ಬಂಟ್ವಾಳ, ಜೂನ್ 12, 2023 (ಕರಾವಳಿ ಟೈಮ್ಸ್) : ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಸರಕಾರದ ಮಹಾತ್ವಕಾಂಕ್ಷಿ ಯೋಜನೆಯಾಗಿರುವ ಮಹಿಳಾ ಪ್ರಯಾಣಿಕರಿಗೆ ಸರಕಾರಿ ಬಸ್ಸಿನಲ್ಲಿ ಉಚಿತ ಪ್ರಯಾಣದ ಶಕ್ತಿ ಯೋಜನೆಗೆ ಭಾನುವಾರ ಚಾಲನೆ ದೊರೆತಿರುವ ಹಿನ್ನಲೆಯಲ್ಲಿ ಮಂಗಳೂರು ಕ್ಷೇತ್ರದ ಇರಾ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡರ ನೇತೃತ್ವದಲ್ಲಿ ಸಂಭ್ರಮಾಚರಣೆಯನ್ನು ನಡೆಸಲಾಯಿತು.
ಇರಾ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಆಗ್ನೇಸ್ ಡಿ’ಸೋಜಾ ಯೋಜನೆಯ ಬಗ್ಗೆ ಪ್ರಸ್ತಾವನೆಗೈದರು. ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಅಬ್ದುಲ್ ರಝಕ್ ಕುಕ್ಕಾಜೆ, ಪಂಚಾಯತ್ ಉಪಾಧ್ಯಕ್ಷ ಮೊಯಿದಿನ್ ಕುಂಞÂ, ಸದಸ್ಯ ಎಂ ಬಿ ಉಮ್ಮರ್ ಅವರು ಸಾರ್ವಜನಿಕರಿಗೆ ಯೋಜನೆ ಬಗ್ಗೆ ಮಾಹಿತಿ ನೀಡಿದರು.
ಇರಾ ವಲಯ ಕಾಂಗ್ರೆಸ್ ಅಧ್ಯಕ್ಷ ಅಶ್ರಫ್ ಸಂಪಿಲ, ಸ್ಥಳೀಯ ಗಣ್ಯರಾದ ಎಸ್ ಎ ಅಬ್ದುಲ್ಲ, ಇಬ್ರಾಹಿಂ ಹಾಜಿ, ಸುದಾನಂದ, ಅಬೂಬಕ್ಕರ್ ಮೂಲೆ, ಸಿಸಿಲಿಯಾ, ಮೊಯಿದಿನ್ ಕುಂಞÂ ಪರಪ್ಪು ಮೊದಲಾದವರು ಭಾಗವಹಿಸಿದ್ದರು.
0 comments:
Post a Comment