ಕಡಬ : ಅಕ್ರಮ ಮರಳುಗಾರಿಕೆ ಸ್ಥಳಕ್ಕೆ ಪೊಲೀಸ್ ದಾಳಿ, ಯಂತ್ರಗಳು ವಶ - Karavali Times ಕಡಬ : ಅಕ್ರಮ ಮರಳುಗಾರಿಕೆ ಸ್ಥಳಕ್ಕೆ ಪೊಲೀಸ್ ದಾಳಿ, ಯಂತ್ರಗಳು ವಶ - Karavali Times

728x90

6 May 2023

ಕಡಬ : ಅಕ್ರಮ ಮರಳುಗಾರಿಕೆ ಸ್ಥಳಕ್ಕೆ ಪೊಲೀಸ್ ದಾಳಿ, ಯಂತ್ರಗಳು ವಶ

ಕಡಬ, ಮೇ 06, 2023 (ಕರಾವಳಿ ಟೈಮ್ಸ್) : ತಾಲೂಕಿನ ಕೊಯ್ಲ ಗ್ರಾಮದ ಪರಂಗಾಜೆ ಎಂಬಲ್ಲಿನ ನದಿಯಲ್ಲಿ ಅಕ್ರಮ ಮರಳುಗಾರಿಕೆ ಪತ್ತೆ ಹಚ್ಚಿರುವ ಕಡಬ ಪೊಲೀಸರು ಕೃತ್ಯಕ್ಕೆ ಬಳಸುತ್ತಿದ್ದ ಯಂತ್ರಗಳನ್ನು ಶುಕ್ರವಾರ ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಅಕ್ರಮವಾಗಿ ಡ್ರಿಜ್ಜಿಂಗ್ ಬಳಸಿ ಮರಳು ತೆಗೆಯುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಕಡಬ ಠಾಣಾ ಪಿಎಸ್ಸೈ ಅವರು ಠಾಣಾ ಸಿಬ್ಬಂದಿಗಳೊಂದಿಗೆ ಧಾವಿಸಿ ಪರಿಶೀಲನೆ ನಡೆಸಿದ್ದು, ಸ್ಥಳದಲ್ಲಿ ಡ್ರಿಜ್ಜಿಂಗ್ ಬಳಸಿ ಮರಳು ತೆಗೆಯುತ್ತಿರುವುದು ಕಂಡು ಬಂದಿದೆ. 

ಸ್ಥಳದಲ್ಲಿದ್ದ 4 ಎಚ್ ಪಿ ಮೋಟರು ಅಳವಡಿಸಿರುವ ಡ್ರಿಜ್ಜಿಂಗ್ ಸಹಿತ ಬೋಟ್, ಡ್ರಿಜ್ಜಿಂಗ್ ಮೋಟಾರಿಗೆ ಅಳವಡಿಸಿರುವ 6 ಇಂಚು ಸುತ್ತಳತೆಯ 20 ಅಡಿ ಉದ್ದದ ಫೈಬರ್ ಪೈಪು, 6 ಇಂಚು ಸುತ್ತಳತೆಯ 20 ಅಡಿ ಉದ್ದದ ಕಬ್ಬಿಣದ 6 ಪೈಪುಗಳು, ಕಬ್ಬಿಣದ ಪೈಪುಗಳಿಗೆ ಅಳವಡಿಸಿದ ಕಬ್ಬಿಣದ 14 ಡ್ರಂಗಳು, 4*6 ಅಡಿ ಉದ್ದದ ಕಬ್ಬಿಣದ ಜಾಲರಿ, ಮರಳು ತೆಗೆಯಲು ಉಪಯೋಗಿಸುವ ಕಬ್ಬಿಣದ 2 ಕೈ ಗುದ್ದಲಿಗಳು, ಪ್ಲಾಸ್ಟಿಕ್ ಬುಟ್ಟಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಕಡಬ : ಅಕ್ರಮ ಮರಳುಗಾರಿಕೆ ಸ್ಥಳಕ್ಕೆ ಪೊಲೀಸ್ ದಾಳಿ, ಯಂತ್ರಗಳು ವಶ Rating: 5 Reviewed By: karavali Times
Scroll to Top