ಬಂಟ್ವಾಳ, ಜೂನ್ 21, 2023 (ಕರಾವಳಿ ಟೈಮ್ಸ್) : ಸಜಿಪಮುನ್ನೂರು ಗ್ರಾಮದ ಕಂದೂರು ಯುವಕ ಸಂಘದ ನೂತನ ಅಧ್ಯಕ್ಷರಾಗಿ ಜಗದೀಶ್ ಐತಾಳ್ ಆಯ್ಕೆಯಾಗಿದ್ದಾರೆ.
ಸಂಘದ ಕಚೇರಿಯಲ್ಲಿ ಇತ್ತೀಚೆಗೆ ನಡೆದ 50ನೇ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆದಿದೆ. ಉಪಾಧ್ಯಕ್ಷರುಗಳಾಗಿ ಶಿವಾನಂದ ಕೌಳಿಗೆ ಹಾಗೂ ಜಗದೀಶ ಖಂಡಿಗ, ಕಾರ್ಯದರ್ಶಿಯಾಗಿ ಕೇಶವ ಮಾಸ್ಟರ್ ಮಾರ್ನಬೈಲು, ಜೊತೆ ಕಾರ್ಯದರ್ಶಿಗಳಾಗಿ ಪ್ರಭಾಕರ ಶೆಟ್ಟಿ ಕಂದೂರು, ಸೋಮನಾಥ ಬಿ ಎಂ, ಕೋಶಧಿಕಾರಿಯಾಗಿ ಪ್ರದೀಪ್ ಕುಮಾರ್ ಶಟ್ಟಿ ಕಂದೂರು, ಲೆಕ್ಕ ಪರಿಶೋಧಕರಾಗಿ ಯೋಗಿಶ್ ಕುಲಾಲ್ ಖಂಡಿಗ ಹಾಗೂ ದಿವಾನ್ ಶಟ್ಟಿ ಕಂದೂರು ಅವರನ್ನು ಆರಿಸಲಾಯಿತು.
ಯುವಕ ಸಂಘದ ಸ್ಥಾಪಕ ಎಂ ವಸಂತ ಶಟ್ಟಿ ಕೊಯಮಜಲು, ಪ್ರಮುಖರಾದ ಎನ್ ಕೆ ಶಿವ, ನವೀನ್ ಸುವರ್ಣ, ಜಯಂತ್ ಶೆಟ್ಟಿ, ಹೂವಯ್ಯ ಪೂಜಾರಿ, ಸತೀಶ್ ನಾಯಕ್, ಜಯಾನಂದ ಬಂಗೇರ, ಶೇಖರ್ ಕುಲಾಲ್, ಪ್ರವೀಣ್ ಕೌಳಿಗೆ, ಆನಂದ್ ಕುಲಾಲ್, ಜಯಾನಂದ ಪಾಡಿ, ಸುರೇಶ್ ಕುಲಾಲ್, ದಿನೇಶ್ ನಾಯಕ್, ಮಾಧವ ಆಚಾರ್ಯ, ದಾಮೋದರ ಬೊಕ್ಕಸ, ಹರೀಶ್ ಪಾಡಿ, ಜಗದೀಶ್ ಮಡಿವಾಳಪಡ್ಪು, ನಿಖಿಲ್ ಕುಮಾರ್ ಮೊದಲಾದವರು ಸಭೆಯಲ್ಲಿದ್ದರು.
ಇದೇ ವೇಳೆ ಸಂಘದ ವತಿಯಿಂದ ಜರಗುವ ಸಾರ್ವಜನಿಕ ಶ್ರೀ ಗಣೇಶೋತ್ಸವದ ಸುವರ್ಣ ಸಂಭ್ರಮದ ಸವಿ ನೆನಪಿಗಾಗಿ ಮಹಾಗಣಪತಿಗೆ ಬೆಳ್ಳಿಯ ಪ್ರಭಾವಳಿಯನ್ನು ಭಕ್ತಾಭಿಮಾನಿಗಳಿಂದ ಸಮರ್ಪಿಸಲು ತೀರ್ಮಾನಿಸಲಾಯಿತು ಹಾಗೂ ಸುವರ್ಣ ಮಹೋತ್ಸವವನ್ನು 4 ದಿನಗಳ ಕಾಲ ಅದ್ದೂರಿಯಾಗಿ ನಡೆಸಲು ನಿರ್ಧರಿಸಲಾಗಿದೆ.
0 comments:
Post a Comment