ವಾಟ್ಸಪ್ ಮತ್ತೊಂದು ಫೀಚರ್ ಪರಿಚಯಿಸುತ್ತಿದೆ : ಇದೀಗ ವಾಟ್ಸಪ್ ವಾಯ್ಸ್ ಸ್ಟೇಟಸ್ ಫೀಚರ್ ಈಗ ಎಲ್ಲಾ ಬಳಕೆದಾರರಿಗೂ ಲಭ್ಯ - Karavali Times ವಾಟ್ಸಪ್ ಮತ್ತೊಂದು ಫೀಚರ್ ಪರಿಚಯಿಸುತ್ತಿದೆ : ಇದೀಗ ವಾಟ್ಸಪ್ ವಾಯ್ಸ್ ಸ್ಟೇಟಸ್ ಫೀಚರ್ ಈಗ ಎಲ್ಲಾ ಬಳಕೆದಾರರಿಗೂ ಲಭ್ಯ - Karavali Times

728x90

20 May 2023

ವಾಟ್ಸಪ್ ಮತ್ತೊಂದು ಫೀಚರ್ ಪರಿಚಯಿಸುತ್ತಿದೆ : ಇದೀಗ ವಾಟ್ಸಪ್ ವಾಯ್ಸ್ ಸ್ಟೇಟಸ್ ಫೀಚರ್ ಈಗ ಎಲ್ಲಾ ಬಳಕೆದಾರರಿಗೂ ಲಭ್ಯ

ನವದೆಹಲಿ, ಮೇ 20, 2023 (ಕರಾವಳಿ ಟೈಮ್ಸ್) : ಮೆಸೇಜಿಂಗ್ ಪ್ಲಾಟ್‍ಫಾರ್ಮ್ ವ್ಯಾಟ್ಸಪ್ ಬಳಕೆದಾರರ ಬೇಡಿಕೆ ತಕ್ಕಂತೆ ಹೊಸ ಹೊಸ ಫೀಚರ್ಸ್ ಪರಿಚಯಿಸುತ್ತಿದೆ. ಚಾಟ್ ಲಾಕ್, ಗ್ರೂಪ್ ಕಾಲ್, ಮೆಸೇಜ್ ಎಡಿಟ್, ಭದ್ರತಾ ಫೀಚರ್ ಸೇರಿದಂತೆ ಹಲವು ಸೌಲಭ್ಯಗಳನ್ನು ವ್ಯಾಟ್ಸಪ್ ಈಗಾಗಲೇ ನೀಡಿದೆ. ಇದೀಗ ಹೊಸ ಫೀಚರ್ ಪರಿಚಯಿಸಿದೆ. ವಾಟ್ಸಪ್ ವಾಯ್ಸ್ ಸ್ಟೇಟಸ್. ಧ್ವನಿ ಸ್ಟೇಟಸ್ ಫೀಚರನ್ನು ವ್ಯಾಟ್ಸಪ್ ಮಾರ್ಚ್ ತಿಂಗಳಲ್ಲಿ ಪರಿಚಯಿಸಿತ್ತು. ಇದೀಗ ನೂತನ ವಾಯ್ಸ್ ಸ್ಟೇಟಸ್ ಎಲ್ಲಾ ಬಳಕೆದಾರರಿಗೆ ಲಭ್ಯವಿದೆ. 

ವಾಟ್ಸಪ್ ಸ್ಟೇಟಸ್ ಅತೀ ಹೆಚ್ಚು ಸದ್ದು ಮಾಡುವ ಫೀಚರ್. ಬಳಕೆದಾರರು ಸ್ಟೇಟಸ್ ಮೂಲಕ ಫೆÇೀಟೋಗಳನ್ನು ಹಾಕುತ್ತಾರೆ. ಇದೀಗ ಸ್ಟೇಟಸ್ ಮೂಲಕ ಧ್ವನಿ ನೋಟ್ ಸೇರಿಸಿಕೊಳ್ಳಲು ಸಾಧ್ಯವಿದೆ. ಬಳಕೆದಾರರು ತಮ್ಮದೇ ವಾಯ್ಸ್ ರೆಕಾರ್ಡ್ ಮಾಡಿ ಸ್ಟೇಟಸಿನಲ್ಲಿ ಹಾಕಬಹುದು. ಆರಂಭಿಕ ಹಂತದಲ್ಲಿ ಬಿಟಾ ವರ್ಶನ್‍ನಲ್ಲಿದ್ದ ಈ ಫೀಚರ್, ಇದೀಗ ಎಲ್ಲಾ ಬಳಕೆದಾರರಿಗೆ ವಾಯ್ಸ್ ಸ್ಟೇಟಸ್ ಫೀಚರ್ ಲಭ್ಯವಿದೆ.

ಈ ಸೌಲಭ್ಯ ಬಳಸಲು ವಾಟ್ಸಪ್ ಗ್ರಾಹಕರು ಮೊದಲು ವಾಟ್ಸಪ್ ಅಪ್ಲಿಕೇಶನ್ ಒಪನ್ ಮಾಡಿ, ಸ್ಟೇಟಸ್ ಟ್ಯಾಬ್ ಕ್ಲಿಕ್ ಮಾಡಬೇಕು. ಸ್ಟೇಟಸ್ ಟ್ಯಾಬ್ ನಲ್ಲಿರುವ ಪೆನ್ಸಿಲ್ ಐಕಾನ್ ಕ್ಲಿಕ್ ಮಾಡಬೇಕು. ಇಲ್ಲಿರುವ ಮೈಕ್ರೋ ಫೆÇೀನ್ ಬಟಲ್ ಒತ್ತಿ ಹಿಡಿದು ನಿಮ್ಮ ಧ್ವನಿ ರೆಕಾರ್ಡ್ ಮಾಡಬೇಕು, ಮೈಕ್ರೋ ಫೆÇೀನ್ ಬಟನ್ ರಿಲೀಸ್ ಮಾಡಿ, ಸ್ಟೇಟಸ್‍ಗೆ ವಾಯ್ಸ್ ಅಪ್ಲೋಡ್ ಮಾಡಬೇಕು. 

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ವಾಯ್ಸ್ ಸ್ಟೇಟಸ್‍ನಲ್ಲಿ 30 ಸೆಕೆಂಡ್‍ಗಿಂತ ಜಾಸ್ತಿ ವಾಯ್ಸ್ ರೆಕಾರ್ಡ್ ಮಾಡಿ ಸ್ಟೇಟಸ್‍ಗೆ ಹಾಕಲು ಸಾಧ್ಯವಿಲ್ಲ. ಸ್ಟೇಟಸ್ ಹಾಕುವ ವಾಯ್ಸ್ ನೋಟ್ 30 ಸೆಕೆಂಡ್ ಒಳಗಿರಬೇಕು. 

ಇತ್ತೀಚೆಗೆ ವ್ಯಾಟ್ಸಪ್ ಹಲವು ಫೀಚರ್ಸ್ ಬಿಡುಗಡೆ ಮಾಡಿದೆ. ಇದೀಗ ಬಳಕೆಗಾರರು ಗ್ರೂಪ್ ಕಾಲ್‍ನಲ್ಲಿ ಹೊಸ ಫೀಚರ್ ಬಳಕೆ ಮಾಡಲು ಸಾಧ್ಯವಿದೆ. ಗ್ರೂಪ್‍ನಲ್ಲಿರುವ ಎಲ್ಲಾ ಸದಸ್ಯರ ಬದಲು ಆಯ್ದ ಸದಸ್ಯರಿಗೆ ಕಾಲ್ ಮಾಡುವ ಫೀಚರ್ ನೀಡಲಾಗಿದೆ. ವಾಟ್ಸಪ್ ಬಳಕೆದಾರರು ಮೆಸೇಜನ್ನು ಎಡಿಟ್ ಮಾಡಲು ಅವಕಾಶ ನೀಡಿದೆ. ತಾವು ಕಳುಹಿಸಿದ ಸಂದೇಶವನ್ನು 15 ನಿಮಿಷದೊಳಗೆ ಎಡಿಟ್ ಮಾಡಲು ಸಾಧ್ಯವಿದೆ. ಆದರೆ ಸಂದೇಶದಲ್ಲಿರುವ ಪದಗಳ ತಪ್ಪುಗಳನ್ನು ಸರಿಪಡಿಸಲು ಮಾತ್ರ ಅವಕಾಶ ನೀಡಲಾಗಿದೆ. ಸಂದೇಶದ ಮೂಲ ಸ್ವರೂಪವನ್ನೇ ಬದಲಾಯಿಸಲು ಸಾಧ್ಯವಿಲ್ಲ. 

ಇಷ್ಟೇ ಅಲ್ಲ ವಾಟ್ಸಪ್ ಇತ್ತೀಚೆಗೆ ಚಾಟ್ ಲಾಕ್ ಫೀಚರ್ಸ್ ಕೂಡ ಪರಿಚಯಿಸಿದೆ. ನಿಮಗೆ ಬಂದಿರುವ ಸಂದೇಶಗಳನ್ನು ಚಾಟ್ ಲಾಕ್ ಫೀಚರ್ ಮೂಲಕ ಪ್ರೈವೇಟ್ ಮಾಡಲು ಸಾಧ್ಯವಿದೆ. ಚಾಟ್ ಲಾಕ್ ಮಾಡಿದ ಸಂದೇಶಗಳು ಯಾರಿಗೂ ಕಾಣಿಸುವುದಿಲ್ಲ. ವಾಟ್ಸಪ್ ಆಪ್ಲಿಕೇಶನ್ ಓಪನ್ ಆಗಿದ್ದರೂ ಲಾಕ್ ಆಗಿರುವ ಸಂದೇಶಗಳು ಕಾಣಿಸುವುದಿಲ್ಲ. ಫಿಂಗರ್ ಪ್ರಿಂಟ್ ಲಾಕ್ ಮೂಲಕ ಓಪನ್ ಮಾಡಿದರೆ ಲಾಕ್ ಆಗಿರುವ ಮೆಸೇಜ್ ಗಳು ಪ್ರತ್ಯೇಕ ಫೆÇೀಲ್ಡರ್‍ನಲ್ಲಿ ಕಾಣಿಸಲಿದೆ.

  • Blogger Comments
  • Facebook Comments

0 comments:

Post a Comment

Item Reviewed: ವಾಟ್ಸಪ್ ಮತ್ತೊಂದು ಫೀಚರ್ ಪರಿಚಯಿಸುತ್ತಿದೆ : ಇದೀಗ ವಾಟ್ಸಪ್ ವಾಯ್ಸ್ ಸ್ಟೇಟಸ್ ಫೀಚರ್ ಈಗ ಎಲ್ಲಾ ಬಳಕೆದಾರರಿಗೂ ಲಭ್ಯ Rating: 5 Reviewed By: karavali Times
Scroll to Top