ಬಂಟ್ವಾಳ, ಮೇ 25, 2023 (ಕರಾವಳಿ ಟೈಮ್ಸ್) : ತಾಲೂಕಿನ ಮಾಣಿ ಜಂಕ್ಷನ್ನಿನಲ್ಲಿ ಬುಧವಾರ ಮಧ್ಯಾಹ್ನ ಯುವಕರು ಹೊಡೆದಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಬುಧವಾರ ಸಂಜೆ ಎರಡು ಪ್ರಕರಣ ದಾಖಲಾಗಿದೆ.
ಮೊದಲನೇ ಪ್ರಕರಣದಲ್ಲಿ ಮಾಣಿ ಗ್ರಾಮದ ಕೊಡಾಜೆ ನಿವಾಸಿ ಭುಜಂಗ ಸಪಲ್ಯ ಅವರ ಮಗ ಮಹೇಂದ್ರ ಎಂಬವರು ಫಿರ್ಯಾದಿ ಸಲ್ಲಿಸಿದ್ದು, ಬುಧವಾರ (ಮೇ 24) ತಾನು ಮಾಣಿಯಲ್ಲಿರುವ ಬ್ಯಾಂಕ್ ಆಫ್ ಬರೋಡಾದಿಂದ ಆಡವಿಟ್ಟ ಚಿನ್ನದ ಸರ ಬಿಡಿಸಿ ಸ್ಕೂಟರಿನಲ್ಲಿ ಬರುತ್ತಿದ್ದ ವೇಳೆ ಪುತ್ತೂರು-ಬಂಟ್ವಾಳ ರಸ್ತೆಯಲ್ಲಿ ಹೋಗುತ್ತಿರುವ ಮಧ್ಯಾಹ್ನ ಸುಮಾರು 1.45 ರ ವೇಳೆಗೆ ಮಾಣಿ ಜಂಕ್ಷನ್ನಿನಲ್ಲಿರುವ ನಾಗರಾಜ್ ಫೈನಾನ್ಸ್ ಕಛೇರಿಯ ಮುಂಬಾಗ ತಲುಪಿದಾಗ ರಸ್ತೆಯ ಬದಿ ನಾಗುವಿನ ಸಹಚಾರರೊಬ್ಬರು ತಲವಾರು ಬೀಸಿದಾಗ ತಪ್ಪಿಸಿಕೊಂಡು ಬುಡೋಳಿ ಕಡೆಗೆ ಹೋಗುತ್ತಿದ್ದಾಗ ಮಾಣಿ ಜಂಕ್ಷನ್ನಿನಲ್ಲಿ ನನ್ನ ಆಕ್ಟಿವಾ ಸ್ಕೂಟರಿಗೆ ಹಿಂದಿನಿಂದ ಓಮ್ನಿ ಕಾರನ್ನು ಡಿಕ್ಕಿ ಹೊಡೆದಿದ್ದು, ಆ ಸಂದರ್ಭ ನಾನು ರಸ್ತೆಗೆ ಬಿದ್ದಾಗ ಕಾರಿನಿಂದ ರಾಕೇಶ್, ಮಂಜುನಾಥ್ ಕೈಯಲ್ಲಿ ಕ್ರಿಕೆಟ್ ಬ್ಯಾಟ್ ಹಿಡಿದುಕೊಂಡು ನನ್ನಲ್ಲಿ ಬಂದು ರಾಕೇಶ್ ವಿಕೆಟಿನಿಂದ ಮುಖಕ್ಕೆ, ತಲೆಗೆ ಹೊಡೆದಿರುತ್ತಾರೆ. ಮಂಜುನಾಥ್ ಬ್ಯಾಟಿನಿಂದ ಕಾಲಿಗೆ ಮತ್ತು ತಲೆಗೆ ಹೊಡೆದಿದ್ದು ಅವರೊಂದಿಗೆ ಇದ್ದ ಅನಂತಾಡಿ ಪ್ರವೀಣ್ ಕೂಡ ವಿಕೆಟಿನಿಂದ ತಲೆಗೆ ಹೊಡೆದಿರುತ್ತಾನೆ. ಮಂಜುನಾಥನ ಕೈಯಲ್ಲಿದ್ದ ವಿಕೆಟ್ ತುಂಡಾದ ಬಳಿಕ ಇತರರ ಕೈಯಿಂದ ಕಬ್ಬಿಣದ ರಾಡ್ ತೆಗೆದು ಹಣೆಗೆ ಹೊಡೆದಿದ್ದು, ನನ್ನ ಕುತ್ತಿಗೆಯಲ್ಲಿದ್ದ ಚಿನ್ನದ ಚೈನ್ ಎಳೆದು ನೀನು ಬಾರಿ ಜಿಜೆಪಿಯಲ್ಲಿ ಕೆಲಸ ಮಾಡುತ್ತೀಯಾ ಎಂದು ಹೇಳಿ ಹಲ್ಲೆ ನಡೆಸಿರುತ್ತಾರೆ. ಈ ಸಂದರ್ಭ ನಾನು ಬೊಬ್ಬೆ ಹೊಡೆದಾಗ ಆರೋಪಿಗಳು ಬಂದ ಓಮ್ನಿ ಕಾರಿನಲ್ಲಿ ತೆರಳಿದ್ದು, ಈ ಸಂದರ್ಭ ನಿನ್ನನ್ನು ಇನ್ನು ಮುಂದೆಯಾದರೂ ಕೊಲ್ಲದೆ ಬಿಡುವುದಿಲ್ಲ ಎಂದು ಹೇಳಿ ಹೋಗಿರುತ್ತಾರೆ. ಕಾಂಗ್ರೆಸ್ ಕಾರ್ಯಕರ್ತರಾದ ರಾಕೇಶ್, ಮಂಜುನಾಥ್, ರಾಜೇಶ್ ಹಾಗೂ ಇತರರು ಕೊಲ್ಲುವ ಉದ್ದೇಶದಿಂದ ತಲವಾರು ಬೀಸಿ, ವಿಕೆಟ್, ಬ್ಯಾಟ್, ಕಬ್ಬಿಣದ ರಾಡಿನಿಂದ ಹೊಡೆದು ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಸಿದುಕೊಂಡು ಹೋಗಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ಫಿರ್ಯಾದಿಯಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಅಪರಾಧ ಕ್ರಮಾಂಕ 90/2023 ಕಲಂ 324, 506, 307, 394 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಅನಂತಾಡಿ ಗ್ರಾಮದ ಕರಿಂಕ ನಿವಾಸಿ ದಿವಂಗತ ವೆಂಕಪ್ಪ ನಾಯ್ಕ ಅವರ ಪುತ್ರ ಈಶ್ವರ ನಾಯ್ಕ ಯಾನೆ ಪ್ರವೀಣ್ ನಾಯ್ಕ ಎಂಬವರು ಪೊಲೀಸರಿಗೆ ಫಿರ್ಯಾದಿ ಸಲ್ಲಿಸಿದ್ದು, ಬುಧವಾರ (ಮೇ 24) ನಾನು ಪುತ್ತೂರಿನಿಂದ ಬ್ಯಾಂಕ್ ರಿಕವರಿ ಕರ್ತವ್ಯ ನಿರ್ವಹಿಸಿಕೊಂಡು ಸಂಗ್ರಹವಾದ ಹಣದೊಂದಿಗೆ ತನ್ನ ಮೋಟಾರ್ ಸೈಕಲಿನಲ್ಲಿ ಮಾಣಿ ಕಡೆಗೆ ಹೊರಟು ಮಧ್ಯಾಹ್ನ ಸುಮಾರು 2 ಗಂಟೆ ವೇಳೆಗೆ ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಪಟ್ಲಕೋಡಿ ಎಂಬಲ್ಲಿ ತಲುಪಿದಾಗ ಪರಿಚಯದ ಮಹೇಂದ್ರ, ಪ್ರಶಾಂತ್, ಚಿರಂಜೀವಿ, ಪ್ರವೀಣ್ ಅವರು ಬಿಳಿ ಬಣ್ಣದ ಸ್ವೀಫ್ಟ್ ಕಾರು, ಪಿಕ್ ಆಪ್ ಹಾಗೂ ಕೆಂಪು ಬಣ್ಣದ ಬ್ರಿಜಾ ಕಾರಿನಲ್ಲಿ ನಿಂತುಕೊಂಡಿದ್ದು ನನ್ನನ್ನು ನೋಡಿ ಏಕಾ ಏಕಿ ಬ್ರಿಜಾ ಕಾರನ್ನು ಚಲಾಯಿಸಿ ಮುಂದಕ್ಕೆ ಹೋಗದಂತೆ ತೆಡೆದು ಆ ಕಾರಿನಿಂದ ದೇವಿ ಪ್ರಸಾದ್ ಎಂಬಾತ ಇಳಿದು ಬಂದು ಅದೇ ಸಮಯ ಸ್ವಿಫ್ಟ್ ಕಾರಿನಿಂದ ಹರೀಶ್, ಮಹೇಂದ್ರ, ಪ್ರಶಾಂತ, ಚಿರಂಜೀವಿ, ಪ್ರವೀಣ್ ಅವರು ಸುತ್ತುವರೆದು ಮಹೇಂದ್ರನು ನನ್ನ ಬೈಕ್ ಕೀಯನ್ನು ಕಸಿದುಕೊಂಡು “ಏ ಬೆವಾರ್ಸಿ ನಾಯ್ಕ ಕೀಳು ಜಾತಿಯವನೇ ಮಂಜು ಮತ್ತು ರಾಕೇಶ್ ಎಲ್ಲಿದ್ದಾರೆ ರಂಡೇ ಮಗ ಬೇಗ ಅವರನ್ನು ಇಲ್ಲಿಗೆ ಬರಲು ಹೇಳು ಎಂದು ಬೈದು, ಹರೀಶನು ನನ್ನ ಕಾಲರ್ ಪಟ್ಟಿ ಹಿಡಿದು ಎಲೆಕ್ಷನ್ ಕೌಂಟಿಂಗ್ ದಿನ ಬಾರಿ ದುರಂಹಕಾರ ತೋರಿಸಿದ್ದಿ’ ಸೊಳೇ ಮಗ ನಾಯ್ಕ ನಾಯಿ ಎನ್ನತ್ತಾ ಬೈಕಿನಿಂದ ದೂಡಿ ಎಡ ಕೆನ್ನೆಗೆ ಹೊಡೆದು ಮಹೇಂದ್ರನು ಟಿ ಶರ್ಟನ್ನು ಹರಿದು ಹಾಕಿದ್ದು ತನ್ನ ಬೈಕಿನಲ್ಲಿದ್ದ 13 ಸಾವಿರ ರೂಪಾಯಿ ಹಣವಿದ್ದ ಚೀಲವನ್ನು ಪ್ರಶಾಂತ್ ಎಂಬಾತನು ತೆಗೆದನು. ಆ ಸಮಯ ದೇವಿ ಪ್ರಸಾದನು ನನ್ನ ಬೆನ್ನಿಗೆ ಕೈಯಿಂದ ಹೊಡೆದು ನೆಲಕ್ಕೆ ದೂಡಿದ್ದು ಚಿರಂಜೀವಿ ಎಂಬಾತನು ಕುತ್ತಿಗೆಯ ಹಿಂಭಾಗ ಗುದ್ದಿದ್ದು ಅಲ್ಲೆ ಇದ್ದ ಪಿಕ್ ಆಪ್ ವಾಹನದಿಂದ ರಾಡನ್ನು ತೆಗೆದು ತಲೆಗೆ ಹೊಡೆದು ಕೊಲ್ಲಲು ಬಂದಾಗ ತಪ್ಪಿಸಿಕೊಂಡು ಆದೇ ಸಮಯ ಪ್ರವೀಣ್ ಮತ್ತು ಇತರರು ನನ್ನನ್ನುದ್ದೇಶಿಸಿ ಸೊಳೆ ಮಗನೇ ಈ ದಿನ ಬದುಕಿದ್ದೀ ಬೇವಾರ್ಸಿ ಮುಂದಕ್ಕೆ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ದೂಡಿ ಹಾಕಿ ಪ್ರಶಾಂತನು “ನಿನ್ನ ಹಣವನ್ನು ನಿನ್ನ ಬೊಜ್ಜದ ಖರ್ಚಿಗೆ ಕೊಡುತ್ತೇನೆ ಎಂದು ಹೇಳಿ ಹೋಗಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ವಿಟ್ಲ ಠಾಣಾ ಅಪರಾಧ ಕ್ರಮಾಂಕ 91/2023 ಕಲಂ 143, 147, 323, 324, 506, 504, 307, 394 ಜೊತೆಗೆ 149 ಐಪಿಸಿ ಮತ್ತು ಕಲಂ 3(1)(ಎಸ್) ದಿ ಎಸ್ ಸಿ ಎಸ್ಟಿ (ಪ್ರಿವೆನ್ಶನ್ ಆಫ್ ಅಟ್ರೋಸಿಟೀಸ್ ಆಕ್ಟ್ 2015 ರಂತೆ ಪ್ರಕರಣ ದಾಖಲಾಗಿದೆ.
0 comments:
Post a Comment