ಬಂಟ್ವಾಳ, ಜೂನ್ 18, 2023 (ಕರಾವಳಿ ಟೈಮ್ಸ್) : ತಾಲೂಕಿನ ಮಂಚಿ ಗ್ರಾಮದ ಕುಕ್ಕಾಜೆ ನಿವಾಸಿ ಅಬ್ದುಲ್ ಹಮೀದ್ ಅವರ ಪುತ್ರಿ ಅಲೀಮಾ ಸಾದಿಯಾ ಎಂಬಾಕೆಯ ವಿವಾಹವು ಅಡ್ಡೂರು ಸಮೀಪದ ಕೆಳಗಿನಕೆರೆ ನಿವಾಸಿ ಮುಹಮ್ಮದ್ ಹನೀಫ್ ಅವರ ಪುತ್ರ ಸನಾವುಲ್ಲಾ ಎಂಬ ವರನೊಂದಿಗೆ ಭಾನುವಾರ (ಜೂನ್ 18) ಕೈಕಂಬದ ಮೇಘಾ ಪ್ಲಾಝಾ ಹಾಲ್ ನಲ್ಲಿ ನಡೆಯಿತು.
ಆಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಮುದರ್ರಿಸ್ ಅಲ್ ಹಾಜ್ ಬಿ ಎಚ್ ಅಬೂಸ್ವಾಲಿಹ್ ಉಸ್ತಾದ್ ಹಾಗೂ ಅಡ್ಡೂರು ಜುಮಾ ಮಸೀದಿ ಖತೀಬ್ ಸ್ವದಖತುಲ್ಲಾ ಫೈಝಿ ಅವರು ನಿಖಾಹ್ ನೇತೃತ್ವ ವಹಿಸಿದ್ದರು. ಕುಟುಂಬಿಕರು ಹಾಗೂ ವಿವಿಧ ಗಣ್ಯರು ನವ ವಧೂ-ವರರಿಗೆ ವೈವಾಹಿಕ ಶುಭಾಶಯ ಕೋರಿದರು.
0 comments:
Post a Comment