ಬಂಟ್ವಾಳ, ಮೇ 06, 2023 (ಕರಾವಳಿ ಟೈಮ್ಸ್) : ಕ್ಷೇತ್ರದವರೇ ಆಗಿದ್ದು, ಕ್ಷೇತ್ರದ ಪ್ರತಿಯೊಬ್ಬರನ್ನೂ ಬಲ್ಲವರಾಗಿ ಸರ್ವ ಜನರ ಏಳಿಗೆ ಬಯಸುವ ಸಜ್ಜನ ರಾಜಕಾರಣಿ ಹಾಗೂ ಅಭಿವೃದ್ದಿಯ ಹರಿಕಾರ, ಮಾಜಿ ಸಚಿವ, ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ ರಮಾನಾಥ ರೈ ಅವರನ್ನು ಕ್ಷೇತ್ರದ ಎಲ್ಲ ಜನ ಜಾತಿ-ದರ್ಮ, ವರ್ಗ ಬೇಧ ಮರೆತು ಒಗ್ಗಟ್ಟಾಗಿ ಗೆಲ್ಲಿಸಬೇಕು. ಆ ಮೂಲಕ ಕ್ಷೇತ್ರದ, ಜಿಲ್ಲೆಯ ಹಾಗೂ ರಾಜ್ಯದ ಜನರ ಏಳಿಗೆಗೆ ಕ್ಷೇತ್ರದ ಜನ ಕಾರಣರಾಗಬೇಖು ಎಂದು ವಿಟ್ಲ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ಕರ್ನಾಕಟ ಪ್ರದೇಶ ಕಾಂಗ್ರೆಸ್ (ಕೆಪಿಸಿಸಿ) ಉಪಾಧ್ಯಕ್ಷ ಹಾಜಿ ಕೆ ಎಂ ಇಬ್ರಾಹಿಂ ಕರೆ ನೀಡಿದರು.
ಶನಿವಾರ ಬಿ ಸಿ ರೋಡಿನ ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಶಾಂತಿ, ಸೌಹಾರ್ದತೆ, ಸಾರ್ವಭೌಮತೆಗಾಗಿ ಜಿಲ್ಲೆಯ ಜನ ಕಾಂಗ್ರೆಸ್ ಪಕ್ಷದ ಸಮರ್ಥ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ರಮಾನಾಥ ರೈ ಹೊರತುಪಡಿಸಿದರೆ ಉಳಿದೆಲ್ಲ ಪಕ್ಷಗಳ ಅಭ್ಯರ್ಥಿಗಳು ಕೂಡಾ ಕ್ಷೇತ್ರಕ್ಕೆ ಅನ್ಯರಾಗಿದ್ದು, ಎಲ್ಲಿಂದಲೋ ಬಂದು ಇಲ್ಲಿ ಚುನಾವಣೆಗೆ ಸ್ಪರ್ಧಿಸಿ ಮತ ಯಾಚಿಸುತ್ತಿದ್ದರೆ, ರಮಾನಾಥ ರೈ ಅವರು ಈ ಕ್ಷೇತ್ರದ ಮಗನಾಗಿ ನಿಮ್ಮ ಬಳಿ ಬರುತ್ತಿದ್ದಾರೆ. ಕ್ಷೇತ್ರದ ಜನ ಮನೆ ಮಗನನ್ನು ಆರಿಸುವ ಮೂಲಕ ತಾಯಿ ಪ್ರೀತಿ ತೋರಿಸಿ ಎಂದು ಮತದಾರರಿಗೆ ಮನವಿ ಮಾಡಿದರು.
ದೇಶದಲ್ಲಿ ಕಾಂಗ್ರೆಸ್ ಹೊರತುಪಡಿಸಿ ಯಾವುದೇ ಪಕ್ಷದಿಂದಲೂ ಸರ್ವಜನಾಂಗದ ಶಾಂತಿಯ ತೋಟವನ್ನಾಗಿ ಮಾಡಲು ಅಸಾಧ್ಯವಾಗಿದ್ದು, ಜನರ ಏಳಿಗೆಯ ಜೊತೆಗೆ ದೇಶದ ಅಭಿವೃದ್ದಿ ಹಾಗೂ ಎಲ್ಲ ವರ್ಗದ ಜನರನ್ನು ಒಂದೇ ತೊಟ್ಟಿಲಲ್ಲಿ ಕೂರಿಸಿ ಸಮಾನ ನ್ಯಾಯ ದೊರಕಿಸಿಕೊಡಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ಇದು ನನ್ನ ಅನುಭವ ಸತ್ಯ ಎಂದು ಕೆ ಎಂ ಇಬ್ರಾಹಿಂ ಇದೇ ವೇಳೆ ಸಾರಿ ಹೇಳಿದರು.
ಈ ಸಂದರ್ಭ ಕೆಪಿಸಿಸಿ ಸದಸ್ಯ ಪಿಯೂಸ್ ಎಲ್ ರೋಡ್ರಿಗಸ್, ಪುರಸಭಾ ಉಪಾಧ್ಯಕ್ಷೆ ಜೆಸಿಂತಾ ಡಿ’ಸೋಜ, ಸದಸ್ಯರಾದ ಮುಹಮ್ಮದ್ ನಂದರಬೆಟ್ಟು, ಲೋಲಾಕ್ಷ ಶೆಟ್ಟಿ, ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಂತಿ ಪೂಜಾರಿ, ಪಕ್ಷ ಪ್ರಮುಖರಾದ ಶಬೀರ್ ಸಿದ್ದಕಟ್ಟೆ, ಬಿ ಮೋಹನ್, ಬಿ ಎಂ ಅಬ್ಬಾಸ್ ಆಲಿ, ಪರಮೇಶ್ವರ ಮೂಲ್ಯ, ಜೆಸಿಂತಾ ಡಿ’ಸೋಜ, ನಾರಾಯಣ ನಾಯ್ಕ್, ಜೋಸ್ಪಿನ್ ಡಿ’ಸೋಜ ಮೊದಲಾದವರು ಜೊತೆಗಿದ್ದರು.
0 comments:
Post a Comment