ಕರ್ನಾಟಕ ಮುಸ್ಲಿಂ ಜಮಾಅತ್ ಮುಡಿಪು ವಲಯದ ವತಿಯಿಂದ ಸ್ಪೀಕರ್ ಯು.ಟಿ. ಖಾದರ್ ಅವರಿಗೆ ಗೌರವಾರ್ಪಣೆ - Karavali Times ಕರ್ನಾಟಕ ಮುಸ್ಲಿಂ ಜಮಾಅತ್ ಮುಡಿಪು ವಲಯದ ವತಿಯಿಂದ ಸ್ಪೀಕರ್ ಯು.ಟಿ. ಖಾದರ್ ಅವರಿಗೆ ಗೌರವಾರ್ಪಣೆ - Karavali Times

728x90

15 June 2023

ಕರ್ನಾಟಕ ಮುಸ್ಲಿಂ ಜಮಾಅತ್ ಮುಡಿಪು ವಲಯದ ವತಿಯಿಂದ ಸ್ಪೀಕರ್ ಯು.ಟಿ. ಖಾದರ್ ಅವರಿಗೆ ಗೌರವಾರ್ಪಣೆ

ಮಂಗಳೂರು, ಜೂನ್ 16, 2023 (ಕರಾವಳಿ ಟೈಮ್ಸ್) : ಕರ್ನಾಟಕ ಮುಸ್ಲಿಂ ಜಮಾಅತ್ ಮುಡಿಪು ಝೋನ್ ಇದರ ಆಶ್ರಯದಲ್ಲಿ ಎಸ್ ವೈ ಎಸ್ ಹಾಗೂ ಎಸ್ ಎಸ್ ಎಫ್ ಮುಡಿಪು ವಲಯ ಸಹಭಾಗಿತ್ವದಲ್ಲಿ ಕರ್ನಾಟಕ ರಾಜ್ಯ ವಿಧಾನಸಭಾಧ್ಯಕ್ಷರಾಗಿ ಆಯ್ಕೆಯಾದ ಮಂಗಳೂರು ಶಾಸಕ ಯು ಟಿ ಖಾದರ್ ಅವರಿಗೆ ಅಭಿನಂಧನಾ ಸಮಾರಂಭವು ಮುಡಿಪು ಸಮೀಪದ ನಂದರಪಡ್ಪು ಎಸ್ ಕೆ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಕೆ ಎಂ ಜೆ ಮುಡಿಪು ಝೋನ್ ಅಧ್ಯಕ್ಷ ಹಾಜಿ ಅಲಿ ಕುಂಞÂ ಪಾರೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ಉದ್ಘಾಟಿಸಿದ ಝೈನುಲ್ ಉಲಮಾ ಮಾಣಿ ಉಸ್ತಾದ್ ಮಾತನಾಡಿ, ಯು ಟಿ ಖಾದರ್ ಜಾತಿ-ಧರ್ಮ ಬೇಧವಿಲ್ಲದೆ ಎಲ್ಲರನ್ನು ಒಂದೇ ರೀತಿ ಗೌರವದಿಂದ ನೋಡುವವರು. ಅವರಿಗೆ ಗೌರವದ ಸ್ಪೀಕರ್ ಸ್ಥಾನ ಲಭಿಸಿರುವುದು ನಮ್ಮೆಲ್ಲರಿಗೂ ಸಂತಸವಾಗಿದೆ ಎಂದರು. 

ಸನ್ಮಾನ ಸ್ವೀಕರಿಸಿ ಮಾತನಾಡಿದ ಸ್ಪೀಕರ್ ಯು ಟಿ ಖಾದರ್ ಅವರು, ದ್ವೇಷ ಮುಕ್ತ, ಶಾಂತಿ ಸೌಹಾರ್ದತೆಯುತವಾದ  ಸಮಾಜ ನಿರ್ಮಾಣ ಮಾಡುವ ಕೆಲಸವನ್ನು  ಸರಕಾರ ಮಾಡಲಿದೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯ. ನಿಮ್ಮೆಲ್ಲರ ಆಶೀರ್ವಾದದಿಂದ ಸ್ಪೀಕರ್ ಸ್ಥಾನವನ್ನು ಅಲಂಕರಿಸುವಂತಾಗಿದೆ ಎಂದರು. 

ಸಮಾಜದಲ್ಲಿ ನಾವು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಉತ್ತಮವಾದ ಅವಕಾಶಗಳು ಖಂಡಿತವಾಗಿಯೂ ನಮ್ಮನ್ನು ಹುಡುಕಿಕೊಂಡು ಬರುತ್ತದೆ. ಯುವ ಸಮುದಾಯ ಉತ್ತಮ ಪರಿಶ್ರಮ, ಪ್ರಯತ್ನಗಳೊಂದಿಗೆ ಅವಕಾಶಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದರು. 

ಕಾರ್ಯಕ್ರಮದಲ್ಲಿ ಡಾ ಅಬ್ದುಲ್ ರಶೀದ್ ಝೈನಿ  ಅಭಿನಂದನಾ ಭಾಷಣ ಮಾಡಿದರು. ಸ್ವಾಗತ ಸಮಿತಿ ಅಧ್ಯಕ್ಷ ಎಸ್ ಕೆ ಅಬ್ದುಲ್ ಖಾದರ್ ಹಾಜಿ ಅವರು ಸ್ಪೀಕರ್ ಅವರಿಗೆ ಮನವಿ ಪತ್ರ ಸಮರ್ಪಿಸಿದರು. ಎಂ ಎ ಬಶೀರ್ ಮುಡಿಪು ಅಭಿನಂದನಾ ಪತ್ರ ವಾಚಿಸಿದರು. ಎಂ ಎ ಸಿದ್ದೀಕ್ ಸಖಾಫಿ ಮೂಳೂರು ಸ್ವಾಗತಿಸಿ, ಅಬ್ದುಲ್ ರಹಮಾನ್ ಮಂಜನಾಡಿ ವಂದಿಸಿದರು. ಕೆ ಎಂ ಕೆ ಮಂಜನಾಡಿ ಕಾರ್ಯಕ್ರಮ ನಿರೂಪಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ಕರ್ನಾಟಕ ಮುಸ್ಲಿಂ ಜಮಾಅತ್ ಮುಡಿಪು ವಲಯದ ವತಿಯಿಂದ ಸ್ಪೀಕರ್ ಯು.ಟಿ. ಖಾದರ್ ಅವರಿಗೆ ಗೌರವಾರ್ಪಣೆ Rating: 5 Reviewed By: karavali Times
Scroll to Top