ಹಬ್ಬದ ಸಂತೋಷಾಚರಣೆಯಲ್ಲೂ ಬಡ, ನಿರ್ಗತಿಕ, ಅನಾಥರನ್ನು ಮರೆಯದಿರಿ : ಬಿ.ಎಚ್. ಉಸ್ತಾದ್ ಕರೆ - Karavali Times ಹಬ್ಬದ ಸಂತೋಷಾಚರಣೆಯಲ್ಲೂ ಬಡ, ನಿರ್ಗತಿಕ, ಅನಾಥರನ್ನು ಮರೆಯದಿರಿ : ಬಿ.ಎಚ್. ಉಸ್ತಾದ್ ಕರೆ - Karavali Times

728x90

28 June 2023

ಹಬ್ಬದ ಸಂತೋಷಾಚರಣೆಯಲ್ಲೂ ಬಡ, ನಿರ್ಗತಿಕ, ಅನಾಥರನ್ನು ಮರೆಯದಿರಿ : ಬಿ.ಎಚ್. ಉಸ್ತಾದ್ ಕರೆ

ಪಾಣೆಮಂಗಳೂರಿನಲ್ಲಿ ಸಂಭ್ರಮದ ಬಕ್ರೀದ್ ಆಚರಣೆ 


ಬಂಟ್ವಾಳ, ಜೂನ್ 29, 2023 (ಕರಾವಳಿ ಟೈಮ್ಸ್) : ಪವಿತ್ರ ಇಸ್ಲಾಂ ಧರ್ಮ ಹಬ್ಬಾಚರಣೆಗೆ ಅದರದ್ದೇ ಆದ ಮಹತ್ವವನ್ನು ಕಲ್ಪಿಸಿದ್ದು, ಧಾರ್ಮಿಕ ಇತಿ-ಮಿತಿಯೊಳಗೆ ಸಂತೋಷಾಚರಣೆಗೆ ಅನುವು ಮಾಡಿಕೊಟ್ಟಿದೆ. ಹಬ್ಬದ ಸಂತೋಷಾಚರಣೆ ಸಂದರ್ಭದಲ್ಲೂ ಸಮಾಜದಲ್ಲಿರುವ ಬಡವರನ್ನು, ನಿರ್ಗತಿಕರನ್ನು, ಅಶಕ್ತರನ್ನು ಹಾಗೂ ಅನಾಥರನ್ನು ನಿರ್ಲಕ್ಷಿಸದೆ ಅವರಿಗೆ ಬೇಕಾಗುವ ರೀತಿಯಲ್ಲಿ ಸಹಾಯ-ಸಹಕಾರಗಳನ್ನು ಒದಗಿಸಿಕೊಡುವ ಮೂಲಕ ನಾವು ಕಾರುಣ್ಯ ತೋರುವವರಾಗಬೇಕು. ಹೀಗಾದಾಗ ಈದ್ ಹಬ್ಬಕ್ಕೆ ವಿಶೇಷ ಅರ್ಥ ಬರುತ್ತದೆ ಹಾಗೂ ಅದು ಸಾರ್ಥಕಗೊಳ್ಳುತ್ತದೆ ಎಂದು ಪಾಣೆಮಂಗಳೂರು-ಆಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಮುದರ್ರಿಸ್ ಹಾಜಿ ಬಿ ಎಚ್ ಅಬೂಸ್ವಾಲಿಹ್ ಉಸ್ತಾದ್ ಹೇಳಿದರು. 

ತಾಲೂಕಿನ ಪಾಣೆಮಂಗಳೂರಿನಲ್ಲಿ ಗುರುವಾರ (ಜೂನ್ 29) ನಡೆದ ಸಂಭ್ರಮದ ಬಕ್ರೀದ್ ಆಚರಣೆ ಪ್ರಯುಕ್ತ ಮಸೀದಿಯಲ್ಲಿ ನಡೆದ ಈದ್ ಪ್ರಾರ್ಥನೆ ಹಾಗೂ ಖುತುಬಾಗೆ ನೇತೃತ್ವ ನೀಡಿದ ಬಳಿಕ ಅವರು ಈದ್ ಸಂದೇಶ ನೀಡಿದರು. 

ಆಲಡ್ಕ ಬದ್ರಿಯಾ ಜುಮಾ ಮಸೀದಿ ಹಾಗೂ ಗುಡ್ಡೆಅಂಗಡಿ ನೂರುದ್ದೀನ್ ಜುಮಾ ಮಸೀದಿಗಳಲ್ಲಿ ಅಶ್ರಫ್ ಸಖಾಫಿ ಸವಣೂರು ಹಾಗೂ ಅಸ್ವೀಫ್ ದಾರಿಮಿ ಈದ್ ಪ್ರಾರ್ಥನೆ ಹಾಗೂ ಖುತುಬಾ ನೇತೃತ್ವ ವಹಿಸಿದರು. 

ಈದ್ ವಿಶೇಷ ಪ್ರಾರ್ಥನೆ ಬಳಿಕ ಮುಸ್ಲಿಂ ಬಾಂಧವರು ಪರಸ್ಪರ ಈದ್ ಶುಭಾಶಯ ವಿನಿಮಯ ಮಾಡಿಕೊಂಡರು. 

  • Blogger Comments
  • Facebook Comments

0 comments:

Post a Comment

Item Reviewed: ಹಬ್ಬದ ಸಂತೋಷಾಚರಣೆಯಲ್ಲೂ ಬಡ, ನಿರ್ಗತಿಕ, ಅನಾಥರನ್ನು ಮರೆಯದಿರಿ : ಬಿ.ಎಚ್. ಉಸ್ತಾದ್ ಕರೆ Rating: 5 Reviewed By: karavali Times
Scroll to Top