ಸೂರಿಕುಮೇರು ನಿವಾಸಿ ಅಬ್ದುಲ್ ರಝಾಕ್ ಸೌದಿಯಲ್ಲಿ ಹೃದಯಾಘಾತದಿಂದ ನಿಧನ - Karavali Times ಸೂರಿಕುಮೇರು ನಿವಾಸಿ ಅಬ್ದುಲ್ ರಝಾಕ್ ಸೌದಿಯಲ್ಲಿ ಹೃದಯಾಘಾತದಿಂದ ನಿಧನ - Karavali Times

728x90

9 June 2023

ಸೂರಿಕುಮೇರು ನಿವಾಸಿ ಅಬ್ದುಲ್ ರಝಾಕ್ ಸೌದಿಯಲ್ಲಿ ಹೃದಯಾಘಾತದಿಂದ ನಿಧನ

ಬಂಟ್ವಾಳ, ಜೂನ್ 09, 2023 (ಕರಾವಳಿ ಟೈಮ್ಸ್) : ಸೌದಿ ಅರೇಬಿಯಾದ ಅಲ್-ಕೋಬರ್ ನಲ್ಲಿ ಹೃದಯಾಘಾತಕ್ಕೊಳಗಾಗಿ ತಾಲೂಕಿನ ಮಾಣಿ ಸಮೀಪದ ಸೂರಿಕುಮೇರ್ ನಿವಾಸಿ ದಿವಂಗತ ಸುಣ್ಣ ಅಬೂಬಕ್ಕರ್ ಅವರ ಪುತ್ರ ಅಬ್ದುಲ್ ರಝಾಕ್ (52) ಗುರುವಾರ ರಾತ್ರಿ ನಿಧನರಾಗಿದ್ದಾರೆ. 

ಕಳೆದ 15 ವರ್ಷಗಳಿಂದ ಕೊಲ್ಲಿ ರಾಷ್ಟ್ರದಲ್ಲಿ ಉದ್ಯೋಗದಲ್ಲಿದ್ದ ಅವರು ಇತ್ತೀಚೆಗಷ್ಟೆ ರಜೆಯಲ್ಲಿ ಮನೆಗೆ ಬಂದು ಕಳೆದ ಮೂರು ತಿಂಗಳ ಹಿಂದೆ ವಾಪಾಸು ಸೌದಿ ಅರೇಬಿಯಾಕ್ಕೆ ತೆರಳಿದ್ದರು ಎನ್ನಲಾಗಿದೆ. ಸೌದಿ ಅರೇಬಿಯಾದಲ್ಲಿ ಶುಕ್ರವಾರ ಆಡಳಿತ ಕಛೇರಿಗಳಿಗೆ ವಾರದ ರಜೆ ಇರುವ ಹಿನ್ನೆಲೆಯಲ್ಲಿ ಮೃತ ಶರೀರದ ಅಂತ್ಯಕ್ರಿಯೆ ಬಗ್ಗೆ ಯಾವುದೇ ತೀರ್ಮಾನ ಕೈಗೊಳ್ಳಲಾಗಿಲ್ಲ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮೃತರು ಪತ್ನಿ, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಸೂರಿಕುಮೇರು ನಿವಾಸಿ ಅಬ್ದುಲ್ ರಝಾಕ್ ಸೌದಿಯಲ್ಲಿ ಹೃದಯಾಘಾತದಿಂದ ನಿಧನ Rating: 5 Reviewed By: karavali Times
Scroll to Top