ಬಂಟ್ವಾಳ, ಜೂನ್ 19, 2023 (ಕರಾವಳಿ ಟೈಮ್ಸ್) : ತಾಲೂಕಿನ ಹೆಸರಾಂತ ಹೋಟೆಲ್ ಉದ್ಯಮಿ ಹಂಝ ಎ ಬಸ್ತಿಕೋಡಿ ಅವರ ಮಾಲಕತ್ವದ ಆನಿಯಾ ದರ್ಬಾರ್ ಹೋಟೆಲ್ ಸಮೂಹ ಸಂಸ್ಥೆಯ ಬಿ.ಸಿ.ರೋಡಿನಲ್ಲಿ 2ನೇ ಹೋಟೆಲ್ “ಆನಿಯಾ ದರ್ಬಾರ್ ಡಿಲಕ್ಸ್” ಹವಾನಿಯಂತ್ರಿತ ಲಕ್ಸುರಿ ಮಲ್ಟಿ ಕಸಿನ್ ಫ್ಯಾಮಿಲಿ ರೆಸ್ಟೋರೆಂಟ್ ಮಾಂಸಾಹಾರಿ ಹೋಟೆಲ್ ಬಿ ಸಿ ರೋಡಿನ ಸ್ಮಾರ್ಟ್ ಸಿಟಿ ವಾಣಿಜ್ಯ ಸಂಕೀರ್ಣದಲ್ಲಿ ಜೂನ್ 16 ರಂದು ಶುಕ್ರವಾರ ಸಂಜೆ 5.30ಕ್ಕೆ ಲೋಕಾರ್ಪಣೆಗೊಂಡಿದೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಸಯ್ಯಿದ್ ಹುಸೈನ್ ಬಾ-ಅಲವಿ ತಂಙಳ್ ಕುಕ್ಕಾಜೆ, ಸಯ್ಯಿದ್ ಜಿಫ್ರಿ ಮುತ್ತುಕೋಯ ತಂಙಳ್ ಬೆಳ್ತಂಗಡಿ, ಇರ್ಶಾದ್ ದಾರಿಮಿ ಅಲ್-ಜಝರಿ ಮಿತ್ತಬೈಲು, ಕಾವಳಕಟ್ಟೆ ಹಝ್ರತ್ ಡಾ ಮುಹಮ್ಮದ್ ಫಾಝಿಲ್ ರಝ್ವಿ, ಮಿತ್ತಬೈಲು ಖತೀಬ್ ಅಶ್ರಫ್ ಫೈಝಿ, ಎಂ ಕೆ ಅಝೀಝ್ ಅಮ್ಜದಿ ಮಾವಿನಕಟ್ಟೆ, ಅಬ್ದುಲ್ ರಝಾಕ್ ಸಖಾಫಿ ಮಡಂತ್ಯಾರು, ಹುಸೈನ್ ಸಅದಿ ಆಲದಪದವು, ಮಾಜಿ ಸಚಿವ ಬಿ ರಮಾನಾಥ ರೈ, ಕೆಪಿಸಿಸಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಂಟ್ವಾಳ ಪುರಸಭಾಧ್ಯಕ್ಷ ಮುಹಮ್ಮದ್ ಶರೀಫ್ ಶಾಂತಿಅಂಗಡಿ, ಸದಸ್ಯ ಮೂನಿಶ್ ಅಲಿ ಬಂಟ್ವಾಳ, ಹಿರಿಯ ನೋಟರಿ-ನ್ಯಾಯವಾದಿ ಎಂ ಅಶ್ವನಿ ಕುಮಾರ್ ರೈ, ಪ್ರಮುಖರಾದ ಸುಲೋಚನಾ ಜಿ ಕೆ ಭಟ್, ಚಂದ್ರಹಾಸ ಶೆಟ್ಟಿ ರಂಗೋಲಿ, ಸಂಜೀವ ಪೂಜಾರಿ ಬಿರ್ವ, ಮುಂಬಯಿ ಉದ್ಯಮಿ ಪುಷ್ಪರಾಜ್ ಶೆಟ್ಟಿ, ಮೊದಲಾದವರು ಭಾಗವಹಿಸಿ ಶುಭ ಹಾರೈಸಿದರು.
ಆನಿಯಾ ದರ್ಬಾರ್ ಸಮೂಹ ಸಂಸ್ಥೆಯ ಅಧೀನದಲ್ಲಿ ಈಗಾಗಲೇ ಬಿ.ಸಿ.ರೋಡು, ಮಡಂತ್ಯಾರಿನಲ್ಲಿ ಮಾಂಸಾಹಾರಿ ಹೋಟೆಲ್ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಇದೀಗ ಗ್ರೂಪಿನ 3ನೇ ಸಂಸ್ಥೆಯಾಗಿ ಆನಿಯಾ ದರ್ಬಾರ್ ಡೀಲಕ್ಸ್ ಎಂಬ ಹೆಸರಿನಲ್ಲಿ ಹೋಟೆಲ್ ಕಾರ್ಯಾರಂಭಗೊಂಡಿದೆ. ಇಲ್ಲಿ ಇಂಡಿಯನ್, ಅರೇಬಿಯನ್, ಅಫ್ಘಾನ್, ಚೈನೀಸ್, ಸೀ ಫೂಡ್ಸ್ ಮೊದಲಾದ ವಿವಿಧ ರೀತಿಯ ರುಚಿಕರವಾದ ಖಾದ್ಯಗಳು, ಆಹಾರ-ಉಪಾಹಾರಗಳು ನ್ಯಾಯೋಚಿತ ಬೆಲೆಯಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ ಎಂದು ಮಾಲಕ ಹಂಝ ಬಸ್ತಿಕೋಡಿ ತಿಳಿಸಿದ್ದಾರೆ.
0 comments:
Post a Comment