿ ತಪ್ಪಿದ್ದರೂ ಅದೇ ಮಾರ್ಗದಲ್ಲಿ ಮತ್ತೊಂದು ರೈಲು ಹೇಗೆ ಬಂತು? ಸಿಪಿಐಎಂಎಲ್ ಲಿಬರೇಶನ್ ಪ್ರಶ್ನೆ - Karavali Times ರೈಲ್ವೆ ಮಾರ್ಗದಲ್ಲಿ ರೈಲೊಂದು ಹಳಿ ತಪ್ಪಿದ್ದರೂ ಅದೇ ಮಾರ್ಗದಲ್ಲಿ ಮತ್ತೊಂದು ರೈಲು ಹೇಗೆ ಬಂತು? ಸಿಪಿಐಎಂಎಲ್ ಲಿಬರೇಶನ್ ಪ್ರಶ್ನೆ - Karavali Times

728x90

3 June 2023

ರೈಲ್ವೆ ಮಾರ್ಗದಲ್ಲಿ ರೈಲೊಂದು ಹಳಿ ತಪ್ಪಿದ್ದರೂ ಅದೇ ಮಾರ್ಗದಲ್ಲಿ ಮತ್ತೊಂದು ರೈಲು ಹೇಗೆ ಬಂತು? ಸಿಪಿಐಎಂಎಲ್ ಲಿಬರೇಶನ್ ಪ್ರಶ್ನೆ

 ರೈಲ್ವೆ ಸಚಿವರ ರಾಜೀನಾಮೆಗೆ ಆಗ್ರಹ, ಮೃತರ ಕುಟುಂಬಕ್ಕೆ 1 ಕೋಟಿ ಪರಿಹಾರ ನೀಡಲು ಒತ್ತಾಯ  


ಬೆಂಗಳೂರು, ಜೂನ್ 04, 2023 (ಕರಾವಳಿ ಟೈಮ್ಸ್) : ರೈಲ್ವೆ ಮಾರ್ಗದಲ್ಲಿ ರೈಲೊಂದು ಹಳಿ ತಪ್ಪಿದ್ದರೂ ಅದೇ ಮಾರ್ಗದಲ್ಲಿ ಮತ್ತೊಂದು ರೈಲು ಹೇಗೆ ಬಂತು, ಆ ಭಾಗದ ರೈಲ್ವೆ ಸಿಬ್ಬಂದಿ ಕೋರಮಂಡಲ್ ರೈಲು ಹೋಗಲು ಹೇಗೆ ಸಮ್ಮತಿಸಿದರು ಎಂಬುದು ಪ್ರಶ್ನಾರ್ಹವಾಗಿದೆ. ಒಡಿಸಾದ ಬಾಲಸೋರ್ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣದ ಹತ್ತಿರ ತ್ರಿವಳಿ ರೈಲುಗಳ ನಡುವೆ ನಡೆದ ಭೀಕರ ಅಪಘಾತದಲ್ಲಿ 280ಕ್ಕೂ ಹೆಚ್ಚು ಜನರು ಸಾವಿಗೀಡಾಗಿ, 1000ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿದ್ದು, ಈ ದುರಂತದ ನೈತಿಕ ಹೊಣೆ ಹೊತ್ತು ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಸಿಪಿಐ (ಎಂಎಲ್) ಲಿಬರೇಷನ್ ರಾಜ್ಯ ಸಮಿತಿ ಆಗ್ರಹಿಸಿದೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಸಿಪಿಐ (ಎಂಎಲ್) ಲಿಬರೇಷನ್ ರಾಜ್ಯ ಸಮಿತಿ ಕಾರ್ಯದರ್ಶಿ ಕ್ಲಿಫ್ಟನ್ ಡಿ ರೊಜೊರಿಯೋ ಇತ್ತೀಚಿನ ದಿನಗಳಲ್ಲಿ ನಡೆದ ಅತ್ಯಂತ ಘೋರ ಮತ್ತು ಅತಿದೊಡ್ಡ ರೈಲ್ವೆ ದುರಂತ ಇದಾಗಿದ್ದು, ರೈಲ್ವೆ ಇಲಾಖೆಯ ನಿರ್ಲಕ್ಷ್ಯವೇ ಇದಕ್ಕೆ ಕಾರಣವಾಗಿದೆ. ಶಾಲಿಮಾರ್- ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್ಪ್ರೆಸ್ ರೈಲು, ಹೌರಾ-ಬೆಂಗಳೂರು ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ರೈಲು ಹಾಗೂ ಸರಕು ಸಾಗಣೆ ರೈಲುಗಳ ನಡುವೆ ನಡೆದ ಅಪಘಾತದಿಂದ ಸಾವು-ನೋವಿಗೆ ಒಳಗಾದ ಕುಟುಂಬಗಳು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದು, ಈ ದುರ್ಘಟನೆಗೆ ರೈಲ್ವೆ ಇಲಾಖೆ ಮತ್ತು ಕೇಂದ್ರ ಸರ್ಕಾರವೇ ನೇರ ಹೊಣೆಯಾಗಿದೆ ಎಂದು ಆರೋಪಿಸಿದ್ದಾರೆ.

 ರೈಲ್ವೆ ಇಲಾಖೆಯ ಬೇಜವಾಬ್ದಾರಿಯಿಂದ ನೂರಾರು ಮುಗ್ದ ಜನರು ಮೃತಪಟ್ಟಿದ್ದಾರೆ. ಇನ್ನೂ ಹಲವು ಜನರು ಕೈ, ಕಾಲು ಕಳೆದುಕೊಂಡು ಗಂಭೀರ ಸ್ವರೂಪದ ಗಾಯಗಳಿಗೆ ತುತ್ತಾಗಿದ್ದಾರೆ. ಈ ಘಟನೆಯಲ್ಲಿ ಸಂತ್ರಸ್ತರಾದವರಿಗೆ ಕೂಡಲೇ ಸಮರೋಪಾದಿಯಲ್ಲಿ ನೆರವು ಕಾರ್ಯಗಳನ್ನು ಕೈಗೊಳ್ಳಬೇಕು, ಮೃತ ಕುಟುಂಬಕ್ಕೆ 1 ಕೋಟಿ ರೂಪಾಯಿ, ಶಾಶ್ವತ ಅಂಗ ವೈಕಲ್ಯರಾದವರಿಗೆ 50 ಲಕ್ಷ ರೂಪಾಯಿ ಹಾಗೂ ಗಂಭೀರ ಸ್ವರೂಪದ ಗಾಯಗಳಾದವರಿಗೆ ಚಿಕಿತ್ಸೆ ವೆಚ್ಚ ಭರಿಸಿ 25 ಲಕ್ಷ ರೂಪಾಯಿ ಪರಿಹಾರವನ್ನು ತತ್‌ಕ್ಷಣವೇ ನೀಡಬೇಕು ಹಾಗೂ ಈ ದುರಂತ ಪ್ರಕರಣವನ್ನು ಕೇಂದ್ರ ಸರ್ಕಾರ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಸಿಪಿಐಎಂಎಲ್ ಲಿಬರೇಶನ್ ರಾಜ್ಯ ಸಮಿತಿ ಒತ್ತಾಯಿಸುತ್ತದೆ ಎಂದಿದ್ದಾರೆ.

ಕೇಂದ್ರ ಸರಕಾರ ರೈಲ್ವೆಯನ್ನು ನಿರ್ಲಕ್ಷಿಸಿದೆ. ವಾರ್ಷಿಕ ರೈಲು ಬಜೆಟನ್ನು ನಿಲ್ಲಿಸಲಾಗಿದೆ. ರೈಲ್ವೆ ಸುರಕ್ಷತಾ ಆಯೋಗವು ನಿಷ್ಪರಿಣಾಮಕಾರಿಯಾಗಿದೆ.  ರೈಲ್ವೆಯಲ್ಲಿ 3.12 ಲಕ್ಷಕ್ಕೂ ಹೆಚ್ಚು ಖಾಲಿ ಹುದ್ದೆಗಳು ಮುಖ್ಯವಾಗಿ ಸುರಕ್ಷತಾ ವರ್ಗದಲ್ಲಿ ಕಾರ್ಯನಿರ್ವಹಿಸುತ್ತವೆ, ಪ್ರಾಥಮಿಕವಾಗಿ ಇನ್ಸ್‌ಪೆಕ್ಟರ್‌ಗಳು, ರೈಲು ಪರೀಕ್ಷಕರು, ಇತ್ಯಾದಿ. ಕೇವಲ 1,455 ರೂಟ್ ಕಿಮೀ ರೈಲ್ವೇ ನೆಟ್‌ವರ್ಕ್ ಕವಚ ಸ್ವಯಂ ಚಾಲಿತ ರೈಲು ಘರ್ಷಣೆ ರಕ್ಷಣೆ ವ್ಯವಸ್ಥೆಯ ಅಡಿಯಲ್ಲಿ ಒಳಗೊಂಡಿದೆ. ಏತನ್ಮಧ್ಯೆ, ರೈಲ್ವೇ ಹೆಸರಿನಲ್ಲಿ, ನಾವು ದುಬಾರಿ ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ಫ್ಲ್ಯಾಗ್ ಆಫ್ ಮಾಡುತ್ತಿದೆ ಎಂದು ಟೀಕಿಸಿದ ಅವರು, ಕೋರಮಂಡಲ್ ಎಕ್ಸ್‌ಪ್ರೆಸ್‌ಗೆ ಸಂಬಂಧಿಸಿದ ಘಟನೆಯನ್ನು ತನಿಖೆ ಮಾಡಲು ರೈಲ್ವೆ ಸುರಕ್ಷತಾ ಆಯೋಗದ ಅಡಿಯಲ್ಲಿ ಸರ್ಕಾರವು ತಕ್ಷಣವೇ ಸ್ವತಂತ್ರ ತನಿಖೆಯನ್ನು ಪ್ರಾರಂಭಿಸಬೇಕು.  ಸುರಕ್ಷತಾ ಆಯೋಗದ ಅಧಿಕಾರವನ್ನು ಕಡಿಮೆ ಮಾಡುವ ಬದಲು, ಅಂತಹ ಅಪಘಾತಗಳು ಮತ್ತೆ ಸಂಭವಿಸದಂತೆ ಖಚಿತಪಡಿಸಿಕೊಳ್ಳಲು ಆಯೋಗವನ್ನು ಬಲಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ರೈಲ್ವೇ ಭಾರತದಲ್ಲಿ ಅತಿ ದೊಡ್ಡ ವಲಯವಾಗಿರುವುದರಿಂದ, ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ರೈಲು ಬಜೆಟ್ ಅನ್ನು ಮರುಪರಿಚಯಿಸಬೇಕು ಎಂದೂ ಕ್ಲಿಫ್ಟನ್ ಆಗ್ರಹಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ರೈಲ್ವೆ ಮಾರ್ಗದಲ್ಲಿ ರೈಲೊಂದು ಹಳಿ ತಪ್ಪಿದ್ದರೂ ಅದೇ ಮಾರ್ಗದಲ್ಲಿ ಮತ್ತೊಂದು ರೈಲು ಹೇಗೆ ಬಂತು? ಸಿಪಿಐಎಂಎಲ್ ಲಿಬರೇಶನ್ ಪ್ರಶ್ನೆ Rating: 5 Reviewed By: karavali Times
Scroll to Top