ಬಂಟ್ವಾಳ, ಮೇ 04, 2023 (ಕರಾವಳಿ ಟೈಮ್ಸ್) : 80 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯರು ಹಾಗೂ ಭಿನ್ನ ಚೇತನ ವ್ಯಕ್ತಿಗಳ ಅನುಕೂಲತೆಗಾಗಿ ಈ ಬಾರಿ ಚುನಾವಣಾ ಆಯೋಗ ಮನೆಯಿಂದಲೇ ಮತದಾನಕ್ಕೆ ಅವಕಾಶ ಕಲ್ಪಿಸಿದ್ದು, ಕಳೆದ ನಾಲ್ಕು ದಿನಗಳಿಂದ ಈ ವಿಭಾಗದ ಮತದಾರರ ಅಂಚೆ ಮತದಾನ ಪ್ರಕ್ರಿಯೆ ಮನೆಯಿಂದಲೇ ಸಾಗಿಬಂದಿದ್ದು, 205-ಬಂಟ್ವಾಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 1410 ಮತದಾರರ ಪೈಕಿ 1352 ಮತದಾರರು ಮನೆಯಿಂದಲೇ ಮತದಾನ ಮಾಡಿ ಒಟ್ಟು 95.88 ಶೇಕಡಾ ಮತದಾನವಾಗಿರುತ್ತದೆ.
25 ಸೆಕ್ಟರ್ ವ್ಯಾಪ್ತಿಯಲ್ಲಿ ಮೊದಲ ದಿನ 517, 2ನೇ ದಿನ 523, 3ನೇ ದಿನ 286 ಹಾಗೂ 4ನೇ ದಿನ 26 ಮತದಾರರು ಮತದಾನ ಮಾಡಿದ್ದಾರೆ. ಈ ಮತದಾನ ಪ್ರಕ್ರಿಯೆಗಾಗಿ ಚುನಾವಣಾ ಆಯೋಗದಿಂದ ನೇಮಿಸಲ್ಪಟ್ಟ ಸಿಬ್ಬಂದಿಗಳು ಅರ್ಹ ಮತದಾರರ ಮನೆಗೆ ತೆರಳಿ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.
0 comments:
Post a Comment