ಜೂನ್ 16 ರಂದು ಪುತ್ತೂರು ಅಂಚೆ ವಿಭಾಗದ ತ್ರೈಮಾಸಿಕ ಅದಾಲತ್ - Karavali Times ಜೂನ್ 16 ರಂದು ಪುತ್ತೂರು ಅಂಚೆ ವಿಭಾಗದ ತ್ರೈಮಾಸಿಕ ಅದಾಲತ್ - Karavali Times

728x90

12 June 2023

ಜೂನ್ 16 ರಂದು ಪುತ್ತೂರು ಅಂಚೆ ವಿಭಾಗದ ತ್ರೈಮಾಸಿಕ ಅದಾಲತ್

ಪುತ್ತೂರು, ಜೂನ್ 12, 2023 (ಕರಾವಳಿ ಟೈಮ್ಸ್) : ಪುತ್ತೂರು ಅಂಚೆ ವಿಭಾಗದ ತ್ರೈಮಾಸಿಕ ಅಂಚೆ  ಅದಾಲತ್ ಜೂನ್ 16 ರಂದು ಬೆಳಿಗ್ಗೆ 11.30ಕ್ಕೆ ಪುತ್ತೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕರ  ಕಚೇರಿಯಲ್ಲಿ  ನಡೆಯಲಿದೆ.

ಈ ಅದಾಲತ್ತಿನಲ್ಲಿ ಪುತ್ತೂರು, ಕಡಬ, ಸುಳ್ಯ, ಬಂಟ್ವಾಳ, ಮೂಡಬಿದ್ರೆ, ಬೆಳ್ತಂಗಡಿ, ಕಾರ್ಕಳ ಹಾಗೂ ಹೆಬ್ರಿ  ತಾಲೂಕುಗಳ ವ್ಯಾಪ್ತಿಯ ಅಂಚೆ ಸೇವೆಗೆ ಸಂಬಂಧಪಟ್ಟ ಎಲ್ಲಾ ರೀತಿಯ ಸಾರ್ವಜನಿಕ ಕುಂದು-ಕೊರತೆಗಳನ್ನು, ತಕರಾರುಗಳನ್ನು ಪರಶೀಲಿಸಲಾಗುವುದು.

ಸಾರ್ವಜನಿಕರು ಪುತ್ತೂರು ವಿಭಾಗಕ್ಕೆ ಸಂಬಂಧಪಟ್ಟ ದೂರುಗಳನ್ನು ಪತ್ರಮುಖೇನ ಅಂಚೆ ಅದಾಲತ್  ತಲೆ ಬರಹದಡಿ ಜೂನ್ 16ರೊಳಗೆ ಹಿರಿಯ ಅಂಚೆ ಅಧೀಕ್ಷಕರು ಪುತ್ತೂರು ವಿಭಾಗ ಪುತ್ತೂರು-574201  ವಿಳಾಸಕ್ಕೆ ದೂರುಗಳನ್ನು ಕಳುಹಿಸಬಹುದು ಅಥವಾ ಅದೇ ದಿನ ಬೆಳಿಗ್ಗೆ 11.30ರೊಳಗೆ ದೂರವಾಣಿ  ಸಂಖ್ಯೆ  08251-230201, 230295ಕ್ಕೆ ನೇರವಾಗಿಯೂ ಸಂಪರ್ಕಿಸಬಹುದು. 

ತಮ್ಮ ದೂರುಗಳನ್ನು ಇಮೇಲ್ ಜoಠಿuಣಣuಡಿ.ಞಚಿ@iಟಿಜiಚಿಠಿosಣ.gov.iಟಿ ಮೂಲಕ ಅದಾಲತ್ತಿಗೆ ಮೊದಲು ತಲುಪುವಂತೆ ಕಳುಹಿಸುವುದು. ಪುತ್ತೂರು ಅಂಚೆ ವಿಭಾಗಕ್ಕೆ ಸಂಬಂಧಿಸಿದ ದೂರುಗಳನ್ನು ಮಾತ್ರ  ಪರಿಗಣಿಸಲಾಗುವುದು ಎಂದು ಅಂಚೆ ಇಲಾಖೆ ಪುತ್ತೂರು ವಿಭಾಗದ ಕಚೇರಿ ಪ್ರಕಟಣೆ ತಿಳಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಜೂನ್ 16 ರಂದು ಪುತ್ತೂರು ಅಂಚೆ ವಿಭಾಗದ ತ್ರೈಮಾಸಿಕ ಅದಾಲತ್ Rating: 5 Reviewed By: karavali Times
Scroll to Top