ಬಸ್ಸಿನಲ್ಲಿ ಮಹಿಳೆಯ ಜಡೆ ಸವರಿದ ಆರೋಪ : ವ್ಯಕ್ತಿಯ ವಿರುದ್ದ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲು - Karavali Times ಬಸ್ಸಿನಲ್ಲಿ ಮಹಿಳೆಯ ಜಡೆ ಸವರಿದ ಆರೋಪ : ವ್ಯಕ್ತಿಯ ವಿರುದ್ದ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲು - Karavali Times

728x90

26 May 2023

ಬಸ್ಸಿನಲ್ಲಿ ಮಹಿಳೆಯ ಜಡೆ ಸವರಿದ ಆರೋಪ : ವ್ಯಕ್ತಿಯ ವಿರುದ್ದ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲು

ಬಂಟ್ವಾಳ, ಮೇ 26, 2023 (ಕರಾವಳಿ ಟೈಮ್ಸ್) : ಬಸ್ಸಿನಲ್ಲಿ ಮಹಿಳೆಯ ಜಡೆ ಸವರಿದ ಆರೋಪದಲ್ಲಿ ಆರೋಪಿ ನಾವೂರು ಗ್ರಾಮದ ಪಲ್ಲಿಗುಡ್ಡೆ ನಿವಾಸಿ ಹಮೀದ್ ಎಂಬವರ ವಿರುದ್ದ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದೆ.

ಗುರುವಾರ ಮಂಗಳೂರು-ಧರ್ಮಸ್ಥಳ ಮಾರ್ಗವಾಗಿ ಸಂಚರಿಸುವ ಕೆ ಎಸ್ ಆರ್ ಟಿ ಸಿ ಬಸ್ಸಿನಲ್ಲಿ ಮಹಿಳೆಯರು ಕುಳಿತಿರುವ ಸೀಟಿನ ಹಿಂಭಾಗದಲ್ಲಿ ಕುಳಿತು ಪ್ರಯಾಣಿಸುತ್ತಿದ್ದ ಹಮೀದ್ ಬಸ್ಸು ಬಂಟ್ವಾಳ ಕಸಬಾ ಗ್ರಾಮದ ಜಕ್ರಿಬೆಟ್ಟು ಎಂಬಲ್ಲಿಗೆ ತಲುಪುತ್ತಿದ್ದಂತೆ ಸಂಜೆ ಸಮಯ 4.30 ರ ವೇಳೆಗೆ ಮುಂದಿನ ಸೀಟಿನಲ್ಲಿ ಕುಳಿತ ಮಹಿಳೆಯ ಜಡೆಯನ್ನು ಎಳೆಯುವುದು, ಬೆನ್ನಿನ ಹಿಂಬದಿಯಿಂದ ಸ್ಪರ್ಶಿಸಿ ಮಹಿಳೆಯ ಮಾನಕ್ಕೆ ಕುಂದುಂಟು ಮಾಡಿರುವುದು ಕಂಡು ಬಂದಿದ್ದು, ಸದ್ರಿ ಪ್ರಕರಣವನ್ನು ಸಹ ಪ್ರಯಾಣಿಕರು ಮೊಬೈಲ್ ಮೂಲಕ ವೀಡಿಯೋ ಚಿತ್ರೀಕರಿಸಿ ವೈರಲ್ ಮಾಡಿದ ಹಿನ್ನಲೆಯಲ್ಲಿ ಈ ಬಗ್ಗೆ ನಗರ ಠಾಣೆಯಲ್ಲಿ ತೆಂಕಬೆಳ್ಳೂರು ನಿವಾಸಿ ತಿರುಲೇಶ್ ಎಂಬವರು ದೂರು ದಾಖಲಿಸಿದ್ದಾರೆ. ಸದ್ರಿ ದೂರು ಸ್ವೀಕರಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಬಸ್ಸಿನಲ್ಲಿ ಮಹಿಳೆಯ ಜಡೆ ಸವರಿದ ಆರೋಪ : ವ್ಯಕ್ತಿಯ ವಿರುದ್ದ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲು Rating: 5 Reviewed By: karavali Times
Scroll to Top